20.1 C
Munich
Home News ಹಾಸನ: ಸಾಲಬಾಧೆ ತಾಳಲಾರದೆ ರೈತ ಕೆಂಚಯ್ಯ ಆತ್ಮಹತ್ಯೆ

ಹಾಸನ: ಸಾಲಬಾಧೆ ತಾಳಲಾರದೆ ರೈತ ಕೆಂಚಯ್ಯ ಆತ್ಮಹತ್ಯೆ

In a heartbreaking incident, farmer Kenchaiah (75) committed suicide by consuming poison in Gangur village of Arakalgud taluk, unable to bear the burden of debt.

ಹಾಸನ : ಅರಕಲಗೂಡು ತಾಲ್ಲೂಕಿನ ಗಂಗೂರು ಗ್ರಾಮದಲ್ಲಿ ಸಾಲಬಾಧೆ ತಾಳಲಾರದೆ ರೈತ ಕೆಂಚಯ್ಯ (75) ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಹೃದಯವಿದ್ರಾವಕ ಘಟನೆ ನಡೆದಿದೆ.

ಕೆಂಚಯ್ಯ ಕೃಷಿಗಾಗಿ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ 3 ಲಕ್ಷ ಹಾಗೂ ರಾಮನಾಥಪುರದ ಕೆನರಾ ಬ್ಯಾಂಕ್‌ನಲ್ಲಿ 2 ಲಕ್ಷ ಸೇರಿ ಒಟ್ಟು ಐದು ಲಕ್ಷ ರೂ. ಸಾಲ ಪಡೆದಿದ್ದರು. ಸಾಲ ಮರುಪಾವತಿಸುವಂತೆ ಬ್ಯಾಂಕ್‌ಗಳಿಂದ ನೋಟಿಸ್ ಬಂದ ಹಿನ್ನೆಲೆಯಲ್ಲಿ ಆತಂಕಗೊಂಡ ಅವರು ವಿಷ ಸೇವಿಸಿ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಘಟನೆಯ ನಂತರ ಶಾಸಕ ಎ. ಮಂಜು ಹಾಗೂ ಗ್ರೇಡ್–2 ತಹಸೀಲ್ದಾರ್ ಸ್ವಾಮಿ ಸ್ಥಳಕ್ಕೆ ತೆರಳಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಸ್ಥಳಕ್ಕೆ ಕೊಣನೂರು ಪೊಲೀಸ್ ಠಾಣೆ ಸಿಬ್ಬಂದಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

error: Content is protected !!