10.1 C
Munich
Home ಕ್ರೈಮ್‌ ಹಾಸನ: ಟಿಪ್ಪು ಲಾಯರ್ ಖ್ಯಾತಿಯ ವಕೀಲ ಇಮ್ರಾನ್ ಹೃದಯಾಘಾತಕ್ಕೆ ಬಲಿ: ಮೃತಪಟ್ಟು ಒಂದು ದಿನ ಕಳೆದರೂ...

ಹಾಸನ: ಟಿಪ್ಪು ಲಾಯರ್ ಖ್ಯಾತಿಯ ವಕೀಲ ಇಮ್ರಾನ್ ಹೃದಯಾಘಾತಕ್ಕೆ ಬಲಿ: ಮೃತಪಟ್ಟು ಒಂದು ದಿನ ಕಳೆದರೂ ಗಮನಕ್ಕೆ ಬಾರದ ಸಾವು- ಸಾಕು ನಾಯಿಯ ಆಕ್ರಂದನದಿಂದ ಬೆಳಕಿಗೆ

Hassan: Lawyer Imran Ahmed, known as Tipu Lawyer, has passed away at his residence due to a heart attack.

ಹಾಸನ: ವಕೀಲ, ಟಿಪ್ಪು ಲಾಯರ್ ಎಂದು ಹೆಸರಾಗಿದ್ದ ಇಮ್ರಾನ್ ಅಹಮದ್ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ನಗರದ ಚನ್ನಪಟ್ಟಣ ಹೌಸಿಂಗ್ ಬೋರ್ಡ್ ಕಾಲನಿ ಮನೆಯಲ್ಲಿ ಏಕಾಂಗಿಯಾಗಿ ಜೀವನ ನಡೆಸುತ್ತಿದ್ದ ಅವರು ಮುದ್ದಿನಿಂದ ಸಾಕಿದ್ದ ನಾಯಿಯೇ ಅವರ ಸಂಗಾತಿಯಾಗಿತ್ತು.

ಅವರು ಗುರುವಾರದಿಂದ ಮನೆಯಿಂದ ಆಚೆ ಬಂದಿರಲಿಲ್ಲ. ಶುಕ್ರವಾರ ಸಂಜೆ ಅವರ ನಾಯಿ ತೀವ್ರವಾಗಿ ಬೊಗುಳಿ ಗಲಾಟೆ ಮಾಡಲಾರಂಭಿಸಿತ್ತು. ಇದರಿಂದ ಅನುಮಾನಗೊಂಡ ನೆರೆಯವರು ಮನೆಯ ಬಾಗಿಲು ಬೋಲ್ಟ್ ಮುರಿದು ಒಳಗೆ ಹೋಗಿ ನೋಡಿದಾಗ ಇಮ್ರಾನ್ ಮೃತ ಸ್ಥಿತಿಯಲ್ಲಿ ಪತ್ತೆಯಾದರು.

ಆಸ್ಪತ್ರೆಯಲ್ಲಿ ಶವದ ಪರಿಶೀಲನೆ ನಡೆಸಿದ ವೈದ್ಯರು, ಅವರು ಹೃದಯಾಘಾತಕ್ಕೆ ಬಲಿಯಾಗಿರುವುದನ್ನು ದೃಢೀಕರಿಸಿದರು.

ಸಾಮಾಜಿಕ ಕಾಳಜಿಯ ವಿಷಯಗಳು ಹಾಗೂ ಅಲ್ಪಸಂಖ್ಯಾತ ಸಮುದಾಯದ ಅಶಕ್ತರ ಪ್ರಕರಣಗಳನ್ನು ನಡೆಸುವ ಮೂಲಕ ಅವರು ಟಿಪ್ಪು ಲಾಯರ್ ಎಂದೇ ಖ್ಯಾತರಾಗಿದ್ದರು.

ಶನಿವಾರ ವಕೀಲರ ಸಂಘದಿಂದ ಶ್ರದ್ಧಾಂಜಲಿ ಅರ್ಪಿಸಿದ್ದು, ವಕೀಲರು ಕಲಾಪದಿಂದ ಹೊರಗುಳಿದಿದ್ದಾರೆ. ಇಂದು ಮಧ್ಯಾಹ್ನ ಅಂತ್ಯಕ್ರಿಯೆ ಜರುಗಲಿದೆ.

error: Content is protected !!