ಹಾಸನ: ೧೬ನೇ ರಾಜ್ಯ ಸಮ್ಮೇಳನಕ್ಕೆ ಸಿದ್ಧತೆ

ಹಾಸನ: ಇದೇ ತಿಂಗಳ ೧೩ ರಿಂದ ೧೫ ರ ವರೆಗೆ ನಗರದಲ್ಲಿ ಸಿಐಟಿಯು ೧೬ನೇ ರಾಜ್ಯ ಸಮ್ಮೇಳನ ನಡೆಯಲಿದ್ದು, ಇದಕ್ಕಾಗಿ ಎಲ್ಲ ರೀತಿಯ ಸಿದ್ಧತಾಕಾರ್ಯ ನಡೆದಿವೆ ಎಂದು ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ಹೇಳಿದರು.
ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಿಐಟಿಯು ಪ್ರಮುಖ ಕಾರ್ಮಿಕ ಸಂಘಟನೆ ಆಗಿದೆ. ಎಲ್ಲ ಕಾರ್ಮಿಕ ಸಂಘಟನೆಗಳನ್ನು ಒಗ್ಗೂಡಿಸಿ ಹೋರಾಟ ಮಾಡುತ್ತಾ ಬರುತ್ತಿದೆ. ಅಖಿಲ ಭಾರತ ಮುಷ್ಕರ ವಿಷಯದಲ್ಲೂ ಇದೇ ಮುಂಚೂಣಿ ಸಂಘಟನೆ. ಇದೇ ಸಂಘಟನೆ ಆಶ್ರಯದಲ್ಲಿ ೧೬ನೇ ರಾಜ್ಯ ಸಮ್ಮೇಳನ ಆಯೋಜನೆ ಮಾಡಲಾಗುತ್ತಿದೆ. ಇದಕ್ಕಾಗಿ ಎಲ್ಲ ರೀತಿಯ ಪೂರ್ವ ಸಿದ್ಧತಾ ಕಾರ್ಯ ನಡೆದಿವೆ ಎಂದರು.
ಸಮ್ಮೇಳನ್ನಾಗಿ ಬೇಕಾದ ವ್ಯವಸ್ಥೆ ಆಗಿದೆ. ದುಡಿಯುವ ಜನ, ರೈತರು, ಆಳುವರ ಸರ್ಕಾರಗಳ ನಡುವೆ ವರ್ಗ ಸಮರ ಶುರುವಾಗಿದೆ. ಬೆಲೆ ಏರಿಕೆ, ಭೂಮಿ ಕಬಳಿಕೆ ಹಾಗೂ
ಕೆಲಸದ ಅವಧಿ ನಿಗದಿ ಸಂಬಂಧ ನಮ್ಮ ಸಂಘಟನೆ ಹೋರಾಟ ಮಾಡುತ್ತಿದೆ ಎಂದರು.
ಆಳುವ ಸರ್ಕಾರಗಳು ಕಾರ್ಪೋರೆಟ್ ಕಂಪನಿ ಪರವಾದ
ನೀತಿ ಜಾರಿ ಮಾಡುತ್ತಿದೆ. ಕಾರ್ಮಿಕ ವಿರೋಧಿ ನೀತಿ ಜಾರಿ ಮಾಡುತ್ತಿವೆ. ಬ್ಯಾಂಕ್ ಖಾಸಗೀಕರಣಕ್ಕೆ ಹುನ್ನಾರ ನಡೆಯುತ್ತಿದೆ. ಹೀಗಾದರೆ ಭಾರತಕ್ಕೆ ಕಷ್ಟದ ದಿನಗಳು ಎದುರಾಗಲಿವೆ. ಇದರಿಂದ ಅಮೆರಿಕವೇ ವರ್ಗ ಸಂಘರ್ಷದಿಂದ ನರಳುತ್ತಿದೆ.
ದೇಶದ ಸಂಪತ್ತು ದುಡಿಯುವವರ ಪರ ಹಂಚಿಕೆ ಆಗಬೇಕು. ಕನಿಷ್ಟ ವೇತನ ಜಾರಿ ಆಗಬೇಕು. ಈ ಎಲ್ಲವುಗಳ ಬಗ್ಗೆ ಚರ್ಚೆ ಸಮ್ಮೇಳನದಲ್ಲಿ ನಡೆಯಲಿದೆ. ಕಡೆಯದಿನ ಕೆಂಪು ಪಥ ಸಂಚಲನ, ಅಂತಿಮ ದಿನ ಬಹಿರಂಗ ಸಭೆ ನಡೆಯಲಿದೆ ಎಂದು ಹೇಳಿದರು.
ಸಿಐಟಿಯು ರಾಷ್ಟ್ರೀಯ ಅಧ್ಯಕ್ಷರಾದ ಕೆ.ಹೇಮಲತಾ
ಸಮ್ಮೇಳನ ಉದ್ಘಾಟನೆ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಕಾರ್ಯದರ್ಶಿ ಕೆ.ಎನ್.ಉಮೇಶ್, ರಾಜ್ಯ ಉಪಾಧ್ಯಕ್ಷ ವಿ.ಜೆ.ಕೆ.ನಾಯರ್, ರಾಜ್ಯಾಧ್ಯಕ್ಷರಾದ
ಎಸ್.ವರಲಕ್ಷ್ಮಿ ಅಧ್ಯಕ್ಷತೆವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಟಿಯಲ್ಲಿ ಪರಮಶಿವಯ್ಯ, ಎಂ.ಬಿ.ಪುಷ್ಪ, ರಾಜು ಗೊರೂರು, ಅರವಿಂದ್, ಪೃಥ್ವಿ, ನವೀನ್ ಕುಮಾರ್ ಇದ್ದರು.