ಬೇಲೂರು: ಕಾಫಿ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು: ಆರು ಮಂದಿ ಬಂಧನ

The police have succeeded in arresting thieves who were involved in coffee theft within the jurisdiction of Arehalli police station.

ಬೇಲೂರು: ತಾಲೂಕು ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾಫಿ ಕಳ್ಳತನದಲ್ಲಿ ತೊಡಗಿದ್ದ ಕಳ್ಳರನ್ನು ಪೊಲೀಸರು ಬಂಧಿಸಲು ಯಶಸ್ವಿಯಾಗಿದ್ದಾರೆ.

ವಿವಿಧೆಡೆ ಕಾಫಿ ಕಳವು ಮಾಡುತ್ತಿದ್ದ ಐವರು ಹಾಗೂ ಅವರಿಂದ ಕದ್ದ ಮಾಲು ಸ್ವೀಕಾರ ಮಾಡುತ್ತಿದ್ದ ಓರ್ವ ಸೇರಿ ಒಟ್ಟು ಆರು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.

ಇದೇ ತಂಡ ತಾಲೂಕಿನ ಹಲವು ಕಡೆ ರಾತ್ರಿ ವೇಳೆ ಕಾಫಿ ಕಳವು ಮಾಡಿತ್ತು. ಇದಲ್ಲದೆ ಮೊನ್ನೆಯಷ್ಟೇ ಅರೇಹಳ್ಳಿಯ ಉಲ್ಲಾಸ ನಗರದ ಜಗನ್ನಾಥಶೆಟ್ಟಿ ಎಂಬುವರು ಕಣದಲ್ಲಿ ಕಾಫಿ ಒಣಗಿ ಹಾಕಿ ಅಲ್ಲೇ ಕಾರಿನಲ್ಲಿ ಮಲಗಿ ಫಸಲು ಕಾಯುತ್ತಿದ್ದರು.

ಈ ವೇಳೆ ಎಂಟ್ರಿಕೊಟ್ಟ ಮೂವರಲ್ಲಿ ಇಬ್ಬರು ಕಾಫಿ ಬೇಳೆ ತುಂಬುತ್ತಿದ್ದರು. ಒಬ್ಬ ಜಗನ್ನಾಥಶೆಟ್ಟಿ ಅವರ ಕಾರಿನ ಹಿಂಭಾಗವೇ ಹೊಂಚು ಹಾಕಿ ನಿಂತಿದ್ದ. ಶೆಟ್ಟಿ ಅವರು ಕೆಳಗೆ ಇಳಿದು ಕಳ್ಳರನ್ನು ಹಿಡಿಯಲು ಪಯತ್ನ ಮಾಡಲು ಮುಂದಾದಾಗ ಹಿಂಬದಿಯಿಂದ ಬಲವಾಗಿ ಮಚ್ಚಿನಿಂದ ಅವರ ತಲೆಗೆ ಹೊಡೆದಿದ್ದ. ನಂತರ ಮೂವರು ಆರೋಪಿಗಳು ಗನ್ ಹಾಗೂ ಸುಮಾರು 60 ಸಾವಿರದಷ್ಟು ಕಾಫಿ ಬೇಳೆ ಸಮೇತ ಪರಾರಿಯಾಗಿದ್ದರು.

ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಎಸ್ಪಿ ಮೊಹಮದ್ ಸುಜೀತಾ ಅವರು ಹಳೇಬೀಡು ಇನ್ಸ್ಪೆಕ್ಟರ್ ಜಗದೀಶ್ ಹಾಗೂ ಇತರರ ನೇತೃತ್ವದಲ್ಲಿ ಮೂರು ತಂಡ ರಚನೆ ಮಾಡಿದ್ದರು. ಈ ತಂಡ ಒಟ್ಟು ಆರು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಎಲ್ಲರನ್ನೂ ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.

The police have succeeded in arresting thieves who were involved in coffee theft within the jurisdiction of Arehalli police station.