10.8 C
Munich
Home News ಬಾನು ಮುಷ್ತಾಕ್ ಕುಟುಂಬ ಸಮೇತರಾಗಿ ಹಾಸನಾಂಬೆ ದರ್ಶನ; ಜಾತ್ರೆ ಭಾವೈಕ್ಯತೆಯ ಸಂಕೇತ ಎಂದು ಪ್ರಶಂಸೆ

ಬಾನು ಮುಷ್ತಾಕ್ ಕುಟುಂಬ ಸಮೇತರಾಗಿ ಹಾಸನಾಂಬೆ ದರ್ಶನ; ಜಾತ್ರೆ ಭಾವೈಕ್ಯತೆಯ ಸಂಕೇತ ಎಂದು ಪ್ರಶಂಸೆ

Renowned author Banu Mushtaq, who won the international Booker Prize for her writing and made the country proud, visited Hassanambe today with her family.

ಹಾಸನ: ತಮ್ಮ ಬರಹಕ್ಕೆ ಅಂತರಾಷ್ಟ್ರೀಯ ಪ್ರಶಸ್ತಿ ಬೂಕರ್ ಪಡೆದು ದೇಶವೇ ಹೆಮ್ಮೆಯಿಂದ ನೋಡುವಂತೆ ಮಾಡಿದ ಖ್ಯಾತ ಲೇಖಕಿ ಬಾನು ಮುಷ್ತಾಕ್, ಕುಟುಂಬ ಸಮೇತರಾಗಿ ಇಂದು ಹಾಸನಾಂಬೆ ದರ್ಶನ ಪಡೆದರು. ವಿಶೇಷ ಎಂದರೆ ಕುಟುಂಬ ಸಮೇತರಾಗಿ ಆಗಮಿಸಿದ ಬಾನು ಮುಷ್ತಾಕ್ ಅವರು, ಹಾಸನಾಂಬೆ ದೇವಿಯ ದರ್ಶನ ಪಡೆದರು. ಹಾಸನಾಂಬ ಜಾತ್ರೆ ಭಾವೈಕ್ಯತೆಯ ಸಂಕೇತ ಎಂದು ಕೊಂಡಾಡಿದರು.

ಹಾಸನಾಂಬೆ ನಮ್ಮ ಮನೆ ಮುಂದಿನ ಬೀದಿಯಲ್ಲಿದೆ. ಇದು ಮೊದಲನೇ ಬಾರಿ ದರ್ಶನ ಪಡೆಯುತ್ತಿಲ್ಲ. ಚಿಕ್ಕಂದಿನಿಂದಲೂ ತಾಯಿಯ ಕೈ ಬೆರಳು ಹಿಡಿದುಕೊಂಡು ದೇವಿ ದರ್ಶನಕ್ಕೆ ಬರ್ತಿದ್ದೆ.ಆಗ ಯಾರಿಗೂ ಗೊತ್ತಾಗುತ್ತಿರಲಿಲ್ಲ ಈಗ ಗೊತ್ತಾಗುತ್ತಿದೆ ಎಂದು ಬಾನು ಮುಷ್ತಾಕ್ ಹೇಳಿದ್ದಾರೆ.

ಹಾಸನಾಂಬೆ ದೇವಾಲಯಕ್ಕೆ ಆಗಮಿಸಿ ತಾಯಿ ದರ್ಶನ ಪಡೆದು ಮಾತನಾಡಿದ ಅವರು, ಭಾವೈಕ್ಯತೆಯ ಸಂಕೇತ ಇದು. ಬಹಳ ಹಿಂದಿನಿಂದೂ ಮುಸ್ಲಿಂರು ಹಸನ್ ಬಿ ಹುಸೇನ್ ಬಿ ಎಂದು ನಂಬುವ ಕಾಲವಿತ್ತು. ನಮ್ಮ ಪೂರ್ವಿಕರು ಮುಸ್ಲಿಂ ಹೆಣ್ಣು ಮಕ್ಕಳನ್ನು ಕರೆದುಕೊಂಡು ಬಂದು ಹೇಳಿ ಕೊಡುತ್ತಿದ್ದರು.ಹಾಗಾಗಿ ಇದು ಭಾವೈಕ್ಯತೆಯ ಸ್ಥಳ. ಹಾಸನಾಂಬ ಜಾತ್ರೆ ಎಂದರೇ ಅದು ನಮ್ಮೂರ ಹಬ್ಬ ಎಂದು ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ. ಅದರಲ್ಲಿ ತಪ್ಪೇನಿದೆ ಎಂದರು.

ಹೆಚ್ಚಿನ ಭಕ್ತಿ, ಭಾವೈಕ್ಯತೆಯ ನೆಮ್ಮದಿಯ ತಾಣವಿದು. ಸ್ನೇಹ, ಪ್ರೀತಿ, ಸಹಬಾಳ್ವೆ, ಸಾಮಾಜಿಕ ಸಾಮರಸ್ಯ ಬೆಸೆಯುವ ಸ್ಥಳ. ಮುಸ್ಲಿಂ ಸಮುದಾಯದವರು ಹಿಂದೆ ಬಹಳಷ್ಟು ಮಂದಿ ಬರುತ್ತಿದ್ದರು. ಆಗ ಅವರ ಗ್ರಹಿಕೆ ಬೇರೆಯಾಗಿತ್ತು. ಸಕ್ಕರೆ ಊದು ಕಡ್ಡಿ ತಂದು ಊದಿಸುತ್ತಿದ್ದರು. ಮಧ್ಯದಲ್ಲಿ ಸ್ವಲ್ಪ ಕಡಿಮೆಯಾಗಿತ್ತು.
ಈಗ ಮತ್ತೆ ದೇವಿಯ ದರ್ಶನಕ್ಕೆ ಸರ್ವಧರ್ಮದವರು ಬರುತ್ತಿದ್ದಾರೆ ಎಂದು ಬಾನು ಮುಷ್ತಾಕ್ ಅಭಿಪ್ರಾಯಪಟ್ಟರು. ಹಿರಿಯ ಪತ್ರಕರ್ತ ಅತೀಖುರ್ ರೆಹಮಾನ್, ಸಮಾಜ ಸೇಷಕ ಎಸ್.ಎಸ್.ಪಾಷ, ಶಬ್ಬೀರ್ ಅಹಮದ್ ಮೊದಲಾದವರಿದ್ದರು.

error: Content is protected !!