ಹಾಸನ: ಹುಬ್ಬಳ್ಳಿ ಜಿಲ್ಲೆಯಲ್ಲಿ ನಡೆದ ಗರ್ಭಿಣಿ ಮಾನ್ಯಳ ಮರ್ಯಾದೆ ಹತ್ಯೆ ಆರೋಪಿಗಳನ್ನು ಕೂಡಲೇ ಬಂಧಿಸಿ ಹಲ್ಲೆಗೊಳ್ಳಗಾಗಿರುವ ವಿವೇಕಾನಂದ ಕುಟುಂಬಕ್ಕೆ ಸರ್ಕಾರ ಸೂಕ್ತ ರಕ್ಷಣೆ ನೀಡಬೇಕು ಎಂದು ದ್ರಾವಿಡ ಆರ್ಮಿ ರಾಜ್ಯಾಧ್ಯಕ್ಷ ಸಂಪತ್ ಸುಬ್ಬಯ್ಯ ಒತ್ತಾಯಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳಿಯಲ್ಲಿ ಹಾಗೂ ನಾಗರೀಕ ಸಮಾಜ ತಲೆ ತಗ್ಗಿಸುವ ಘಟನೆಯಾಗಿದ್ದು, ಇದು ಒಂದು ಜಾತಿ ಭಯೊತ್ಪಾದನೆಯ ಕೃತ್ಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಘಟನೆ ನಡೆದು ಒಂದು ವಾರ ಕಳೆದರೂ ರಾಜ್ಯ ಸರ್ಕಾರದ ಗೃಹ ಸಚಿವರಾಗಲಿ, ಮಹಿಳಾ ಮತ್ತು ಮಕ್ಕಳ ಸಚಿವರಾಗಲಿ, ಮಹಿಳಾ ಆಯೋಗದ ಅಧ್ಯಕ್ಷರಾಗಲಿ, ಹುಬ್ಬಳ್ಳಿ-ಧಾರವಾಡ ಉಸ್ತುವಾರಿ ಸಚಿವರಾಗಲಿ ಹಾಗೂ ಹುಬ್ಬಳ್ಳಿಯ ಜಿಲ್ಲಾಡಳಿತವಾಗಲಿ ಹಲ್ಲೆಗೊಳಗಾಗಿ ನೊಂದ ಕುಟುಂಬಕ್ಕೆ ಸಾಂತ್ವನ ಹೇಳದಿರುವುದಕ್ಕೆ ತೀವ್ರ ಆಕ್ರೋಶ ಹೊರ ಹಾಕಿದರು.
ಬಾಂಗ್ಲಾದೇಶದಲ್ಲಿ ಹಿಂದೂ ಯುವಕನ ಹತ್ಯೆ ಖಂಡಿಸಿ ಹಿಂದೂಪರ ಸಂಘಟನೆಗಳು ದೇಶದ್ಯಂತ ಎಲ್ಲಾ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಿ ಖಂಡನೆ ವ್ಯಕ್ತಪಡಿಸಿದ್ದರು. ಆದರೆ ನಮ್ಮ ಕಣ್ಣೆದುರಲ್ಲೇ ಮರ್ಯಾದೆ ಹತ್ಯೆ ನಡೆದರೂ ಅದರ ಬಗ್ಗೆ ಯಾವೊಬ್ಬ ಹಿಂದೂ ಮುಖಂಡರು ಧ್ವನಿ ಎತ್ತದೆ ಇರುವುದು ವಿಷಾದನೀಯ ಎಂದರು.
ಘಟನೆಯಲ್ಲಿ ಭಾಗಿಯಾದ ಎಲ್ಲಾ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆಯ ವೈಫಲ್ಯ ಎದ್ದು ಕಾಣುತ್ತದೆ ಹಾಗೂ ಆರೋಪಿಗಳನ್ನು ಬಂಧಿಸಬೇಕು ಹಾಗೂ ಹಲ್ಲೆಗೊಳಗಾದ ವಿವೇಕಾನಂದ ಕುಟುಂಬಕ್ಕೆ ಸರ್ಕಾರ ಸೂಕ್ತ ರಕ್ಷಣೆ ಹಾಗೂ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಜಾತಿ ಪಿಡುಗು ತೊಲಗಲು ಸರ್ಕಾರ ಅಂತರ್ ಜಾತಿ ವಿವಾಹಗಳು ಹೆಚ್ಚಿನ ರೀತಿಯಲ್ಲಿ ನಡೆಯಬೇಕೆಂದು ಹೇಳಿಕೆ ನೀಡುತ್ತಾರೆ ಆದರೆ ಅಂತರ್ ಜಾತಿ ವಿವಾಹವಾದವರಿಗೆ ರಕ್ಷಣೆ ಕೊಡುವಲ್ಲಿ ಸೋತಿವೆ ಹಾಗೂ ಇಂತಹ ದುರ್ಘಟನೆಗಳು ಮರುಕಳುಹಿಸದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕೆಂದು ಆಗ್ರಹಿಸಿದರು.
ಸಂಘಟನೆಯ ಪದಾಧಿಕಾರಿಗಳಾದ ಪ್ರಸಾದ್, ಚಿದಾನಂದ, ಪ್ರೀತಂ ಸುರೇಶ್, ಅಶೋಕ್, ಮಂಜು ಹಾಗೂ ದೇವೇಂದ್ರ ಇದ್ದರು.
Dravidian Army state president Sampath Subbaiah demanded that the accused in the honor killing of a pregnant woman in Hubballi district be immediately arrested and the government should provide adequate protection to the Vivekananda family, who are facing assault.










