ಹಾಸನ: ಕನ್ನಡ ರಾಜ್ಯೋತ್ಸವ ಅಂಗವಾಗಿ ಬೇಲೂರು ತಾಲೂಕು ಅಡಗೂರಿನಲ್ಲಿ ನ.೧೫ ರಂದು ಬೃಹತ್ ರಕ್ತದಾನ, ಉಚಿತ ಆರೋಗ್ಯ ತಪಾಸಣಾ ಶಿಬಿರ, ದೇಹದಾನ, ನೇತ್ರದಾನ ನೋಂದಣಿ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಚೇತನ್ ಗುರೂಜಿ ತಿಳಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೋಟರಿ ಕ್ಲಬ್ ಆಫ್ ಹಾಸನ್ ಸನ್‌ರೈಸ್, ಬೆಂಗಳೂರಿನ ಅಲೀವ್ ಗಾರ್ಡನ್ ಚಾರಿಟಬಲ್
ಟ್ರಸ್ಟ್, ಸುರಕ್ಷಾ ವೆಲ್ಫೇರ್ ಟ್ರಸ್ಟ್, ಅಡಗೂರಿನ ಶ್ರೀ ವೀರಭದ್ರೇಶ್ವರಸ್ವಾಮಿ ಸೇವಾ ಟ್ರಸ್ಟ್, ಹಳೇಬೀಡಿನ ಶ್ರೀ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಶ್ರೀ ಕ್ಷೇತ್ರ
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ, ತಾಲ್ಲೂಕು ಕಾಫಿ ಬೆಳೆಗಾರರ ಸಂಘ, ಕನ್ನಡ ರಕ್ಷಣಾ ವೇದಿಕೆ, ರೈತ ಸಂಘ, ಯೋಗ ಚೇತನ ಬಳಗ ಹಾಗೂ
ಅನೇಕ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಬೃಹತ್ ರಕ್ತದಾನ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಬಸವಾನಂದ ಮಹಾಸ್ವಾಮೀಜಿ, ಶ್ರೀ ಪರದೇಶಿ ಕೇಂದ್ರ ಮಹಾಸ್ವಾಮೀಜಿ, ಶ್ರೀ ಜ್ಞಾನಪ್ರಭು ಸಿದ್ಧರಾಮ ದೇಶಿಕೇಂದ್ರ ಮಹಾಸ್ವಾಮಿ, ಳುಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿ (ಪುಷ್ಪಗಿರಿ ಮಠ), ಶ್ರೀ ವಾಲ್ಮೀಕಿ ಪ್ರಸನ್ನನಾಂದ ಮಹಾಸ್ವಾಮಿಗಳು (ರಾಜನಹಳ್ಳಿ), ಗುರುಬಸವ ಮಹಾಸ್ವಾಮಿU (ಪಾಂಡೋಮಟ್ಟಿ), ಶ್ರೀ ಬಸವ ಮರುಳುಸಿದ್ಧ ಮಹಾಸ್ವಾಮಿಗಳು (ಬಸವತತ್ವ ಪೀಠ), ಶ್ರೀ ಶಂಭುನಾಥ ಮಹಾ ಸ್ವಾಮಿಗಳು (ಆದಿಚುಂಚನಗಿರಿ ಶಾಖಾ ಮಠ, ಹಾಸನ), ಶ್ರೀ ವಿಜಯಕುಮಾರ ಮಹಾಸ್ವಾಮಿಗಳು (ತಣ್ಣೀರುಳ್ಳ ಮಠ) ಹಾಗೂ ಶ್ರೀ ನಂದೀಶ್ವರ ಶಿವಾಚಾರ್ಯ ಮಹಾಸ್ವಾಮಿಗಳು (ಸೀಗೆನಾಡು) ಸೇರಿದಂತೆ ಅನೇಕ ಧರ್ಮಗುರುಗಳು ಮತ್ತು ಗಣ್ಯರು ಭಾಗವಹಿಸಲಿದ್ದಾರೆ ಎಂದರು. ತಾಯಿ ತನ್ನ ಮಗನಿಗೆ ಹಾಕುವ ಕಣ್ಣೀರಿಗಿಂತ ರಕ್ತದಾನ ಶ್ರೇಷ್ಠ ಎಂಬ ಘೋಷವಾಕ್ಯವನ್ನಾಳಿದ ಈ ಕಾರ್ಯಕ್ರಮದಲ್ಲಿ ದೇಹದಾನ, ನೇತ್ರದಾನ ನೋಂದಣಿಯೂ ನಡೆಯಲಿದೆ ಎಂದು ಹೇಳಿದರು.
ಜಿಲ್ಲಾ ಕಸಾಪ ಮಾಜಿ ಗೌರವಾಧ್ಯಕ್ಷ ರವಿನಾಕಲಗೂಡು ಮತ್ತು ಮಕ್ಕಳ ತಜ್ಞ ಡಾ. ದಿನೇಶ್ ಭೈರೇಗೌಡ ಮಾತನಾಡಿ, ನ.೧೫ರ ಶನಿವಾರ ಈ ಬೃಹತ್ ರಕ್ತದಾನ, ಉಚಿತ ಆರೋಗ್ಯ ತಪಾಸಣಾ ಶಿಬಿರ, ದೇಹ, ನೇತ್ರದಾನ ನಡೆಯಲಿದೆ. ರಕ್ತದಾನಕ್ಕೆ ಆರೋಗ್ಯವಂತರು ಭಾಗವಹಿಸಬೇಕೆಂದು ಮನವಿ ಮಾಡಿದರು.
ರಕ್ತದಾನದಿಂದ ರಕ್ತದೊತ್ತಡ ಕಡಿಮೆ, ಸಕ್ಕರೆ, ಹೃದಯ ತೊಂದರೆ, ಕೊಲೆಸ್ಟ್ರಾಲ್, ಪಾರ್ಶ್ವವಾಯು ಮುಂತಾದ ಕಾಯಿಲೆ ತಡೆಹಿಡಿಯಲು ಸಹಕಾರಿ ಎಂದರು.
ರಕ್ತ ಸ್ವೀಕಾರ ಕೇಂದ್ರಗಳೆಂದರೆ ಚಾಮರಾಜೇಂದ್ರ ಹಿಮ್ಸ್ ಟೀಚಿಂಗ್ ಹಾಸ್ಪಿಟಲ್, ಹಾಸನ ಜೀವ ರಕ್ಷ ರಕ್ತಕೇಂದ್ರ, ಒಕ್ಕಲಿಗರ ಹಾಸ್ಟೆಲ್ ಬಿಲ್ಡಿಂಗ್ ರಕ್ತಕೇಂದ್ರ, ಕೆ.ಆರ್.ಪುರಂ ಜೀವ ಸಂಜೀವಿನಿ ರಕ್ತ ಕೇಂದ್ರ, ಕೆ.ಆರ್.ಪುರಂ ಇಲ್ಲಿ ಆರೋಗ್ಯ ತಪಾಸಣೆ ನಡೆಯಲಿದೆ ಎಂದರು.
ಅಮ್ಮ ಕಣ್ಣಿನ ಆಸ್ಪತ್ರೆಯವರು ವಿ ಕೇರ್ ಡೆಂಟಲ್ ಆಸ್ಪತ್ರೆ, ಮಣಿ ಹಾಸ್ಪಿಟಲ್, ಇಂಡಿಯಾನ ಹಾರ್ಟ್ ಹಾಸ್ಪಿಟಲ್, ಮಹಾಲಕ್ಷ್ಮೀ ಮಂಜಪ್ಪ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್, ರಾಜೀವ್ ಆಯುರ್ವೇದ ಆಸ್ಪತ್ರೆ. ದೇಹದಾನ ಮತ್ತು ನೇತ್ರದಾನ ನೋಂದಣಿಯನ್ನು ಚಾಮರಾಜೇಂದ್ರ ಹಿಮ್ಸ್ ಟೀಚಿಂಗ್ ಹಾಸ್ಪಿಟಲ್‌ನಲ್ಲಿ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ೯೪೪೯೭೨೦೨೬೦ / ೯೪೮೧೬೦೨೮೯೦ / ೯೪೪೮೩೯೨೪೫೪ / ೯೬೬೩೩೩೨೨೨೯ ಸಂಪರ್ಕಿಸಬಹುದಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಘು ಪಾಳ್ಯ, ಭೂವನೇಶ್, ಕೆ.ಟಿ. ಲಕ್ಷ್ಮಣ್ ಇತರರು ಉಪಸ್ಥಿತರಿದ್ದರು.










