12.9 C
Munich
Home ಜಿಲ್ಲೆ ಹಾಸನ: ಸಂಸದ ಶ್ರೇಯಸ್ ಪಟೇಲ್ ಹುಟ್ಟುಹಬ್ಬ -ಯುವ ಕಾಂಗ್ರೆಸ್ ವತಿಯಿಂದ ವಿವಿಧ ಕಾರ್ಯಕ್ರಮ

ಹಾಸನ: ಸಂಸದ ಶ್ರೇಯಸ್ ಪಟೇಲ್ ಹುಟ್ಟುಹಬ್ಬ -ಯುವ ಕಾಂಗ್ರೆಸ್ ವತಿಯಿಂದ ವಿವಿಧ ಕಾರ್ಯಕ್ರಮ

ಹಾಸನ: ಸಂಸದ ಶ್ರೇಯಸ್ ಪಟೇಲ್ ಹುಟ್ಟು ಹಬ್ಬದ ಅಂಗವಾಗಿ ನಗರದಲ್ಲಿ ವಿವಿಧ ಸೇವಾ ಕಾರ್ಯಕ್ರಮ ಮಾಡುವ ಮೂಲಕ ಅರ್ಥಪೂರ್ಣ ಹುಟ್ಟುಹಬ್ಬಕ್ಕೆ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಂಜಿತ್ ಗೊರೂರು ಹಾಗೂ ಯುವ ಕಾರ್ಯಕರ್ತರು ಸಾಕ್ಷಿಯಾದರು.

ಬೆಳಗ್ಗೆ ನೀರುವಾಗಿಲು ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಈಡುಗಾಯಿ ಒಡೆದರು.
ನಂತರ ದರ್ಗಾದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಹಿಮ್ಸ್
ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಿದರು. ಬಳಿಕ ಅಂಧ ಮಕ್ಕಳ ಶಾಲೆ, ವೃದ್ಧಾಶ್ರಮಗಳಲ್ಲಿ ಅನ್ನದಾನ, ಬೀದಿ ಬದಿ ವಾಸಿಗಳಿಗೆ ಹಾಸಿಗೆ ಹೊದಿಕೆ ವಿತರಿಸುವ ಮೂಲಕ ಇಡೀ ದಿನವನ್ನು ಸೇವಾ ದಿನವಾಗಿ ಆಚರಿಸಿದರು.

ಈ ವೇಳೆ ಮಾತನಾಡಿದ ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಂಜಿತ್ ಗೊರೂರು, ಶ್ರೇಯಸ್ ಪಟೇಲ್ ಅವರ ೩೪ ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಯುವ ಕಾಂಗ್ರೆಸ್ ವತಿಯಿಂದ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ, ಜನಸೇವೆಗಾಗಿ ತಮ್ಮ ಜೀವನ ಮುಡುಪಾಗಿಟ್ಟಿರುವ ಶ್ರೇಯಸ್ ಪಟೇಲ್ ಅವರಿಗೆ ದೇವರು ಆಯಸ್ಸು ಆರೋಗ್ಯದ ಜೊತೆಗೆ ಇನ್ನಷ್ಟು ದೊಡ್ಡ ಹುದ್ದೆ ಗಳಿಸುವ ಶಕ್ತಿ ಕೊಟ್ಟು ಇನ್ನಷ್ಟು ಜನ ಸೇವೆಗೆ ಅವಕಾಶ ಮಾಡಿಕೊಡಲಿ ಎಂದು ಶುಭ ಹಾರೈಸಿದರು.

ಚಿಕ್ಕ ವಯಸ್ಸಿನಲ್ಲೇ ಸಂಸದರಾಗಿ ಅಪಾರ ಜನಸೇವೆ ಮೂಲಕ ಜನಮನ್ನಣೆ ಗಳಿಸಿರುವ ಶ್ರೇಯಸ್ ಅವರು ಸಂಸದರಾದ ಆರಂಭದಿಂದಲೂ ಪ್ರತಿಯೊಬ್ಬರ ಕಷ್ಟ ಆಲಿಸುವ ಮೂಲಕ ಅದಕ್ಕೊಂದು ಪರಿಹಾರ ಕಲ್ಪಿಸಲು ಕೆಲಸ ಮಾಡುತ್ತಿದ್ದಾರೆ ಎಂದರು.

ಸಂಸದರ ಬರ್ತ್‌ಡೇಯನ್ನು ಸೇವಾ ದಿನವನ್ನಾಗಿ ಆಚರಿಸಿ ದೇವಾಲಯ, ದರ್ಗಾ, ಚರ್ಚ್‌ಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ರಸ್ತೆ ಬದಿ ವಾಸಿಗಳಿಗೆ ಹಾಸಿಗೆ ಹೊದಿಕೆ ವಿತರಣೆ ಮಾಡಿ, ಅನಾಥಾಶ್ರಮ ವೃದ್ಧಾಶ್ರಮಗಳಿಗೂ ನಮ್ಮ ಕೈಲಾದಷ್ಟು ಸಹಾಯ ಮಾಡಿ ಶ್ರೇಯಸ್ ಪಟೇಲ್ ಅವರಿಗೆ ಸೇವೆಯ ಮೂಲಕ ಆಶೀರ್ವದಿಸಲು ಮುಂದಾಗಿದ್ದೇವೆ.
ಈ ವೇಳೆ ಯುವ ಕಾಂಗ್ರೆಸ್ ಮುಖಂಡರಾದ ಇಸ್ಮಾಯಿಲ್ ವಿವೇಕ್, ಮಹದೇವ್ ಯಶವಂತ್, ಸಹ್ಯದ್ ಇಸ್ಮಾಯಿಲ್, ನಿತಿನ್, ಅವಿನಾಶ್, ಪ್ರೀತಂ, ಅಭಿಷೇಕ್, ಹಿಂದೂ ಕುಮಾರ್ ಇತರರಿದ್ದರು.

error: Content is protected !!