ಹಾಸನ: ಈ ದೇಶಕ್ಕೆ ಸಂದೇಶ ನೀಡಿದ ಮುಂಚೂಣಿ ನಾಯಕ ಸರ್ದಾ‌ರ್ ವಲ್ಲಭಭಾಯಿ ಪಟೇಲ್ : ಶಾಸಕ ಹೆಚ್.ಕೆ. ಸುರೇಶ್

ಹಾಸನ: ಈ ದೇಶಕ್ಕೆ ಉತ್ತಮ ಸಂದೇಶ ನೀಡಿದ ಮುಂಚೂಣಿ ನಾಯಕ, ಮುಂದಿನ ಪೀಳಿಗೆಗೆ ನಾಂದಿ ಬರೆದವರು, ಯುವಕರಿಗೆ ಸ್ಫೂರ್ತಿದಾಯಕನಾದ ಮಹಾನ್ ವ್ಯಕ್ತಿತ್ವ ಎಂದರೆ ಸರ್ದಾರ್ ವಲ್ಲಭಭಾಯಿ ಪಟೇಲ್ ಎಂದು ಬೇಲೂರು ಕ್ಷೇತ್ರದ ಶಾಸಕ ಹುಲ್ಲಳ್ಳಿ ಸುರೇಶ್ ಬಣ್ಣಿಸಿದರು.

ನಗರದ ರೈಲ್ವೆ ನಿಲ್ದಾಣದ ಬಳಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಎನ್.ಎಸ್.ಎಸ್. ಘಟಕ, ವಿಶ್ವವಿದ್ಯಾಲಯ, ನೌಟ್ ಅಂಡ್ ಗೈಡ್ಸ್, ಎನ್.ಸಿ.ಸಿ. ಹಾಗೂ ಯುವಕ ಸಂಘ ಮತ್ತು ಯುವತಿ ಮಂಡಳಿ ಇವರ ಸಂಯುಕ್ತಾಶ್ರಯದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಸರ್ದಾರ್ ವಲ್ಲಬಾಯಿ ಪಟೇಲ್ ಅವರ ೧೫೦ನೇ ಜನ್ಮ ದಿನೋತ್ಸವ ಪ್ರಯುಕ್ತ ಯೂನಿಟಿ ಮಾರ್ಚ್ ಜಿಲ್ಲಾ ಮಟ್ಟದ ಪಾದಯಾತ್ರೆಯನ್ನು ಧ್ವಜಾ ತೋರಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು,

ಈ ದೇಶಕ್ಕೆ ಸಂದೇಶ ನೀಡಿದ ಮುಂಚೂಣಿ ನಾಯಕ, ಮುಂದಿನ ಪೀಳಿಗೆಗೆ ನಾಂದಿ ಬರೆದವರು, ಯುವಕರಿಗೆ ಸ್ಫೂರ್ತಿದಾಯಕನಾದ ಮಹಾನ್ ವ್ಯಕ್ತಿತ್ವ ಸರ್ದಾರ್ ವಲ್ಲಭಭಾಯಿ ಪಟೇಲ್. ೧೫೦ನೇ ವರ್ಷಾಚರಣೆಯನ್ನು ದೇಶಾದ್ಯಂತ ಏಕತಾ ನಡಿಗೆ ಎಂದು ಆಚರಿಸಲಾಗುತ್ತಿದೆ. ಈ ಮಹತ್ತರ ಕಾರ್ಯಕ್ರಮವನ್ನು ರೂಪಿಸಿ ದೇಶದ ಮಟ್ಟಕ್ಕೆ ಕೊಂಡೊಯ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಧನ್ಯವಾದ ಸಲ್ಲಿಸಬೇಕು” ಎಂದು ಹೇಳಿದರು.

ಹಾಸನ ಜಿಲ್ಲೆಗೆ ತನ್ನದೇ ಆದ ಐತಿಹಾಸಿಕ ಮಹತ್ವವಿದೆ. ಹೊಯ್ಸಳರ ಆಡಳಿತ, ಬೇಲೂರು-ಶ್ರವಣಬೆಳಗೊಳದಂತಹ ಐತಿಹಾಸಿಕ ಕೇಂದ್ರಗಳು, ಸಾವಿರಾರು ವರ್ಷಗಳ ವಾಸ್ತುಶಿಲ್ಪ ಮತ್ತು ಸಂಸ್ಕೃತಿಯ ಪರಂಪರೆ ಇವೆಲ್ಲವು ಹಾಸನದ ಗುರುತು.

ಏಕತಾ ನಡಿಗೆ ಎಂದರೆ ರಾಷ್ಟ್ರಕ್ಕಾಗಿ ಒಟ್ಟಾಗಿ ನಡೆಯುವ ಸಂಕೇತ?ನಮ್ಮ ಸಮಾಜಮುಖಿ ದೃಷ್ಟಿಯ ಪ್ರತಿರೂಪ. ಈ ನಡಿಗೆ ದೇಶದ ಏಕತೆ ಮತ್ತು ಬಲವನ್ನು ವಿಶ್ವಕ್ಕೆ ತೋರಿಸುವ ಉದಾಹರಣೆ ಎಂದರು. ಏಕತಾ ನಡಿಗೆ (ಯುನಿಟಿ ಮಾರ್ಚ್)ಎಂಬುದಾಗಿ ಇಡೀ ದೇಶದಾಧ್ಯಂತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮ ರೂವಾರಿ ದೇಶದ ಪ್ರಧಾನಿ ಆಗಿರುವ ನರೇಂದ್ರ ಮೋದಿಯವರಿಗೆ ಧನ್ಯವಾದ ಅರ್ಪಣೆ ಮಾಡಬೇಕಾಗಿದೆ. ದೇಶಕ್ಕೆ ದುಡಿದ ಮಹಾನ್ ನಾಯಕರನ್ನು ಅದರಲ್ಲೂ ವಿಶೇಷವಾಗಿ ಸರ್ದಾರ್ ವಲ್ಲಬಾಯಿ ಪಟೇ ಅವರನ್ನು ಭಾರತದ ವಕೀಲರಾಗಿ ನ್ಯಾಯವನ್ನು ಕೊಟ್ಟವರು. ಪ್ರಧಾನಿಯಾಗಿ, ಗೃಹ ಸಚಿವರಾಗಿ ಈ ದೇಶಕ್ಕೆ ಸಂದೇಶ ಕೊಟ್ಟವರು. ಮುಂದಿನ ಪೀಳಿಗೆಗೆ ಒಂದು ನಾಂದಿ ಬರೆದಂತಹ ಮಹಾನ್ ನಾಯಕ ಪಟೇಲ್ ಅವರು ಎಂದು ಹೇಳಿದರು.

ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಮಾತನಾಡಿ, ಸರ್ದಾರ್ ಪಟೇಲ್ ಏಕೆ ಉಕ್ಕಿನ ಮನುಷ್ಯರು ಎಂಬುದು ಅವರ ಕೃತಿಗಳಲ್ಲಿ ಸ್ಪಷ್ಟ. ೫೬೦ಕ್ಕೂ ಹೆಚ್ಚು ಸಂಸ್ಥಾನಗಳನ್ನು ಒಂದೇ ಭಾರತದಲ್ಲಿ ಒಂದಾಗಿಸಿ ಸಮಗ್ರ ರಾಷ್ಟ್ರದ ನಿರ್ಮಾಣ ಮಾಡಿದ ಮಹಾನ್ ನಾಯಕರು.

ಇಂದು ಭಾರತವೆಂಬ ಬಲಿಷ್ಠ ಏಕೀಕೃತ ರಾಷ್ಟ್ರವನ್ನು ನಾವು ಹೆಮ್ಮೆಯಿಂದ ನೋಡುತ್ತಿದ್ದರೆ, ಅದರ ಮೂಲದಲ್ಲಿ ಪಟೇಲ್ ಅವರ ದೃಢ ನಾಯಕತ್ವವಿದೆ” ಎಂದು ನೆನಪಿಸಿದರು.”ಯುವಕರು ಪಟೇಲ್ ಅವರ ಗುಣಗಳನ್ನು ಶಿಸ್ತು, ದೃಢತೆ ಮತ್ತು ನಾಯಕತ್ವವನ್ನು ಮೈಗೂಡಿಸಿಕೊಳ್ಳಬೇಕು. ದೇಶದ ಪ್ರತಿಯೊಬ್ಬರೂ ಅವರಿಗೆ ಚಿರಋಣಿಗಳು” ಎಂದು ಸಲಹೆ ನೀಡಿದರು.

ಒಬ್ಬ ಬಲಿಷ್ಠ ನಾಯಕ, ನಾಯಕತ್ವ ಎಂದರೇ ಏನು? ನಾಯಕತ್ವದ ಗುಣ ಎಂದರೇ ಏನು ಎಂಬುದನ್ನು ತೋರಿಸಿಕೊಟ್ಟವರು. ನಮ್ಮ ಮಕ್ಕಳು ಅದರಲ್ಲೂ ಯುವ ಜನತೆ ನೆನಪನ್ನು ಇಟ್ಟುಕೊಳ್ಳಬೇಕು. ನಮ್ಮ ದೇಶವನ್ನು ಕಟ್ಟಿ ಬಲಿಷ್ಠ ಮಾಡಿದ್ದಾರೆ. ಇಂದಿನ ಮಕ್ಕಳು ಅವರ ಆದರ್ಶವನ್ನು ಮೈಗೂಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್. ಪೂರ್ಣಿಮಾ, ಮೈ ಭಾರತ್ ಜಿಲ್ಲಾ ಯುವ ಅಧಿಕಾರಿ ಪಿ.ಆಖಿಲ್, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಆನಂದ್ ಮೂರ್ತಿ, ಬಿಜೆಪಿ ಜಿಲ್ಲಾ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ಅಪರ ಪೊಲೀಸ್ ಅಧೀಕ್ಷಕ ಕೆ.ಎಂ. ತಮ್ಮಯ್ಯ, ಕಲಾವಿದ ಬಿ.ಟಿ. ಮಾನವ ಸೇರಿದಂತೆ ಹಲವರು ಭಾಗವಹಿಸಿದರು. ಸಮಾಜನೇವಕ ಲಕ್ಷ್ಮೀನಾರಾಯಣ್ ಕಾರ್ಯಕ್ರಮವನ್ನು ನಿರೂಪಿಸಿದರು.