14.6 C
Munich
Home News ಹಾಸನ: ಮಹಾರಾಜಾ ಉದ್ಯಾನದ ನಗರಸಭೆ ಹೆಲ್ತ್ ಜಿಮ್ ನಲ್ಲಿ ಆಯುಧ ಪೂಜೆ ನೆರವೇರಿಸಿದ ಮೇಯರ್ ಗಿರೀಶ್...

ಹಾಸನ: ಮಹಾರಾಜಾ ಉದ್ಯಾನದ ನಗರಸಭೆ ಹೆಲ್ತ್ ಜಿಮ್ ನಲ್ಲಿ ಆಯುಧ ಪೂಜೆ ನೆರವೇರಿಸಿದ ಮೇಯರ್ ಗಿರೀಶ್ ಚೆನ್ನವೀರಪ್ಪ

weapon worship ceremony was held on Tuesday at the Health Gym in Maharaja Park in the city.

ಹಾಸನ : ನಗರದ ಮಹಾರಾಜಾ ಪಾರ್ಕ್‌ನ ಹೆಲ್ತ್ ಜಿಮ್‌ನಲ್ಲಿ ಮಂಗಳವಾರ ಆಯುಧ ಪೂಜೆ ಸಮಾರಂಭ ನೆರವೇರಿತು.

ಮಹಾನಗರ ಪಾಲಿಕೆ ಮೇಯರ್ ಗಿರೀಶ್ ಚನ್ನವೀರಪ್ಪ ಹಾಗೂ ಉಪ ಮೇಯರ್ ಹೇಮಲತಾ ಕಮಲ್ ಕುಮಾರ್ ದೇವರು ಹಾಗೂ ಜಿಮ್ ಸಾಮಾಗ್ರಿಗಳಿಗೆ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಸಿಟಿ‌ ಕೋ-ಅಪರೇಟೀವ್ ಬ್ಯಾಂಕ್ ಅಧ್ಯಕ್ಷ ಕಮಲ್ ಕುಮಾರ್ ಅವರನ್ನು  ಅಭಿನಂದಿಸಲಾಯಿತು.

ಅಮೆಚೂರ್ ಬಾಡಿ ಬಿಲ್ಡರ್ ಸಂಸ್ಥೆಯ ಉಪಾಧ್ಯಕ್ಷ ಎಚ್.ಬಿ. ಸತೀಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಯೋಗ ಸಂಸ್ಥೆಯ ಅಧ್ಯಕ್ಷ ಕೃಷ್ಣಪ್ಪ, ಪಂಜ ಕುಸ್ತಿ ಸಂಸ್ಥೆಯ ಅಧ್ಯಕ್ಷ ಗಿರೀಗೌಡ, ಮಾಜಿ ನಗರಸಭಾ ಸದಸ್ಯ ಯಶವಂತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭಾಶಯ ಕೋರಿದರು.

ಇದೇ ಸಂದರ್ಭದಲ್ಲಿ ಬೆಂಗಳೂರಿನ ಯೋಗ ಗ್ಲೋಬಲ್ ಇಂಡಿಯಾ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ  ಯೋಗ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ಪಡೆದವರನ್ನು ಅಭಿನಂದಿಸಲಾಯಿತು.

 ನಿರಂಜನ್ ರಾಜ್ ಮತ್ತು ಮನೋಹರ್ ಅವರಿಗೆ ಯೋಗ ಜೀವಮಾನ ಸಾಧಕ ಬಿರುದು ಹಾಗೂ ನಾಗರಾಜ್ ಅವರಿಗೆ ಯೋಗ ಶ್ರೀ ಬಿರುದು ನೀಡಲಾಗಿತ್ತು. ಸಮಾರಂಭದಲ್ಲಿ ಇವರನ್ನು ವಿಶೇಷವಾಗಿ ಅಭಿನಂದಿಸಲಾಯಿತು.

ಕೈಲಾಸ್ ಸ್ವಾಗತ ಕೋರಿದರು. ಎ.ವಿ. ಮೋಹನ್ ಕುಮಾರ್ ವಂದನೆ ಸಲ್ಲಿಸಿದರು. ಜಿಮ್ ಸದಸ್ಯರು, ಕ್ರೀಡಾಭಿಮಾನಿಗಳು ಹಾಗೂ ಯೋಗಾಸಕ್ತರು ಇದ್ದರು

error: Content is protected !!