ಬೇಲೂರು: ಕಾಡಾನೆ ಹಾವಳಿ ವಿರುದ್ಧ ಗ್ರಾಮಸ್ಥರ ರಸ್ತೆತಡೆ ಪ್ರತಿಭಟನೆ

Condemning the increasing elephant menace in various places, various villagers, farmers and coffee growers from Kanaguppe and surrounding areas blocked the road and protested against the officials and the Forest Minister.

ಬೇಲೂರು: ತಾಲೂಕಿನ ವಿವಿಧೆಡೆ ಹೆಚ್ಚಾಗಿರುವ ಆನೆಗಳ ಹಾವಳಿ ಖಂಡಿಸಿ ಕಣಗುಪ್ಪೆ ಅನುಗಟ್ಟ ಸೇರಿ ವಿವಿಧ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ರೈತರು, ಕಾಫಿ ಬೆಳೆಗಾರರು ರಸ್ತೆ ತಡೆ ನಡೆಸಿ ಅಧಿಕಾರಿಗಳು, ಅರಣ್ಯ ಸಚಿವರ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು.

ಅರೇಹಳ್ಳಿ ಹೋಬಳಿಯಲ್ಲಿ 30 ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಅನುಘಟ್ಟ ಗ್ರಾಪಂ ವ್ಯಾಪ್ತಿಯಲ್ಲಿ ಬೀಡು ಬಿಟ್ಟಿದ್ದು, ಅವುಗಳನ್ನು ಓಡಿಸುವುದಾಗಲಿ, ಅವುಗಳಿಂದ ನಮಗೆ ರಕ್ಷಣೆ ನೀಡುವುದಕ್ಕೆ ಅರಣ್ಯ ಇಲಾಖೆ ವಿಫಲವಾಗಿದೆ ಎಂದು ದೂರಿದರು.

ಈ ವೇಳೆ ಮಾತನಾಡಿದ ಗ್ರಾಮಸ್ಥ, ಕೆ.ಜಿ ಕುಮಾರ್, ಅನುಘಟ್ಟ ಭಾಗದಲ್ಲಿ ಸುಮಾರು 20 ದಿನಗಳಿಂದ 30ಕ್ಕೂ ಹೆಚ್ಚು ಕಾಡಾನೆಗಳು ಈ ಭಾಗದಲ್ಲಿ ದಾಳಿ ಮಾಡಿ ನೂರಕ್ಕೂ ಹೆಚ್ಚು ಎಕರೆ ಭತ್ತ, ಕಾಫಿ, ಶುಂಠಿ, ತೆಂಗು ಇತರೆ ಬೆಳೆಗಳನ್ನು ಸಂಪೂರ್ಣ ನಾಶ ಮಾಡಿವೆ.

ಇಷ್ಟೆಲ್ಲಾ ಸಮಸ್ಯೆ ಇದ್ದರೂ ಅರಣ್ಯ ಇಲಾಖೆಯ ಒಬ್ಬ ಅಧಿಕಾರಿಯೂ ಇತ್ತ ಸುಳಿದಿಲ್ಲ. ಸಾವು-ನೋವಾದಾಗ ಮಾತ್ರ ಬರುವ ಅರಣ್ಯ ಇಲಾಖೆ ಅಧಿಕಾರಿಗಳು, ಬೆಳೆಗಾರರ ಸಂಕಷ್ಟ ಅರಿಯಲು ಕನಿಷ್ಟ ಸೌಜನ್ಯಕ್ಕೂ ಈ ಭಾಗದಲ್ಲಿ ಪರಿಶೀಲನೆ ಮಾಡಿಲ್ಲ. ಕೂಡಲೇ ಆನೆಗಳನ್ನು ಸ್ಥಳಾಂತರ ಮಾಡಬೇಕು ಎಂದು ಒತ್ತಾಯಿಸಿದರು.

ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಅದ್ಧೂರಿ ಚೇತನ್ ಹಾಗೂ ರೈತ ಸಂಘದ ಅಧ್ಯಕ್ಷ ಭೋಗ ಮಲ್ಲೇಶ್ ಮಾತನಾಡಿ, ಅನುಘಟ್ಟ ಗ್ರಾಪಂ ವ್ಯಾಪ್ತಿಯ ಕಣಗುಪ್ಪೆ, ಬೆಳ್ಳಾವರ, ಹಿರೆ ಹಸಡೆ, ಚಿಕ್ಕ ಹಸಡೆ, ಡೋಲನಮನೆ, ನೇರಳಕಟ್ಟೆ ಭಾಗದಲ್ಲಿ ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅಧಿಕಾರಿಗಳು ಕೇವಲ ಕಣ್ಣೊರೆಸುವ ನಾಟಕ ಆಡುತ್ತಿದ್ದಾರೆ ಎಂದು ಕಿಡಿ ಕಾರಿದರು.

ಕಾಡಾನೆ ಸಮಸ್ಯೆ ಬಗ್ಗೆ ಡಿಸಿ, ಇತರೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಸ್ಪಂದಿಸಿಲ್ಲ. ಆನೆ ಆಶ್ರಯಧಾಮ ನಿರ್ಮಾಣ ಭರವಸೆ ಹಾಗೆಯೇ ಇದೆ ಎಂದರು.

ಅರೇಹಳ್ಳಿ ಹೋಬಳಿ ಕಾಫಿ ಬೆಳೆಗಾರ ಸಂಘದ ಅಧ್ಯಕ್ಷ ಶಾರೀಬ್ ಫರ್ಹಾನ್, ವೀರಭದ್ರಶೆಟ್ಟಿ, ಬಸವರಾಜ್ ಮಾತನಾಡಿದರು. ಈ ವೇಳೆ ಸತೀಶ್, ಚಂದನ್, ವೆಂಕಟೇಶ್ ದೇವರಾಜು, ಮಂಜುನಾಥ್, ಶಿವಶಂಕರಪ್ಪ, ಗ್ರಾಪಂ ಅಧ್ಯಕ್ಷೆ ಲಲಿತಾ, ಇಂದಿರಾ, ಲೋಹಿತ್, ವಿನಯ್, ರಾಮಶೆಟ್ಟಿ ತೇಜಸ್, ವೆಂಕಟೇಶ್, ರವಿ ಇದ್ದರು.

Condemning the increasing elephant menace in various places, various villagers, farmers and coffee growers from Kanaguppe and surrounding areas blocked the road and protested against the officials and the Forest Minister.