ಹಾಸನ : ನಗರದ ಕಟ್ಟಿನಕೆರೆ ಮಾರ್ಕೆಟ್‌ನಲ್ಲಿ ಹತ್ತಾರು ವರ್ಷಗಳಿಂದ ವ್ಯಾಪಾರ ನಡೆಸುತ್ತಿರುವ ಹಾಲಿ ವರ್ತಕರ ಹಿತ ಕಾಪಾಡಲು ಬಿಜೆಪಿ ನಾಯಕ ಪ್ರೀತಮ್ ಗೌಡ ಭರವಸೆ ನೀಡಿದರು.
ಜಿಎಸ್ಟಿ ದರ ಇಳಿಕೆ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ವರ್ತಕರಿಗೆ ಸಿಹಿ ಹಂಚಿದ ನಂತರ ಅವರು ಮಾತನಾಡಿದರು.
ಮಳಿಗೆಗಳ ಇ-ಟೆಂಡರ್ ಪ್ರಕ್ರಿಯೆಯಲ್ಲಿ ಈಗಾಗಲೇ ವ್ಯಾಪಾರ ನಡೆಸುತ್ತಿರುವ 487 ವರ್ತಕರಿಗಷ್ಟೇ ಅವಕಾಶ ನೀಡಲಾಗುತ್ತಿದ್ದು, ಯಾವುದೇ ಕಾರಣಕ್ಕೂ ಹೊರಗಿನವರಿಗೆ ಅವಕಾಶ ನೀಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
“ನಾನು ಇಲ್ಲಿ ರಾಜಕಾರಣ ಮಾಡಲು ಬಂದಿಲ್ಲ. ವರ್ತಕರ ಪರವಾಗಿ ಹೋರಾಡಲು ಬದ್ಧನಾಗಿದ್ದೇನೆ. ಈ ಕುರಿತು ಅಗತ್ಯವಿದ್ದರೆ ಸಂಸದರು, ಶಾಸಕ ಮತ್ತು ವಿಧಾನಪರಿಷತ್ ಸದಸ್ಯರೊಂದಿಗೆ ಮಾತನಾಡುತ್ತೇನೆ” ಎಂದು ಪ್ರೀತಮ್ ಗೌಡ ಹೇಳಿದರು.
GST ಇಳಿಕೆ ಹಿನ್ನೆಲೆಯಲ್ಲಿ ವರ್ತಕರು ಹಾಗೂ ಗ್ರಾಹಕರಿಗೆ ಸಿಹಿ ತಿನಿಸಿ ಸಂಭ್ರಮಾಚರಣೆ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಶಾಸಕ ಸಿಮೆಂಟ್ ಮಂಜು, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಸೇರಿದಂತೆ ಹಲವು ಪಕ್ಷದ ನಾಯಕರು ಪ್ರೀತಮ್ ಗೌಡರಿಗೆ ಸಾಥ್ ನೀಡಿದರು.









