10.1 C
Munich
Home ಕ್ರೈಮ್‌ ಸಕಲೇಶಪುರ: ಭಿಕ್ಷಾಟನೆಗೆ ಬಂದ ಮಾಲಾಧಾರಿಗಳು ಮನೆ ದೋಚಿದರು

ಸಕಲೇಶಪುರ: ಭಿಕ್ಷಾಟನೆಗೆ ಬಂದ ಮಾಲಾಧಾರಿಗಳು ಮನೆ ದೋಚಿದರು

ಸಕಲೇಶಪುರ: ಮಾಲೆ ಧರಿಸಿ ಭಿಕ್ಷೆ ಬೇಡುವ ನೆಪದಲ್ಲಿ ಬೈಕ್‌ನಲ್ಲಿ ಬಂದಿದ್ದ ಇಬ್ಬರು ಖದೀಮರು ಮನೆಯೊಂದಕ್ಕೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿರುವ ಘಟನೆ ತಾಲೂಕಿನ ವಡೂರು ಗ್ರಾಮದಲ್ಲಿ ನಡೆದಿದೆ.

ಶನಿವಾರ ಬೆಳಿಗ್ಗೆ ಸುಮಾರು ಹತ್ತು ಗಂಟೆ ಸುಮಾರಿನಲ್ಲಿ ಗ್ರಾಮಕ್ಕೆ ಬೈಕ್‌ನಲ್ಲಿ ಮಾಲೆ ಧರಿಸಿ ಬಂದಿದ್ದ ಇಬ್ಬರು ಖದೀಮರು ಗ್ರಾಮದ ಮನೆ ಮನೆಗೂ ತೆರಳಿ ಭಿಕ್ಷಾಟನೆ ಮಾಡಿದ್ದಾರೆ.

ಬಳಿಕ ಗ್ರಾಮದ ರಂಜನ್ ಎಂಬುವರ ಮನೆಯಲ್ಲಿ ಯಾರೂ ಇಲ್ಲದೆ ಇರುವುದನ್ನು ಗಮನಿಸಿ ಮನೆಗೆ ನುಗ್ಗಿ ಬೀರುವಿನ ಲಾಕ‌ರ್ ಮುರಿದು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿದ್ದಾರೆ.

ಈ ಸಂಬಂಧ ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!