ಬೇಲೂರು: ಹನುಮ ಜಯಂತಿ ಅದ್ಧೂರಿ ಆಚರಣೆ: 20 ಸಾವಿರ ಮಂದಿಗೆ ಅನ್ನದಾನ

Hanuman Jayanti was also celebrated on a grand scale in the historic city of Belur. The colorful procession that began in the afternoon was flagged off by local MLA H.K. Suresh.

ಬೇಲೂರು: ಐತಿಹಾಸಿಕ ನಗರಿ ಬೇಲೂರಿನಲ್ಲೂ ಹನುಮ ಜಯಂತಿ ಅದ್ಧೂರಿಯಿಂದ ಜರುಗಿತು. ಮಧ್ಯಾಹ್ನ ಆರಂಭವಾದ ವರ್ಣರಂಜಿತ ಮೆರವಣಿಗೆಗೆ ಸ್ಥಳೀಯ ಶಾಸಕ ಹೆಚ್.ಕೆ.ಸುರೇಶ್ ಚಾಲನೆ ನೀಡಿದರು.

ಈ ವೇಳೆ ಹನುಮ ಜಯಂತೋತ್ಸವ ಸಮಿತಿಯಿಂದ ಬೃಹತ್ ಅನ್ನದಾನ ವ್ಯವಸ್ಥೆ ಮಾಡಲಾಗಿತ್ತು. ಸುಮಾರು15- 20 ಸಾವಿರ ಮಂದಿಗೆ ಅನ್ನದಾನ ಮಾಡಲಾಯಿತು.

ಈ ವೇಳೆ ಮಾತನಾಡಿದ ಸುರೇಶ್, ಕಳೆದ 12 ವರ್ಷದಿಂದ ನಿರಂತರವಾಗಿ ಪ್ರತಿ ವರ್ಷ ಹನುಮ ಜಯಂತಿ ಆಚರಿಸಿಕೊಂಡು ಬರಲಾಗುತ್ತಿದೆ.
ಈ ಸಂದರ್ಭದಲ್ಲಿ ಸಮಸ್ತ ಹಿಂದೂಗಳಿಗೆ ಹನುಮ ಜಯಂತಿ ಶುಭಾಶಯ ಕೋರಿದರು.

ಶ್ರೀ ಆಂಜನೇಯ ಸ್ವಾಮಿ ಎಲ್ಲರ ಕಷ್ಟ ದೂರ ಮಾಡಲಿ, ಸರ್ವರ ಬಾಳಲ್ಲಿ ಸುಖ, ಶಾಂತಿ, ನೆಮ್ಮದಿ ಕೊಡಲಿ, ನೆಮ್ಮದಿ ನೆಲೆಸಲಿ, ಸಕಾಲಕ್ಕೆ ಮಳೆ ಬೆಳೆ ಆಗಿ ಸರ್ವರಿಗೂ ಒಳಿತಾಗಲಿ ಎಂದು ಪ್ರಾರ್ಥನೆ ಮಾಡಿದರು.

ಇದೇ ವೇಳೆ ಮೆರವಣಿಗೆ ಸಂದರ್ಭದಲ್ಲಿ ಎಲ್ಲರೂ ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳುವ ಮೂಲಕ ಯಶಸ್ಸಿಗೆ ಸಹಕರಿಸಿ ಎಂದು ಮನವಿ ಮಾಡಿದರು. ಹನುಮ ಜಯಂತಿ ಸಮಿತಿಯವರು ತಮಗೆ ಜಾಗದ ಸಮಸ್ಯೆ ಇದೆ ಎಂದು ಹೇಳಿದ್ದಾರೆ.

ಮುಂದಿನ ವರ್ಷದೊಳಗೆ ಅದನ್ನು ಸರಿ ಪಡಿಸೋಣ ಎಂದು ಭರವಸೆ ನೀಡಿದರು. ಇದೇ ವೇಳೆ ಕಳೆದ 13 ವರ್ಷಗಳಿಂದ ಯಶಸ್ವಿಯಾಗಿ ಅದ್ಧೂರಿ ಹನುಮ ಜಯಂತಿ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.

ಇದೇ ವೇಳೆ ಹನುಮ ಜಯಂತಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ವಿವಿಧ ಕಲಾ ತಂಡಗಳ ನೃತ್ಯ ಹಾಗೂ ಬಗೆ ಬಗೆಯ ವಾದ್ಯಗಳ ಸದ್ದು ಎಲ್ಲರ ಗಮನ ಸೆಳೆದವು. ಮುನ್ನೆಚ್ಚರಿಕೆಯಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಎಸ್ಪಿ ಮೊಹಮದ್ ಸುಜೀತಾ ಹಾಗೂ ಅಧೀನ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿ ಉತ್ಸವ ಶಾಂತಿಯಿಂದ ಅಂತ್ಯಗೊಳ್ಳಲು ಪ್ರಯತ್ನ ಹಾಕಿದರು.

Hanuman Jayanti was also celebrated on a grand scale in the historic city of Belur. The colorful procession that began in the afternoon was flagged off by local MLA H.K. Suresh.