11.3 C
Munich
Home News ಸಿಎಂ ಗಾದಿ ಬಯಸುತ್ತಿರುವ ಡಿಕೆಶಿ ಮನೆಯಲ್ಲಿ ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ಪಾದುಕೆ ಪೂಜೆ!

ಸಿಎಂ ಗಾದಿ ಬಯಸುತ್ತಿರುವ ಡಿಕೆಶಿ ಮನೆಯಲ್ಲಿ ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ಪಾದುಕೆ ಪೂಜೆ!

Amidst the heated debate over a change of CM in state politics, the worship of Jenukal Siddeshwaraswamy Paduke of Arasikere taluk at Deputy Chief Minister D.K. Shivakumar's house in Bangalore last night has sparked a huge debate.

ಹಾಸನ: ರಾಜ್ಯ ರಾಜಕಾರಣದಲ್ಲಿ ಸಿಎಂ ಬದಲಾವಣೆ ಚರ್ಚೆ ಜೋರಾದ ಬೆನ್ನಲ್ಲೇ ಅರಸೀಕೆರೆ ತಾಲ್ಲೂಕಿನ ಜೇನುಕಲ್‌ ಸಿದ್ದೇಶ್ವರಸ್ವಾಮಿ ಪಾದುಕೆ ಪೂಜೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಬೆಂಗಳೂರಿನ ಮನೆಯಲ್ಲಿ ಕಳೆದ ರಾತ್ರಿ ನಡೆದಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ.

ಜು. 26 ರಂದು ದೇವಸ್ಥಾನಕ್ಕೆ ಭೇಟಿ ನೀಡಿದ್ದ ಡಿ.ಕೆ.ಶಿವಕುಮಾರ್‌ ಅವರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದರು. ಈ ನಡುವೆ ಕಳೆದ ರಾತ್ರಿ ಬೆಂಗಳೂರಿನ ಅವರ ನಿವಾಸದಲ್ಲಿ ದೇವಸ್ಥಾನದ ಅರ್ಚಕರು ವಿಶೇಷ ಪೂಜೆ ನೆರವೇರಿಸಿದ್ದು ಸಂಕಲ್ಪ ಸಿದ್ಧಿಸುತ್ತದೆಯೇ ಎಂಬ ನಿರೀಕ್ಷೆಗಳು ಗರಿಗೆದರಿವೆ.

ಈ ಬಗ್ಗೆ ಅರ್ಚಕರು ಮಾತನಾಡಿ, ಸಿದ್ದೇಶ್ವರ ಸ್ವಾಮಿಗೆ ಲಕ್ಷಾಂತರ ಭಕ್ತರಿದ್ದಾರೆ. ಡಿ.ಕೆ.ಶಿವಕುಮಾರ್‌ ಸಹ ಒಬ್ಬ ದೈವಭಕ್ತರು. ದಸರಾ ಸಂದರ್ಭದ ಒಂಬತ್ತು ದಿನ, ಹುಣ್ಣಿಮೆ ಹಾಗು ಜಾತ್ರೆ ಸಮಯ ಹೊರತುಪಡಿಸಿ ಸಿದ್ದೇಶ್ವರ ಸ್ವಾಮಿ ಭಕ್ತರ ಮನೆಗೆ ಸಂಚರಿಸುತ್ತಾನೆ. ಯಾವುದೇ ಭಕ್ತರ ಮನೆಗೆ ದೇವರ ಪಾದುಕೆ ಕರೆದುಕೊಂಡು ಹೋಗಬೇಕೆಂದರೆ ಎರಡು ತಿಂಗಳ ಮೊದಲೇ ಚೀಟಿ ಬರೆಸಬೇಕು.

ಡಿ.ಕೆ.ಶಿವಕುಮಾರ್‌ ಅವರು ಎರಡು ತಿಂಗಳ ಹಿಂದೆ ಚೀಟಿ ಬರೆಸಿದ್ದರು. ಅದರಂತೆ ಅವರ ಮನೆಯಲ್ಲಿ ಪೂಜೆ ನೆರವೇರಿದೆ. ಅವರು ಏನು ಸಂಕಲ್ಪ ಮಾಡಿಕೊಂಡಿದ್ದರೆಂಬುದು ಗೊತ್ತಿಲ್ಲ. ಸಂಕಲ್ಪ ಪೂಜೆ ಹಾಗು ಮಹಾಂಗಳಾರತಿ ಮಾಡಿ ಬಂದಿದ್ದೇವೆ ಎಂದು ಅರ್ಚಕರು ತಿಳಿಸಿದರು.

error: Content is protected !!