ಬೆಂಗಳೂರು: ಕಾನೂನು ಬಾಹಿರವಾಗಿ ಸ್ಥಾಪಿತವಾಗಿರುವ ಫಸ್ಟ್ ಸರ್ಕಲ್ ಸೊಸೈಟಿ ಟ್ರಸ್ಟ್ ಕಾನೂನು ಬದ್ಧವಾಗಿ ನೋಂದಣಿಯಾಗಿರುವ ನಮ್ಮ ಸಂಸ್ಥೆಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಫಸ್ಟ್ ಸರ್ಕಲ್ ಸೊಸೈಟಿ ಮತ್ತು ಫಸ್ಟ್ ಸರ್ಕಲ್ ಟ್ರಸ್ಟ್’ ಗಳ ಸಂಸ್ಥಾಪಕ ನಂದೀಶ್ ಎಸ್.ಆರ್. ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಕ್ಕಲಿಗ ಸಮುದಾಯದ ಉದ್ಯಮಿಗಳನ್ನು ಒಂದು ವೇದಿಕೆಯಡಿ ತರುವ ಸದುದ್ದೇಶದಿಂದ ಫಸ್ಟ್ ಸರ್ಕಲ್ ಸೊಸೈಟಿ ಮತ್ತು ಫಸ್ಟ್ ಸರ್ಕಲ್ ಟ್ರಸ್ಟ್ ಸ್ಥಾಪಿಸಲಾಗಿತ್ತು.
ಸಂಘದ ಯುವ ಸಮುದಾಯದ ಏಳಿಗೆಗಾಗಿ ಹಿರಿಯ ಆಧಿಕಾರಿಯಾಗಿದ್ದು, ಸಹಾಯ ಮಾಡುತ್ತೇನೆಂದು ಮುಂದೆ ಬಂದ ಜಯರಾಂ ರಾಯಪುರ ಎಂಬುವವರು ತಮ್ಮ ಪತ್ನಿ ಹಾಗೂ ಸಂಬಂಧಿಕರ ಹೆಸರಿನಲ್ಲಿ ಅವರ ಮನೆಯ ವಿಳಾಸದಲ್ಲಿ ಫಸ್ಟ್ ಸರ್ಕಲ್ ಸೊಸೈಟಿ ಟ್ರಸ್ಟ್ ನೋಂದಾಯಿಸಲಾಗಿದೆ.
ಈ ಮೂಲಕ ಜ. 9ರಿಂದ 11ರವರೆಗೆ ಅರಮನೆ ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಫಸ್ಟ್ ಸರ್ಕಲ್ ಸೊಸೈಟಿಯ ಹೆಸರು ಗುರುತು ದುರುಪಯೋಗ ಪಡಿಸಿಕೊಂಡು ಸದಸ್ಯತ್ವ ಶುಲ್ಕ ಸಂಗ್ರಹಿಸುವುದು, ಪ್ರಾಯೋಜಕತ್ವವನ್ನು ಆಹ್ವಾನಿಸುವುದು ಹಾಗೂ ವಾಣಿಜ್ಯ ಒಪ್ಪಂದಗಳಿಗೆ ಸಹಿ ಹಾಕುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ.
ಸಂಘದ ಏಳಿಗೆಗಾಗಿ ಶ್ರಮಿಸುತ್ತಿದ್ದೇನೆಂದು ಮುಂದೆ ಬಂದು ಅವರ ವೈಯಕ್ತಿಕ ಲಾಭಕ್ಕಾಗಿ ಸಮುದಾಯದ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದ್ದಾರೆ.
ಕಾನೂನು ಬದ್ಧವಲ್ಲದ ಜಯರಾಂ ರಾಯಪುರ ಅವರ ಸಂಬಂಧಿಕರು ಸ್ಥಾಪಿಸಿಕೊಂಡಿರುವ ಫಸ್ಟ್ ಸರ್ಕಲ್ ಸೊಸೈಟಿ ಟ್ರಸ್ಟ್ ನೊಂದಿಗೆ ಯಾವುದೇ ವ್ಯವಹಾರವನ್ನು ಸಾರ್ವಜನಿಕರು ಮಾಡಬಾರದು. ಫಸ್ಟ್ ಸರ್ಕಲ್ ಉದ್ಯಮಿ ಒಕ್ಕಲಿಗ ಎಂಬ ಹೆಸರಿನಲ್ಲಿ ನಡೆಸುತ್ತಿರುವ ಚಟುವಟಿಕೆಗಳು ಸಹಕಾರ ಇಲಾಖೆಯ ಸಹಕಾರ ಸಂಘಗಳ ಉಪ ನಿಬಂಧಕರ (ಉಪ ನೋಂದಣಾಧಿಕಾರಿ) ಆದೇಶದ ನೇರ ಉಲ್ಲಂಘನೆಯಾಗಿದೆ. ಸಾರ್ವಜನಿಕರು, ಪ್ರಾಯೋಜಕರು, ವಿತರಕರು, ಯಾವುದೇ ರೀತಿಯ ವ್ಯವಹಾರವನ್ನು ಈ ಟ್ರಸ್ಟ್ ನೊಂದಿಗೆ ಮಾಡಬಾರದು ಎಂದು ವಿನಂತಿಸಿದ್ದಾರೆ. 2022 ರಿಂದ ಯಶಸ್ವಿ ಕಾರ್ಯಕ್ರಮ ನಡೆಸಿಕೊಂಡು ಬಂದ ಉದ್ಯಮಿ ಒಕ್ಕಲಿಗ ಎಂಬ ಹೆಸರಿನಲ್ಲಿ ನಡೆಸಿದ ನಮ್ಮ ಸೊಸೈಟಿ, ಸದ್ಯಕ್ಕೆ ಎಲ್ಲಾ ಕಾರ್ಯ ಚಟುವಟಿಕೆ ಸ್ಥಗಿತಗೊಳಿಸಿದೆ. ಫಸ್ಟ್ ಸರ್ಕಲ್ ಸೊಸೈಟಿ ವಿರುದ್ಧ ಷಡ್ಯಂತ್ರ ರೂಪಿಸಿರುವ ಜಯರಾಂ ರಾಯಪುರ ಅವರ ಸಂಬಂಧಿಕರು ಸಹಕಾರ ಇಲಾಖೆ ಉಪ ನೋಂದಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಆ ದೂರು ಆಧರಿಸಿ ನ.12ರಂದು ಫಸ್ಟ್ ಸರ್ಕಲ್ ಸೊಸೈಟಿ ನವೀಕರಣ ಅನುಮೋದನೆಯಾಗಿದ್ದನ್ನು ಉಪ ನೋಂದಣಾಧಿಕಾರಿಗಳು ನ.28 ರಂದು ಹಿಂಪಡೆದಿದ್ದಾರೆ. ದೂರು ಸಂಬಂಧ ಜ.12 ರಂದು ತನಿಖೆ ನಿಗದಿಪಡಿಸಿದ್ದು, ಅಲ್ಲಿಯವರೆಗೆ ನಮ್ಮ ಫಸ್ಟ್ ಸರ್ಕಲ್ ಸೊಸೈಟಿಯ ಎಲ್ಲಾ ಕಾರ್ಯ ಚಟುವಟಿಕೆಗಳನ್ನು ಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.
ಫಸ್ಟ್ ಸರ್ಕಲ್ ನಲ್ಲಿದ್ದುಕೊಂಡು ಆಡಳಿತ ಮಂಡಳಿಯ ಗಮನಕ್ಕೆ ತಾರದೆ ಹಾಗೂ ಆಡಳಿತ ಮಂಡಳಿಯ ಒಪ್ಪಿಗೆ ಪಡೆಯದೆ ಫಸ್ಟ್ ಸರ್ಕಲ್ ಸೊಸೈಟಿ ಟ್ರಸ್ಟ್ ಸ್ಥಾಪಿಸಲಾಗಿದೆ.
ಇದರ ಹಿಂದೆ ನಮ್ಮ ಫಸ್ಟ್ ಸರ್ಕಲ್ ಸೊಸೈಟಿಯ ಸದ್ದುದೇಶ, ವಿಶ್ವಾಸಾರ್ಹತೆ ಮತ್ತು ಸಮುದಾಯ ಕೇಂದ್ರಿತ ಕಾರ್ಯಗಳನ್ನು ರಾಜಕೀಯ ಪ್ರೇರಿತ ವೈಯಕ್ತಿಕ ಮತ್ತು ವಾಣಿಜ್ಯ ಉದ್ವೇಶಗಳಿಗೆ ದುರುಪಯೋಗಪಡಿಸಿಕೊಳ್ಳುವ ಷಡ್ಯಂತ್ರವಾಗಿದೆ ಎಂದು ಅವರು ಆರೋಪಿಸಿದ್ದಾರೆ. ಸಾರ್ವಜನಿಕ ಹಿತಾಸಕ್ತಿಯ ಉದ್ದೇಶದಿಂದ ಫಸ್ಟ್ ಸರ್ಕಲ್ ಸೊಸೈಟಿಯ ಕಾರ್ಯಕಾರಿ ಸಮಿತಿಯ ಪರವಾಗಿ ಈ ಸ್ಪಷ್ಟನೆ ನೀಡಿದ್ದಾರೆ.
Jayaram Raipur, a senior officer of the Sangh’s youth community, has come forward to help, and the First Circle Society Trust has been registered at his home address in the name of his wife and relatives.










