ಹೊಳೆನರಸೀಪುರ: ಹಾಸನ ಲೋಕಸಭಾ ಸದಸ್ಯ, ಯುವ ನಾಯಕ ಶ್ರೇಯಸ್ ಎಂ.ಪಟೇಲ್ ಅವರ ಜನ್ಮದಿನದ ಪ್ರಯುಕ್ತ, ಸಂಸದರ ತಾಯಿ ಕಾಂಗ್ರೆಸ್ ಮುಖಂಡರಾದ ಅನುಪಮ ಮಹೇಶ್ ಅವರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿಂದು ಒಳ ಮತ್ತು ಹೊರ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಿ,ರೋಗಿಗಳಿಗೆ ಬೇಗ ಗುಣಮುಖರಾಗಿ ಆರೋಗ್ಯವಂತರಾಗಿ ಎಂದು ಶುಭಕೋರಿದರು.

ಈ ಮೂಲಕ ಶ್ರೇಯಸ್ ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸಂಭ್ರಮದಿಂದ ಆಚರಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಟಿ.ಲಕ್ಷ್ಮಣ್,ಕಾಂಗ್ರೆಸ್ ಮುಖಂಡರಾದ ಕೆ.ಆರ್.ಸುದರ್ಶನ ಕುಮಾರ್ (ಬಾಬು),ಮುಜಾಹಿದ್ ಪಾಷ ಸೇರಿದಂತೆ ಶ್ರೇಯಸ್ ಪಟೇಲ್ ಅಭಿಮಾನಿಗಳು,ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.










