5.6 C
Munich
Home News ಚನ್ನರಾಯಪಟ್ಟಣ ವ್ಯವಸಾಯೋತ್ಪನ್ನ ಸಹಕಾರ ಸಂಘದ ಚುನಾವಣೆಗೆ ಅ.19ರಂದು ಮತದಾನ

ಚನ್ನರಾಯಪಟ್ಟಣ ವ್ಯವಸಾಯೋತ್ಪನ್ನ ಸಹಕಾರ ಸಂಘದ ಚುನಾವಣೆಗೆ ಅ.19ರಂದು ಮತದಾನ

Elections for the new board of directors of the Taluk Agricultural Products Sales Cooperative Society Limited are being held on Sunday, October 19th, and Election Officer Tahsildar Shankarappa has appealed to all the shareholder farmers of the society to participate in the voting without fail.

ಚನ್ನರಾಯಪಟ್ಟಣ: ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತದ ನೂತನ ಆಡಳಿತ ಮಂಡಳಿಗೆ ಆಕ್ಟೋಬರ್ 19ರ ಭಾನುವಾರದಂದು ಚುನಾವಣೆ ನಡೆಯುತ್ತಿದ್ದು, ಸಂಘದ ಎಲ್ಲ ಷೇರುದಾರ ರೈತರು ತಪ್ಪದೇ ಮತದಾನದಲ್ಲಿ ಪಾಲ್ಗೊಳ್ಳುವಂತೆ ಚುನಾವಣಾಧಿಕಾರಿ ತಹಶೀಲ್ದಾರ್ ಶಂಕರಪ್ಪ ಮನವಿ ಮಾಡಿದ್ದಾರೆ.

ಮಾಧ್ಯಮಾ ಪ್ರಕಟಣೆ ಹೊರಡಿಸಿರುವ ಚುನಾವಣಾಧಿಕಾರಿಗಳು ಸಂಘದಡಿ 3559 ಷೇರುದಾರರಿದ್ದು,7 ನಿರ್ದೇಶಕರ ಆಯ್ಕೆಗಾಗಿ ಚುನಾವಣೆಯೂ ಆಕ್ಟೋಬರ್ 19ರ ಭಾನುವಾರದಂದು ಪಟ್ಟಣದ ಗಣಪತಿ ಪೆಂಡಾಲ್ ಮುಂಭಾಗದಲ್ಲಿರುವ ಸರ್ಕಾರಿ ಪ್ರೌಢಶಾಲೆ(ಪೇಟೆ) ಯಲ್ಲಿ ಬೆಳಗ್ಗೆ 9 ಘಂಟೆಯಿದ ಸಂಜೆ 4 ಘಂಟೆವರೆಗೆ ನಡೆಯಲಿದೆ. ಎಲ್ಲ ಷೇರುದಾರರು ತಪ್ಪದೇ ಮತದಾನದಲ್ಲಿ ಭಾಗವಹಿಸಿ ತಮ್ಮ ಮತ ಚಲಾಯಿಸಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!