ಹಾಸನ : ಕರ್ನಾಟಕ ವೈಟ್ ಲಿಫ್ಟರ್ಸ್ ಸಂಸ್ಥೆ, ಬೆಂಗಳೂರು ಇವರ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ನವೆಂಬರ್ 07 ರಿಂದ 09, 2025ರ ವರೆಗೆ ರಾಜ್ಯ ಮಟ್ಟದ ವೈಟ್ ಲಿಫ್ಟಿಂಗ್ ಚಾಂಪಿಯನ್‌ಷಿಪ್ ಸ್ಪರ್ಧೆ ನಡೆಯಲಿದೆ.
ಈ ಸ್ಪರ್ಧೆಯಲ್ಲಿ ಭಾಗವಹಿಸಲು ಹಾಸನ ಜಿಲ್ಲಾ ತಂಡವನ್ನು ಆಯ್ಕೆ ಮಾಡಿ ಕಳುಹಿಸುವ ವ್ಯವಸ್ಥೆಯನ್ನು ಹಾಸನ ಜಿಲ್ಲಾ ವೈಟ್ ಲಿಫ್ಟರ್ಸ್ ಸಂಸ್ಥೆ ಕೈಗೊಂಡಿದೆ ಎಂದು ಸಂಸ್ಥೆಯ ಅಧ್ಯಕ್ಷ ಸುರೇಶ್ ಕುಮಾರ್ ಎಚ್.ಎಂ.ಟಿ. ತಿಳಿಸಿದ್ದಾರೆ.
ಹಾಸನ ಜಿಲ್ಲೆಯ ವೈಟ್ ಲಿಫ್ಟರ್ಸ್‌ಗಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಬಯಸಿದರೆ ತಮ್ಮ ಹೆಸರನ್ನು ಅಕ್ಟೋಬರ್ 05, 2025ರೊಳಗೆ ನೋಂದಾಯಿಸಿಕೊಳ್ಳಬೇಕು.
ಸಂಪರ್ಕಿಸಲು – ಸಂಸ್ಥೆಯ ಕಾರ್ಯದರ್ಶಿ ಸಚ್ಚಿನ್ ಪ್ರಭು (ಮೊ. 8660874875) ಮತ್ತು ಖಜಾಂಚಿ ಜೆ.ಐ. ನಿರಂಜನ್ ರಾಜ್ (ಮೊ. 9900839475) ಅವರನ್ನು ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.
ಸ್ಪರ್ಧೆಯ ವಯೋಮಿತಿಗಳು
ಯುವ ಬಾಲಕ, ಬಾಲಕಿಯರು : 01-01-2008 ರಿಂದ 31-12-2012
ಜೂನಿಯರ್ ಮಹಿಳಾ, ಪುರುಷರು : 01-01-2005 ರಿಂದ 31-12-2010
ಸೀನಿಯರ್ ಮಹಿಳಾ, ಪುರುಷರು : 01-01-2010 ನಂತರ ಜನಿಸಿದವರು
ಹಾಸನ ಜಿಲ್ಲೆಯ ಹೆಚ್ಚಿನ ಸಂಖ್ಯೆಯ ವೈಟ್ ಲಿಫ್ಟರ್ಸ್‌ಗಳು ಈ ಅವಕಾಶವನ್ನು ಬಳಸಿಕೊಂಡು ತಮ್ಮ ಪ್ರತಿಭೆಯನ್ನು ರಾಜ್ಯ ಮಟ್ಟದಲ್ಲಿ ತೋರಿಸಬೇಕೆಂದು ಸಂಸ್ಥೆಯ ಅಧ್ಯಕ್ಷರು ಕೋರಿದ್ದಾರೆ










