11.1 C
Munich
Home ಮನರಂಜನೆ ಹೊಸವರ್ಷಕ್ಕೆ ಹೊಸದೊಂದು ವೆಬ್ ಸಿರೀಸ್ ‘JUST US’

ಹೊಸವರ್ಷಕ್ಕೆ ಹೊಸದೊಂದು ವೆಬ್ ಸಿರೀಸ್ ‘JUST US’

ಹೊಸವರ್ಷಕ್ಕೆ ಹೊಸದಂದು ವೆಬ್ ಸಿರೀಸ್ 'JUST US'

ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ನಿರ್ದೇಶಿಸಿರುವ ಪಿ.ಸಿ.ಶೇಖರ್ ಈಗ ಮೊದಲ ವೆಬ್ ಸಿರೀಸ್ ನಿರ್ದೇಶಿಸಿದ್ದಾರೆ. ಎಂಟು ಕಂತುಗಳ ಈ ವೆಬ್ ಸಿರೀಸ್ ಗೆ “Just us” ಎಂದು ನಾಮಕರಣ ಮಾಡಿದ್ದಾರೆ. ಜನವರಿ ಒಂದರಂದು ಹೊಸವರ್ಷದ ಮೊದಲ ದಿನ ಈ ವೆಬ್ ಸಿರೀಸ್ ನ ಮೊದಲನೇ ಕಂತು ಪ್ರಸಾರವಾಗಲಿದೆ. ಈ ಕುರಿತು ಮಾತನಾಡುವ ನಿರ್ದೇಶಕ ಪಿ.ಸಿ.ಶೇಖರ್, ‘ಇಷ್ಟು ದಿನ ಚಿತ್ರಗಳನ್ನು ನಿರ್ದೇಶಿಸುತ್ತಿದ್ದ ನಾನು, ಇದೇ ಮೊದಲ ಬಾರಿಗೆ ವೆಬ್ ಸಿರೀಸ್ ನಿರ್ದೇಶನ ಮಾಡಿದ್ದೇನೆ. ವಿವೇಕ್ ಹಾಗೂ ಮೇಘ ಜಾದವ್ ಎಂಬ ನೂತನ ಪ್ರತಿಭೆಗಳು ಈ ವೆಬ್ ಸಿರೀಸ್ ನಲ್ಲಿ ಅಭಿನಯಿಸಿದ್ದಾರೆ. “Just us”, ಒಂದು ವಿಭಿನ್ನ ಕಥೆ. ಎಂಜಿನಿಯರಿಂಗ್ ಮಾಡಬೇಕಾದರೆ ಬಿ.ಇ ಮಾಡಬೇಕು. ಡಾಕ್ಟರ್ ಆಗಬೇಕೆಂದರೆ ಎಂ.ಬಿ.ಬಿ.ಎಸ್ ಮಾಡಬೇಕು. ಕಾರು ಚಾಲನೆ ಮಾಡಬೇಕಾದರೂ ಸಹ ತರಭೇತಿ ಬೇಕು. ಹೀಗೆ ಎಲ್ಲದ್ದಕ್ಕೂ ಒಂದೊಂದು ರೀತಿ ಇದೆ. ಆದರೆ ಮದುವೆ ವಿಷಯಕ್ಕೆ ಬಂದಾಗ ಹುಡುಗ – ಹುಡುಗಿಯನ್ನು ಮನೆಯವರು ಮಾತನಾಡಿ ಎಂದು ಹೇಳಿದಾಗ ಏನು ಮಾತನಾಡಬೇಕೆಂದು ಹೆಚ್ಚಿನವರಿಗೆ ತಿಳಿದಿರುವುದಿಲ್ಲ. ಹಾಗಾಗಿ ನಾನು ಸೈಕಿಯಾರ್ಟಿಸ್ಟ್ ಹಾಗೂ ಮ್ಯಾರೇಜ್ ಕೌನ್ಸಿಲರ್ ಮುಂತಾದವರನ್ನು ಭೇಟಿಯಾಗಿ ಈ ಕುರಿತು ಚರ್ಚೆ ಮಾಡಿ ಕೆಲವು ವಿಷಯಗಳನ್ನು ಸಂಗ್ರಹ‌ಮಾಡಿ ಈ ವೆಬ್ ಸಿರೀಸ್ ಮೂಲಕ ಜನರಿಗೆ ತೋರಿಸುವ ಪ್ರಯತ್ನ ಮಾಡುತ್ತಿದ್ದೇನೆ’ ಎನ್ನುತ್ತಾರೆ ನಿರ್ದೇಶಕ ಪಿ.ಸಿ.ಶೇಖರ್.

‘ನಾನು ಮೈಸೂರಿನವನು.‌ ರಂಗಭೂಮಿ ಕಲಾವಿದ. ನಟನದಲ್ಲಿ ಕಲಿತಿದ್ದೇನೆ. ಧಾರಾವಾಹಿಗಳಲ್ಲೂ ನಟಿಸಿದ್ದೇನೆ. ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶಿಸಿರುವ ಪಿ.ಸಿ.ಶೇಖರ್ ನಿರ್ದೇಶನದ ವಿಭಿನ್ನ ಕಥಾಹಂದರ ಹೊಂದಿರುವ”Just us” ವೆಬ್ ಸಿರೀಸ್ ಬಹಳ ಚೆನ್ನಾಗಿ ಮೂಡಿಬಂದಿದೆ. ಈ ವೆಬ್ ಸಿರೀಸ್ ನಲ್ಲಿ ನಟಿಸಿರುವುದು ಖುಷಿಯಾಗಿದೆ’ ಎನ್ನುತ್ತಾರೆ ನಟ ವಿವೇಕ್.

‘ನಾನು ಸಾಫ್ಟ್‌ವೇರ್ ಎಂಜಿನಿಯರ್. ಐಟಿ ಉದ್ಯೋಗಿ. ನಟನೆ ನನ್ನ ಹವ್ಯಾಸ. ಸಾಕಷ್ಟು ಧಾರಾವಾಹಿ ಹಾಗೂ ಚಲನಚಿತ್ರಗಳಿಗೆ ಕಂಠದಾನ ಕಲಾವಿದೆಯಾಗೂ ಕಾರ್ಯನಿರ್ವಹಿಸಿದ್ದೇನೆ‌. ಪಿ.ಸಿ.ಶೇಖರ್ ನಿರ್ದೇಶನದ “ಮಹಾನ್” ಚಿತ್ರದಲ್ಲಿ ಸಣ್ಣ ಪಾತ್ರ ನಿರ್ವಹಿಸಿದ್ದೇನೆ. ಆ ಮೂಲಕ “JUST US” ವೆಬ್ ಸಿರೀಸ್ ನಲ್ಲಿ ನಟಿಸುವ ಅವಕಾಶ ದೊರಕಿತು. ಈ ವೆಬ್ ಸಿರೀಸ್ ನಲ್ಲಿ ಅಭಿನಯಿಸಿರುವುದು ಬಹಳ ಸಂತೋಷವಾಗಿದೆ’ ಎಂದು ನಟ ಮೇಘಾ ಜಾದವ್ ತಿಳಿಸಿದ್ದಾರೆ.

error: Content is protected !!