ಹಾಸನ: ಹಾಸನಾಂಬೆ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಜಿಲ್ಲಾಡಳಿತ ಮತ್ತು ಸರ್ಕಾರದ ಮುಂದೆ ನಾವಿಟ್ಟಿದ್ದ ಹಲವು ಬೇಡಿಕೆಗಳಲ್ಲಿ ಕೆಲವನ್ನು ಈಡೇರಿಸಿದ್ದು, ಇದಕ್ಕಾಗಿ ಸರ್ಕಾರ, ಜಿಲ್ಲಾಡಳಿತಕ್ಕೆ ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ ಧನ್ಯವಾದ ಹೇಳಿದರು.
ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಡಿಸಿ ಮೂಲಕ ಸರ್ಕಾರ, ಉಸ್ತುವಾರಿ ಸಚಿವರಿಗೆ ನಾವು ಬರೆದಿದ್ದ ಪತ್ರಕ್ಕೆ ಮನ್ನಣೆ ಸಿಕ್ಕಂತಾಗಿದೆ. ಬಿಜೆಪಿ ಹಾಗೂ ಹಾಸನಾಂಬೆ ಭಕ್ತರ ಪರವಾಗಿ ಧನ್ಯವಾದ ಹೇಳುವೆ ಎಂದರು.
ಅಕ್ರಮ ರಹಿತ, ರಾಜಕೀಯ ಹೊರತಾಗಿ ತಾಯಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ವಿಐಪಿ, ವಿವಿಐಪಿ ಪಾಸ್ ರದ್ದು ಮಾಡಲಾಗಿದೆ.
ಗಣ್ಯರಿಗೆ ಅವರೊಂದಿಗೆ ನಾಲ್ಕು ಜನರಷ್ಟೇ ಬರಬೇಕು ಎಂದು ನಿರ್ಬಂಧ ಹೇರಿರುವುದು ಸ್ವಾಗತಾರ್ಹ ಎಂದರು.
ಆರು ವರ್ಗಗಳ ಅತಿ ಗಣ್ಯರು ಹೊರತು ಪಡಿಸಿ, ಉಳಿದ ಯಾವುದೇ ಗಣ್ಯರ ಖಾಸಗಿ ಕಾರುಗಳು ದೇವಾಲಯ ಪ್ರಾಂಗಣಕ್ಕೆ ಬರುವಂತಿಲ್ಲ ಎಂದು ಹೇಳಿರುವುದು, ವಸ್ತç ಸಂಹಿತೆ ಜಾರಿ ಸಹ ಸ್ವಾಗತಾರ್ಹ.
ಈ ವಿಷಯದಲ್ಲಿ ಸಚಿವರು ಯಾವುದೇ ರಾಜಕೀಯ ಮತ್ತಿತರ ಒತ್ತಡಗಳಿಗೆ ಮಣಿಯಬಾರದು ಎಂದು ಮನವಿ ಮಾಡಿದರು ನಿಮ್ಮ ತೀರ್ಮಾಣ ಐತಿಹಾಸಿಕ ಮಹತ್ವ ಪಡೆಯಲಿದೆ ಎಂದರು.ಭಕ್ತರೂ ಕೂಡ ಯಾವುದೇ ರಾಜಕಾರಣಿ ನಂಬಿ ಬರಬೇಡಿ, ತುರ್ತು ದರ್ಶನ ಬೇಕಿದ್ದರೆ ೧ ಸಾವಿರ ಅಥವಾ ೩೦೦ ಟಿಕೆಟ್ ಪಡೆದು ಬಂದು ಹೋಗಿ ಎಂದು ದೇವರಾಜೇಗೌಡ ಮನವಿ ಮಾಡಿದರು.










