ಚನ್ನರಾಯಪಟ್ಟಣ: ಕತ್ತಿ ಹಿಡಿದ ಆಗಂತುಕನ ಮಧ್ಯರಾತ್ರಿ ಓಡಾಟಕ್ಕೆ ಬೆಚ್ಚಿದ ಜನರು!

ಚನ್ನರಾಯಪಟ್ಟಣ: ತಾಲ್ಲೂಕಿನ ದಂಡಿಗನಹಳ್ಳಿ ಹೋಬಳಿಯ ಶಿವಪುರ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ಮುಸುಕುಧಾರಿಯೊಬ್ಬ ಕತ್ತಿ ಹಿಡಿದು ಓಡಾಡಿರುವ ಘಟನೆ ಗ್ರಾಮಸ್ಥರಲ್ಲಿ ಭೀತಿಯನ್ನುಂಟುಮಾಡಿದೆ.

ಮಂಗಳವಾರ ರಾತ್ರಿ ಸುಮಾರು 1 ಗಂಟೆ ಸುಮಾರಿಗೆ ಕತ್ತಿ ಹಾಗೂ ಟಾರ್ಚ್ ಹಿಡಿದು ಸಂಚರಿಸುತ್ತಿದ್ದ ಆಗಂತುಕನ ದೃಶ್ಯಗಳು ಗ್ರಾಮದ ಮನೆಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿವೆ.

ಅಗಂತುಕನ ಓಡಾಟದಿಂದ ಗ್ರಾಮಸ್ಥರು ಆತಂಕಗೊಂಡಿದ್ದು, ಯಾವುದೇ ಅಹಿತಕರ ಘಟನೆ ಸಂಭವಿಸುವ ಭೀತಿಯಲ್ಲಿದ್ದಾರೆ. ಈ ಕುರಿತು ಗ್ರಾಮಸ್ಥರು ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿ, ಶೀಘ್ರವಾಗಿ ಆಗಂತುಕನ ಪತ್ತೆಹಚ್ಚಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಪೊಲೀಸರು ದೂರು ಪಡೆದು ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆಸುತ್ತಿದ್ದು, ಶಂಕಿತನ ಗುರುತು ಪತ್ತೆಗಾಗಿ ತನಿಖೆ ಆರಂಭಿಸಿದ್ದಾರೆ.

Channarayapatna: An incident of a masked man walking around with a sword in Shivapura village of Dandiganahalli hobli in the taluk late on Tuesday night has caused panic among the villagers.