ಹಾಸನ : ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಸಂತೇಶಿವರ ಮೂಲದ ಖ್ಯಾತ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಅವರ ನಿಧನದ ಸುದ್ದಿ ಗ್ರಾಮಸ್ಥರಲ್ಲಿ ದುಃಖದ ಛಾಯೆ ಮೂಡಿಸಿದೆ.
ಭೈರಪ್ಪ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕಾಗಿ ಸಂತೇಶಿವರದ ನೂರಾರು ಗ್ರಾಮಸ್ಥರು ಇಂದು ಬೆಳಿಗ್ಗೆ ಎರಡು ಬಸ್‌ಗಳಲ್ಲಿ ಮೈಸೂರಿಗೆ ತೆರಳಿದ್ದಾರೆ. ಮಹಿಳೆಯರು, ಪುರುಷರು, ಯುವಕ-ಯುವತಿಯರು ಎಲ್ಲರೂ ತಮ್ಮ ಪ್ರೀತಿಯ ಸಾಹಿತ್ಯಶಿಲ್ಪಿಗೆ ಕೊನೆಯ ನಮನ ಸಲ್ಲಿಸಲು ಪಯಣ ಬೆಳೆಸಿದ್ದಾರೆ.
ಗ್ರಾಮದ ಹಲವಾರು ಹಿರಿಯರು ಹಾಗೂ ಭೈರಪ್ಪ ಅವರ ಕೃತಿಗಳ ಅಭಿಮಾನಿಗಳು ಮೈಸೂರಿನ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ತೆರಳಿದ್ದು, ಗ್ರಾಮದೆಲ್ಲೆಡೆ ಶೋಕದ ವಾತಾವರಣ ಆವರಿಸಿದೆ.










