10.1 C
Munich
Home News ಹಾಸನ: ದ್ದುದ ಹೋಬಳಿಯಲ್ಲಿ ಚುಟುಕು ಸಾಹಿತ್ಯ ಪರಿಷತ್ ಉದ್ಘಾಟನೆ – ನಾಟ್ಯರಾಣಿ ಶಾಂತಲ ಪ್ರಶಸ್ತಿ ಪ್ರದಾನ

ಹಾಸನ: ದ್ದುದ ಹೋಬಳಿಯಲ್ಲಿ ಚುಟುಕು ಸಾಹಿತ್ಯ ಪರಿಷತ್ ಉದ್ಘಾಟನೆ – ನಾಟ್ಯರಾಣಿ ಶಾಂತಲ ಪ್ರಶಸ್ತಿ ಪ್ರದಾನ

The inaugural program of the taluk's Dudda Hobli Chutuku Sahitya Parishad was organized on November 1 at Deccan Valley International School, said HN Sunil, secretary of Deccan Valley International School.

ಹಾಸನ :  ತಾಲೂಕಿನ ದುದ್ದ ಹೋಬಳಿ ಚುಟುಕು ಸಾಹಿತ್ಯ ಪರಿಷತ್ ಉದ್ಘಾಟನಾ ಕಾರ್ಯಕ್ರಮವನ್ನು ನ.01 ಡೆಕ್ಕನ್ ವಾಲಿ ಇಂಟರ್ನಾ್ಯಷನಲ್ ಸ್ಕೂಲ್‌ಲಿ ಹಮ್ಮಿಕೊಳ್ಳಲಾಗಿದೆ ಎಂದು ಡೆಕ್ಕನ್ ವ್ಯಾಲಿ ಇಂಟರ್ನ್ಯಾಷನಲ್ ಸ್ಕೂಲ್‌ನ ಕಾರ್ಯದರ್ಶಿ ಹೆಚ್‌.ಎನ್ .ಸುನಿಲ್ ತಿಳಿಸಿದ್ದಾರೆ.

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಚುಟುಕು ಕವಿಗೋಷ್ಠಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ನೂತನವಾಗಿ ದುದ್ದ ಹೋಬಳಿಯ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಆಯ್ಕೆಯಾದ ಪೂರ್ಣಿಮಾ ಹಾಸನ್‌ರವರಿಗೆ ಪದಗ್ರಹಣ ಮತ್ತು ಕನ್ನಡದ ಚಲನಚಿತ್ರ ಶಿವಲೀಲಾ ಪ್ರಮೋಷನ್ ನಡೆಯುತ್ತದೆ.

ಶಿವಲೀಲಾ ಚಿತ್ರತಂಡದ ನಿರ್ದೇಶಕರು, ನಿರ್ಮಾಪಕರು, ನಾಯಕ, ನಾಯಕಿ ಇನ್ನಿತರೆ ಕಲಾವಿದರುಗಳು, ಪದ್ಮಶ್ರೀ ಪುರಸ್ಕೃತರಾದ ಜೋಗತಿ ಮಂಜಮ್ಮನವರು, ಕೇಂದ್ರ ಚುಟುಕು ಸಾಹಿತ್ಯ ಪರಿಷತ್ ಸಂಸ್ಥಾಪಕರಾದ ಡಾ. ಎಂ.ಜಿ.ಆರ್.ಅರಸ್‌ರವರು, ಜಿಲ್ಲಾ ಚು.ಸಾಪ ಅಧ್ಯಕ್ಷರಾದ ಬಾ.ನಂ.ಲೋಕೇಶ್‌ರವರು, ಹಿರಿಯ ಪತ್ರಕರ್ತರಾದ ರವಿ ನಾಕಲಗೂಡು ಸೇರಿದಂತೆ ಇತರರು ಹಾಜರಿದ್ದರು.

ರಾಷ್ಟ್ರೀಯ ಕಥಕ್ ನೃತ್ಯಗಾರ್ತಿ ಮನಿಷ ರಾಮಚಂದ್ರರವರಿಗೆ ನಾಟ್ಯರಾಣಿ ಶಾಂತಲ ರಾಜ್ಯ ಪ್ರಶಸ್ತಿಯನ್ನು ಇದೇ ಸಂದರ್ಭದಲ್ಲಿ ನೀಡಿ ಗೌರವಿಸಲಾಗುತ್ತದೆ ಎಂದು ತಿಳಿಸಿದರು.

error: Content is protected !!