20.1 C
Munich
Home News ಹಾಸನ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ:ಎಂಜಿಎಸ್‌ಪಿ ಅಧ್ಯಕ್ಷೆ ವೈಶಾಲಿ

ಹಾಸನ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ:ಎಂಜಿಎಸ್‌ಪಿ ಅಧ್ಯಕ್ಷೆ ವೈಶಾಲಿ

ಹಾಸನ: ಬೆಂಗಳೂರಿನ ರೂಪೇನ ಅಗ್ರಹಾರ ಪ್ರದೇಶದಲ್ಲಿ (ಬೊಮ್ಮನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ) ೨೪ ವರ್ಷದ ಲಿಂಗ ಪರಿವರ್ತಿತ ಮಹಿಳೆ ಸುಕನ್ಯ ಎಂಬುವರ ಮೇಲೆ ನಡೆದಿರುವ ದೌರ್ಜನ್ಯ ಸಂಬಂಧ ಸರ್ಕಾರ ಮತ್ತು ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಎಂಜಿಎಸ್‌ಪಿ ಅಧ್ಯಕ್ಷೆ ವೈಶಾಲಿ ಒತ್ತಾಯಿಸಿದರು.  ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸುಕನ್ಯಾ ಹಿಜ್ರಾಗಳೊಂದಿಗೆ ವಾಸಿಸುತ್ತಿದ್ದಾರೆ. ಆದರೂ ಅವರ ಮೇಲೆ ಹಿಂಸಾಚಾರ ನಡೆದಿದೆ.

ಸಾಂಪ್ರದಾಯಿಕ ಹಿಜ್ರಾ ಘರಾನಾ ವ್ಯವಸ್ಥೆ ಮೂಲಕ ನಡೆಯುತ್ತಿರುವ ಹೆಚ್ಚಿನ ಮಟ್ಟದ ಹಿಂಸಾಚಾರ ಮತ್ತು ಆರ್ಥಿಕ ಶೋಷಣೆಯಿಂದ ಅವಳು ಬೇಸತ್ತಿದ್ದಾಳೆ ಎಂದರು.
ಕಳೆದ ಅ.೩೦ ರಂದು ಮಧ್ಯಾಹ್ನ ೩ ಗಂಟೆ ಸುಮಾರಿಗೆ, ಹಿಜ್ರಾಗಳ ಗುಂಪೊಂದು ಅವಳ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿ ಕೃಷ್ಣರಾಜಪುರಂ ಪ್ರದೇಶದಿಂದ ರೂಪೇನ ಅಗ್ರಹಾರಕ್ಕೆ ಅಪಹರಿಸಿ, ರಾತ್ರಿ ಇಡೀ ದೈಹಿಕವಾಗಿ ಹಲ್ಲೆ ನಡೆಸಿ, ತಲೆ ಬೋಳಿಸಲಾಗಿದೆ. ಇದು ನಾಗರಿಕ ಸಮಾಜ ತಲೆ ತಗ್ಗಿಸುವ ವಿಚಾರ. ಅ.೩೧ ರಂದು ಮಧ್ಯಾಹ್ನ ೧.೩೦ರ ಸುಮಾರಿಗೆ ಪೊಲೀಸರು ಅವಳನ್ನು ರಕ್ಷಿಸುವವರೆಗೆ ಸುಮಾರು ಒಂದು ಇಡಿಯಾಗಿ ಗೃಹ ಬಂಧನದಲ್ಲಿಟ್ಟರು. ಸುಕನ್ಯಾ ತಮ್ಮ ಘರಾನಾ ತೊರೆದು ಮತ್ತೊಂದು ಘರಾನಾಕ್ಕೆ ಸೇರಬಹುದು ಎಂದು ಅವಳ ಮೇಲೆ ಹಲ್ಲೆ ನಡೆಸಿದವರು ಭಾವಿಸಿದ್ದರಿಂದ ಅವಳನ್ನು ಕೃಷ್ಣರಾಜಪುರದಿಂದ ಅಪಹರಿಸಲಾಗಿದೆ ಎಂದು ನಾವು ಕೇಳಿದ್ದೇವೆ.
ಸುಕನ್ಯಾಳ ಮೇಲೆ ಅದೇ ಹಲ್ಲೆಕೋರರು ಈಗಲೂ ಹಿಂಸಾಚಾರದ ಬೆದರಿಕೆ ಹಾಕುತ್ತಿದ್ದಾರೆ ಎಂದು ನಾವು ಕೇಳಿದ್ದೇವೆ. ನಾವು ಇನ್ನೂ ಪೂರ್ಣ ವಿವರಗಳಿಗಾಗಿ ಕಾಯುತ್ತಿದ್ದೇವೆ. ಸರ್ಕಾರ ಹಾಗೂ ಪೊಲೀಸರು ಇಂಥ ಘಟನೆಗಳ ಬಗ್ಗೆ ಕ್ರಮ ಕೈಗೊಳ್ಳಬೇಕು. ಸರ್ಕಾರ ನಮ್ಮ ಸಮುದಾಯಕ್ಕೆ ಮೂಲಭೂತ ಸೌಲಭ್ಯ ನೀಡಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಟಿಯಲ್ಲಿ ಮರಿಜೋಸೆಫ್, ಮಾಲತಮ್ಮ, ಶಿವಕುಮಾರ್,ಮಹಲಿನ್ ಪೇಟಿಕರ್,ವಿನ್‌ಸ್ಟನ್ ಇದ್ದರು.

error: Content is protected !!