ಸಕಲೇಶಪುರ :ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಸಕಲೇಶಪುರದ ಮಾರನಹಳ್ಳಿ ಶಾಖೆಯ ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಉಡ ಬೇಟೆ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ, ಅವರಿಂದ ಸಿಂಗಲ್ ಬ್ಯಾರೆಲ್ ಗನ್ ಮತ್ತು ಉಡದ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ.
ಅರಣ್ಯ ಸಿಬ್ಬಂದಿಗಳು ಬೆಳಿಗ್ಗೆ ಸುಮಾರು 9 ಗಂಟೆ ಸಮಯದಲ್ಲಿ ಗಸ್ತು ತಿರುಗುತ್ತಿದ್ದ ವೇಳೆ, ಕಾಡುಮನೆ ಎಸ್ಟೇಟ್ ಸರ್ವೆ ನಂ. 02 ರ ಪ್ರದೇಶದಲ್ಲಿ ಉಡವನ್ನು ಬೇಟೆಯಾಡಿ ಮಾಂಸ ರೂಪಕ್ಕೆ ಪರಿವರ್ತಿಸುತ್ತಿರುವ ಆರೋಪಿಗಳನ್ನು ಪತ್ತೆಹಚ್ಚಿದರು.
ಬಂಧಿತ ಆರೋಪಿಗಳು ಬಾಬು ಪಿ.ಎ (ಎಲಿಯಾಸ್ ಪಿ.ವಿ ಪುತ್ರ, ಶಿರಾಡಿ ಗ್ರಾಮ, ಕಡಬ ತಾಲೂಕು, ದಕ್ಷಿಣ ಕನ್ನಡ) ಹಾಗೂ ಬಿನೋಯಿ (ಪ್ರಭಾಕರ್ ಪುತ್ರ, ಉಪ್ಸ್ಕೋಡು, ಇಡುಕ್ಕಿ ತಾಲೂಕು, ಕೇರಳ) ಎಂದು ಗುರುತಿಸಲಾಗಿದೆ. ಇವರ ವಿರುದ್ಧ ಅರಣ್ಯ ಪ್ರಕರಣ ದಾಖಲಿಸಲಾಗಿದೆ.
ಆದರೆ ಇನ್ನುಳಿದ ಐದು ಆರೋಪಿಗಳು — ಜೋಶ್ (ಶಿರಾಡಿ ಗ್ರಾಮ), ಜೇಮ್ಸ್ (ಉದಾನೆ), ಅಭಿಲಾಷ್ (ಶಿರಾಡಿ), ಪ್ರದೀಪ್ (ಉದಾನೆ) ಹಾಗೂ ಬಾಬುಟ್ (ಎಂಜಿರ) ತಲೆಮರೆಸಿಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಾಚರಣೆಯನ್ನು ವಲಯ ಅರಣ್ಯಾಧಿಕಾರಿ ಎಚ್.ಆರ್. ಹೇಮಂತ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಉಪವಲಯ ಅರಣ್ಯಾಧಿಕಾರಿಗಳು ಮಂಜುನಾಥ್ ಹಾಗೂ ಅರ್ಜುನ್ ಎಸ್.ಆರ್, ಗಸ್ತು ಅರಣ್ಯ ಪಾಲಕರು ಉಮೇಶ್ ಎಸ್., ದೇವರಾಜು, ಅರಣ್ಯ ವೀಕ್ಷಕರು ಲೋಕೇಶ್ ಬಿ.ಎಂ., RRT ಸಿಬ್ಬಂದಿ ಕರುಣಾಕರ ಕೆ.ಎಸ್., ಹೇಮಂತ್ ಕುಮಾರ್, ದಿವಾಕರ ಜಿ.ವಿ., ನಿಕ್ಷಿತ್ ಹೆಚ್.ಡಿ. ಹಾಗೂ ವಾಹನ ಚಾಲಕ ಆಶ್ರಯ್ ಶ್ರಮಿಸಿದ್ದಾರೆ.










