13.5 C
Munich
Home News ಸಕಲೇಶಪುರ: ನೂತನ ಕುಡಿಯುವ ನೀರಿನ ಘಟಕ ಉದ್ಘಾಟನೆ –ಅಭಿವೃದ್ಧಿ ಕೆಲಸವೇ ಶಾಶ್ವತ: ಸಿಮೆಂಟ್ ಮಂಜು

ಸಕಲೇಶಪುರ: ನೂತನ ಕುಡಿಯುವ ನೀರಿನ ಘಟಕ ಉದ್ಘಾಟನೆ –ಅಭಿವೃದ್ಧಿ ಕೆಲಸವೇ ಶಾಶ್ವತ: ಸಿಮೆಂಟ್ ಮಂಜು

Power is not permanent. The development work we have done is permanent,” opined Cement Manju.

ಸಕಲೇಶಪುರ:ಅಧಿಕಾರ ಶಾಶ್ವತವಲ್ಲ. ನಾವು ಮಾಡಿದ ಅಭಿವೃದ್ದಿ ಕೆಲಸವೇ ಶಾಶ್ವತ ಎಂದು ಶಾಸಕ ಸಿಮೆಂಟ್ ಮಂಜು ಅಭಿಪ್ರಾಯಪಟ್ಟರು.

ಪಟ್ಟಣದ ರಾಜಬೀದಿಯ ಎಲ್.ಎಂ.ರಸ್ತೆಯ ಸರ್ಕಲ್‌ನಲ್ಲಿ ನೂತನ ಕುಡಿಯುವ ನೀರಿನ ಘಟಕಕ್ಕೆ ಚಾಲನೆ ನೀಡುವ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಿಮೆಂಟ್ ಮಂಜು ಅವರು, “ಇಂದು ಎ.ಕೆ. ಸಾಗರ್ ವೃತ್ತದಲ್ಲಿ ದ್ವಜಕಂಬ ಹಾಗೂ ಸಾರ್ವಜನಿಕರಿಗಾಗಿ ಕುಡಿಯುವ ನೀರಿನ ಘಟಕ ಸ್ಥಾಪನೆಯಾಗಿದೆ. ಇದು ಕೇವಲ ಅಭಿವೃದ್ದಿ ಕೆಲಸವಲ್ಲ, ಸ್ಥಳೀಯ ವರ್ತಕರು ಹಾಗೂ ಸಂಘಟನೆಗಳ ಹೋರಾಟದ ಪ್ರತಿಫಲವೂ ಹೌದು” ಎಂದು ಹೇಳಿದರು.

“ನಾವು ಹುಟ್ಟಿದ ತಾಲ್ಲೂಕಿನಲ್ಲಿ ‌ಒಳ್ಳೆಯ  ಕೆಲಸ ಮಾಡಲು ಪ್ರತಿಯೊಬ್ಬರೂ ಬದ್ಧರಾಗಿರಬೇಕು. ನಗರದ ಶುದ್ಧತೆಯಿಂದಲೇ ಸಕಲೇಶಪುರ ಬೆಳೆದು ನಿಲ್ಲಬಹುದು. ಜನಪ್ರತಿನಿಧಿಗಳು ಹಾಗೂ ಸಂಘ ಸಂಸ್ಥೆಗಳ ಮುಂದಾಳತ್ವದಿಂದ ಮಾತ್ರ ಅಭಿವೃದ್ಧಿ ಪಥದಲ್ಲಿ ಸಾಗಲು ಸಾಧ್ಯ. ದೇಶ ಸುಬೀಕ್ಷೆಯಾದರೆ ರಾಜ್ಯ ಸುಬೀಕ್ಷೆಯಾಗುತ್ತದೆ, ರಾಜ್ಯ ಸುಬೀಕ್ಷೆಯಾದರೆ ನಗರ-ಪಟ್ಟಣ ಹಾಗೂ ಹಳ್ಳಿಗಳ ಉದ್ದಾರವಾಗುತ್ತದೆ. ಹೀಗಾಗಿ ಸಾರ್ವಜನಿಕರ ಅನುಕೂಲಕ್ಕೆ ಮಾಡುವ ಪ್ರತಿಯೊಂದು ಕೆಲಸ ಮಾನಿಕ್ಯದಂತಿದೆ. ಅಧಿಕಾರ ಯಾರಿಗೂ ಶಾಶ್ವತವಲ್ಲ. ಆದ್ದರಿಂದ ನಮ್ಮ ಅಧಿಕಾರಾವಧಿಯಲ್ಲಿ ತಾಲೂಕಿನ ಬೆಳವಣಿಗೆಗೆ ಪ್ರಾಮುಖ್ಯತೆ ನೀಡುವುದು ಅವಶ್ಯ” ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯರಾದ ಸರಿತಾ ಗಿರೀಶ್, ಇಸ್ರಾರ್, ವನಜಾಕ್ಷಿ, ಪುರಸಭೆ ಮುಖ್ಯಾಧಿಕಾರಿ ಮಹೇಶ್ವರಪ್ಪ, ಕರವೇ ಅಧ್ಯಕ್ಷ ರಮೇಶ್ ಪೂಜಾರಿ, ವೀರಯೋದ ಎ.ಕೆ. ಸಾಗರ್ ಸಂಘದ ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ಜಮೀಲ್, ಕಾರ್ಯದರ್ಶಿ ಜಗದೀಶ್, ಪದಾಧಿಕಾರಿಗಳಾದ ಸಲೀಂ, ಚಿಂಟೂ ಹಾಗೂ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಜೈ ಬೀಮ್ ಮಂಜು ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

error: Content is protected !!