14.6 C
Munich
Home News ಹಾಸನ: ರಾಜೀವ್ ತಾಂತ್ರಿಕ ಮಹಾವಿದ್ಯಾಲಯದ 21 ವಿದ್ಯಾರ್ಥಿಗಳಿಗೆ ಜಾಗತಿಕ ಪ್ರಮಾಣಪತ್ರ

ಹಾಸನ: ರಾಜೀವ್ ತಾಂತ್ರಿಕ ಮಹಾವಿದ್ಯಾಲಯದ 21 ವಿದ್ಯಾರ್ಥಿಗಳಿಗೆ ಜಾಗತಿಕ ಪ್ರಮಾಣಪತ್ರ

Twenty-one final year students of the city's Rajiv Technical College passed the UIPath Certified Professional - Automation Developer Associate Certification exam run by a company called U Path and received a global professional certification.

ಹಾಸನ: ನಗರದ ರಾಜೀವ್ ತಾಂತ್ರಿಕ ಮಹಾವಿದ್ಯಾಲಯದ ಅಂತಿಮ ವರ್ಷದ 21ವಿದ್ಯಾರ್ಥಿಗಳು U path ಎಂಬ ಕಂಪನಿ ನಡೆಸುವ ಯುಐಪಾತ್ ಸರ್ಟಿಫೈಡ್ ಪ್ರೋಫೆಷನಲ್ – ಆಟೋಮೇಷನ್ ಡೆವಲಪರ್ ಅಸೋಸಿಯೇಟ್ ಸರ್ಟಿಫಿಕೇಶನ್ ಎಂಬ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಜಾಗತಿಕ ಮಟ್ಟದ ವೃತ್ತಿಪರ ಪ್ರಮಾಣ ಪತ್ರ ಪಡೆದರು.

ಇದೇ ಮೊದಲ ಬಾರಿಗೆ 21 ವಿದ್ಯಾರ್ಥಿಗಳು ಏಕ ಕಾಲದಲ್ಲಿ ಉತ್ತೀರ್ಣರಾಗಿರುವುದು ಕರ್ನಾಟಕದಲ್ಲಿಯೇ ಮೊದಲು. ಈ ಪ್ರಮಾಣಪತ್ರ ಪಡೆಯುವುದರಿಂದ ಭಾರತದಲ್ಲಿ ಅಲ್ಲದೆ ವಿಶ್ವದಾದ್ಯಂತ ಉತ್ತಮ ಶ್ರೇಣಿಯ ಉದ್ಯೋಗಾವಕಾಶ ದೊರೆಯುತ್ತವೆ.

ಈ ದೊಡ್ಡಮಟ್ಟದ ಸಾಧನೆ ಮಾಡಲು ಕಾಲೇಜಿನ ಆಡಳಿತ ಮಂಡಳಿಯ ಬಲವಾದ ಬೆಂಬಲ ಹಾಗೂ Iಅಖಿ ಅಕಾಡೆಮಿ ಸಹಯೋಗದೊಂದಿಗೆ UiPath ಎಂಬ ಕಂಪನಿ ಮೂಲಕ ಸಾಧಿಸಲಾಯಿತು.

ತಾಂತ್ರಿಕವಾಗಿ ಸಮರ್ಥರು, ಉದ್ಯಮಶೀಲ ವೃತ್ತಿಪರರನ್ನು ಬೆಳೆಸುವ ನಿಟ್ಟಿನಲ್ಲಿ ರಾಜೀವ್ ತಾಂತ್ರಿಕ ಮಹಾವಿದ್ಯಾಲಯದ ಧ್ಯೇಯ ಈ ಯಶಸ್ಸನ್ನು ಪ್ರತಿಬಿಂಬಿಸುತ್ತದೆ.

ಈ ಸಾಧನೆಗೈದ ವಿದ್ಯಾರ್ಥಿಗಳನ್ನು ರಾಜೀವ್ ಶಿಕ್ಷಣ ಸಂಸ್ಥೆ ಅಧ್ಯಕ್ಷರಾದ ಡಾ.ರಚನಾ ರಾಜೀವ್, ಉಪಾಧ್ಯಕ್ಷ ಡಾ. ರಂಜಿತ್ ರಾಜೀವ್, ಕಾರ್ಯದರ್ಶಿ ಡಾ. ಬಿ.ಎನ್. ರತ್ನ ಹಾಗೂ ಆಡಳಿತ ಮಂಡಳಿ, ಪ್ರಾಂಶುಪಾಲ ಡಾ. ಮಹೇಶ್ ಪಿ.ಕೆ., ಕಾರ್ಯಕ್ರಮದ ಸಂಯೋಜಕ ಮೆಕ್ಯಾನಿಕಲ್ ವಿಭಾಗದ ಸಹಾಯಕ ಪ್ರಾದ್ಯಾಪಕ ಹನೋಕ್ ಪಿ., ಎಲ್ಲಾ ವಿಭಾಗದ ಮುಖ್ಯಸ್ಥರು, ಬೋಧಕ ಹಾಗೂ ಬೋಧಕೇತರ ವರ್ಗದವರು ಹಾರ್ದಿಕವಾಗಿ ಅಭಿನಂದಿಸಿದ್ದಾರೆ.

error: Content is protected !!