6.9 C
Munich
Home Business ಸಕಲೇಶಪುರ: ಹೋಂಸ್ಟೇಗಳು ಪ್ರವಾಸೋದ್ಯಮದ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ಜವಾಬ್ದಾರಿ ನಿಭಾಯಿಸುತ್ತಿವೆ

ಸಕಲೇಶಪುರ: ಹೋಂಸ್ಟೇಗಳು ಪ್ರವಾಸೋದ್ಯಮದ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ಜವಾಬ್ದಾರಿ ನಿಭಾಯಿಸುತ್ತಿವೆ

ಸಕಲೇಶಪುರ: ಪಟ್ಟಣದ ತಾಲೂಕು ಪತ್ರಕರ್ತರ ಸಂಘದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು ಒಂಬತ್ತು ವರ್ಷಗಳ ಹಿಂದೆ ಹೋಂಸ್ಟೇ ಮಾಲೀಕರ ಸಂಘವು ಸ್ಥಾಪನೆಯಾಗಿ, ಸಕಲೇಶಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಹೋಂಸ್ಟೇ ಮಾಲೀಕರಿಗೆ ಒಂದು ಸಮೂಹ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು. ಪ್ರಸ್ತುತ ಹೊಸ ಕಾರ್ಯಕಾರಿ ಸಮಿತಿ ರಚನೆಯಾಗಿದ್ದು, ಅದರಲ್ಲಿ ತಾವು ಅಧ್ಯಕ್ಷರಾಗಿ, ಉಪಾಧ್ಯಕ್ಷ, ಕಾರ್ಯದರ್ಶಿ ಹಾಗೂ ಖಜಾಂಚಿ ಸೇರಿದಂತೆ ಒಟ್ಟು 14 ಸದಸ್ಯರ ಸಮಿತಿಯು ಕಾರ್ಯನಿರ್ವಹಿಸಲಿದ್ದು, ಸಂಘದ ಚಟುವಟಿಕೆಗಳನ್ನು ಹೆಚ್ಚು ಬಲಪಡಿಸಲು ಉತ್ಸಾಹದಿಂದ ಮುಂದಾಗಿದೆ ಎಂದರು.

ಪ್ರತಿ ವರ್ಷ ಸಂಘದ ವತಿಯಿಂದ ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಲ್ಲಿ ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಕಾರ್ಯಕ್ಕೆ ಸರ್ಕಾರದಿಂದ ಯಾವುದೇ ಆರ್ಥಿಕ ನೆರವು ಪಡೆಯದೆ, ಸಂಘದ ಸದಸ್ಯರ ಸಹಕಾರದಿಂದಲೇ ಈ ಚಟುವಟಿಕೆಗಳು ನಡೆಯುತ್ತಿವೆ ಎಂದು ಹೇಳಿದರು. ಪ್ಲಾಸ್ಟಿಕ್ ಮಾಲಿನ್ಯ ತಡೆಗಟ್ಟುವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹೋಂಸ್ಟೇ ಮಾಲೀಕರ ಸಂಘದಿಂದ ವಿವಿಧ ಕಾರ್ಯಕ್ರಮಗಳು ನಡೆಯುತ್ತಿವೆ ಎಂದು ಅವರು ತಿಳಿಸಿದರು.

ಮಲೆನಾಡಿನ ನೈಸರ್ಗಿಕ ಸೌಂದರ್ಯ, ತೋಟಗಾರಿಕೆ, ಸಾಂಪ್ರದಾಯಿಕ ಆಹಾರ ಪದ್ಧತಿ ಮತ್ತು ಸ್ಥಳೀಯ ಸಂಸ್ಕೃತಿಯನ್ನು ಪ್ರವಾಸಿಗರಿಗೆ ಪರಿಚಯಿಸುವುದು ನಮ್ಮ ಉದ್ದೇಶ. ಆದರೆ ಸರ್ಕಾರದಿಂದ ಪ್ರವಾಸೋದ್ಯಮ ಇಲಾಖೆಯ ಸಹಕಾರ ಸಿಗುತ್ತಿಲ್ಲ. ಸಕಲೇಶಪುರ ತಾಲೂಕಿನಲ್ಲಿನ ಹತ್ತಾರು ಸುಂದರ ತಾಣಗಳಿಗೆ ಸೂಕ್ತ ರಸ್ತೆ, ಸೌಕರ್ಯ ಹಾಗೂ ಶೌಚಾಲಯಗಳ ಕೊರತೆಯಿಂದ ಪ್ರವಾಸಿಗರು ತೊಂದರೆ ಅನುಭವಿಸುತ್ತಿದ್ದಾರೆ,” ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ಹೋಂಸ್ಟೇ ಮಾಲೀಕರ ಸಂಘದ ಕಾರ್ಯದರ್ಶಿ ಪ್ರಸನ್ನ ಮಾತನಾಡಿ, ಮಾಲೀಕರ ಸಂಘವು ಕಳೆದ ಹಲವು ವರ್ಷಗಳಿಂದ ಅತ್ಯಂತ ಅಚ್ಚುಕಟ್ಟಾಗಿ, ಯಾವುದೇ ತಪ್ಪು-ಚೂಕಿಲ್ಲದೆ ಕಾರ್ಯನಿರ್ವಹಿಸುತ್ತಿದೆ. ಸಂಘದ ಉದ್ದೇಶ ಕೇವಲ ಹೋಂಸ್ಟೇಗಳ ಬೆಳವಣಿಗೆಗೆ ಸೀಮಿತವಾಗದೇ, ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದಾಗಿದೆ ಎಂದು ಹೇಳಿದರು.

ಸಕಲೇಶಪುರದ ಹೋಂಸ್ಟೇ ಮಾಲೀಕರು ಹಾಗೂ ಸ್ಥಳೀಯರು ಕೈಜೋಡಿಸಿ ಸ್ವಚ್ಛತಾ ಕಾರ್ಯವನ್ನು ಆದ್ಯತೆಯಾಗಿ ಕೈಗೊಳ್ಳಬೇಕು. ಸಕಲೇಶಪುರದ ನೈಸರ್ಗಿಕ ಸೌಂದರ್ಯವನ್ನು ಅನುಭವಿಸಲು ಬರುವ ಪ್ರವಾಸಿಗರಿಗೆ ಉತ್ತಮ ಗುಣಮಟ್ಟದ ವಸತಿ, ಆಹಾರ ಮತ್ತು ಆತಿಥ್ಯ ಒದಗಿಸುವ ಮೂಲಕ ಸಕಲೇಶಪುರದ ಖ್ಯಾತಿಯನ್ನು ಮತ್ತಷ್ಟು ಎತ್ತರಕ್ಕೆ ಏರಿಸಬೇಕು. ನಮ್ಮ ಉದ್ದೇಶ ಸಕಲೇಶಪುರದ ಪ್ರವಾಸೋದ್ಯಮವನ್ನು ರಾಜ್ಯಮಟ್ಟದಿಂದ ರಾಷ್ಟ್ರಮಟ್ಟಕ್ಕೆ ತಲುಪಿಸುವುದಾಗಿದೆ ಎಂದು ಪ್ರಸನ್ನ ಹೇಳಿದರು.

ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ವಿಕ್ರಂ, ಗೌತಮ್, ಯಶವಂತ್ ಉಪಸ್ಥಿತರಿದ್ದರು.

error: Content is protected !!