11.1 C
Munich
Home News ಚನ್ನರಾಯಪಟ್ಟಣ: ಸೆ.22 ರಿಂದ ಹಿರೀಸಾವೆಯಲ್ಲಿ ದಸರಾ ಮಹೋತ್ಸವ

ಚನ್ನರಾಯಪಟ್ಟಣ: ಸೆ.22 ರಿಂದ ಹಿರೀಸಾವೆಯಲ್ಲಿ ದಸರಾ ಮಹೋತ್ಸವ

ಚನ್ನರಾಯಪಟ್ಟಣ: ತಾಲ್ಲೂಕಿನ ಹಿರೀಸಾವೆ ಗ್ರಾಮದಲ್ಲಿ ಸೆ.22 ರಿಂದ ಅ.2 ರವರಿಗೆ ಶ್ರೀ ಚೌಡೇಶ್ವರಿ ದೇವಿಯ 14ನೇ ವರ್ಷದ ನವರಾತ್ರಿ ಹಾಗೂ ದಸರಾ ಉತ್ಸವ ವಿಜೃಂಭಣೆಯಿಂದ ನಡೆಯಲಿದೆ.

ಸೆ.22 ಸೋಮವಾರ ಬೆಳಗ್ಗೆ 10 ಗಂಟೆಗೆ ಉಯ್ಯಾಲೆ ಕಂಬದ ಹತ್ತಿರ ಶ್ರೀ ಚೌಡೇಶ್ವರಿ ದೇವಿಯ ನವರಾತ್ರಿ ಹಾಗೂ ದಸರಾ ಮಹೋತ್ಸವ ಕಾರ್ಯಕ್ರಮಕ್ಕೆ ಶಾಸಕ ಸಿ.ಎನ್.ಬಾಲಕೃಷ್ಣ ಚಾಲನೆ ನೀಡಲಿದ್ದಾರೆ. ಮಾಜಿ ಎಂಎಲ್ಸಿ ಗೋಪಾಲಸ್ವಾಮಿ, ಕರ್ನಾಟಕ ವಿದ್ಯುತ್ ಕಾರ್ಖಾನೆ ನಿಗಮದ ಅಧ್ಯಕ್ಷ ಹೆಚ್.ಸಿ.ಲಲಿತ್ ರಾಘವ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಮ್ಮ ಬೋರಯ್ಯ, ಸೊಸೈಟಿ ಅಧ್ಯಕ್ಷ ಮಹೇಶ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹೆಚ್.ಈ.ಬೋರಣ್ಣ ಹಾಗೂ ಗಣ್ಯರು ದೀಪ ಬೆಳಗಿಸಲಿದ್ದಾರೆ.

ಸೆ.23 ಮಂಗಳವಾರ ಮಧ್ಯಾನ 12 ಗಂಟೆಗೆ ದಿ.ಹೆಚ್.ಸಿ. ಶ್ರೀಕಂಠಯ್ಯನವರ ಕುಟುಂಬದವರಿಂದ ಚಂಡಿಕಾ ಹೋಮ, ಪೂರ್ಣಾಹುತಿ ಜರುಗಲಿದ್ದು, ಸಂಜೆ 7 ಗಂಟೆಗೆ ಶ್ರೀ ಗದ್ದೆ ಕೆಂಪಮ್ಮ ದೇವಿ ಒಕ್ಕಲು ಮನೆತನದವರಿಂದ ಶ್ರೀ ಚೌಡೇಶ್ವರಿ ದೇವಿಯ ದೀಪೋತ್ಸವ ನೆರವೇರಲಿದೆ.

ಸೆ.24 ಬುಧವಾರ ಮಧ್ಯಾಹ್ನ 12 ಗಂಟೆಗೆ ಧರ್ಮದರ್ಶಿ ಶ್ರೀ ಫಣೀಶ್ ಕುಟುಂಬದವರಿಂದ ಹೋಮ, ಹವನ ಹಾಗೂ ವಿಶೇಷ ಪೂಜಾ ಕೈಂಕರ್ಯಗಳು ನೆರವಿರಲಿವೆ. ಸಂಜೆ 7 ಗಂಟೆಗೆ ಶ್ರೀರಂಗನಾಥ ಸ್ವಾಮಿ ಒಕ್ಕಲು ಮನೆತನದವರಿಂದ ಶ್ರೀ ಚೌಡೇಶ್ವರಿ ದೇವಿಯ ಅಶ್ವ ವಾಹನೋತ್ಸವ ನಡೆಯಲಿದೆ.

ಸೆ.25 ಗುರುವಾರ ಸವಿತಾ ಶಿವನಂಜೇಗೌಡ ಅವರಿಂದ ಹೋಮ ಕಾರ್ಯಕ್ರಮ ಜರುಗಲಿದ್ದು, ಶ್ರೀ ವಿಶ್ವಕರ್ಮ ಸಮಾಜದವರಿಂದ ಚೌಡೇಶ್ವರಿ ದೇವಿಯ ಸಿಂಹ ವಾಹನೋತ್ಸವ ನೆರವಿರಲಿದೆ.

ಸೆ.26 ಶುಕ್ರವಾರ ಎಸ್ ಬಿ ಐ ನಿವೃತ್ತ ವ್ಯವಸ್ಥಾಪಕ ಕೃಷ್ಣನ್ ಅವರಿಂದ ದೇವಿಗೆ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಲಿದ್ದು ಸಂಜೆ 7 ಗಂಟೆಗೆ ಕಣತೂರು ಶ್ರೀ ಕೆಂಪಮ್ಮ ದೇವಿ ಒಕ್ಕಲು ಮನೆತನದವರಿಂದ ಶ್ರೀ ಚೌಡೇಶ್ವರಿ ದೇವಿಯ ಚಿಕ್ಕ ರಥೋತ್ಸವ ನಡೆಯಲಿದೆ.

ಸೆ.27 ಶನಿವಾರ ಶ್ರೀ ಗಂಗಾಮತಸ್ಥರು ಶ್ರೀ ಚೌಡೇಶ್ವರಿ ದೇವಿಯ ಅಶ್ವ ವಾಹನೋತ್ಸವ ಕೈಗೊಳ್ಳಲಿದ್ದು ಸೆ.28 ಭಾನುವಾರ ಕೂಡಿಹಳ್ಳಿ ಶ್ರೀ ಮಾಯಮ್ಮ ದೇವಿ ಒಕ್ಕಲು ಮನೆತನದಿಂದ ಶ್ರೀ ಚೌಡೇಶ್ವರಿ ದೇವಿಯ ಸಿಂಹ ವಾಹನೋತ್ಸವ ನಡೆಯಲಿದೆ.

ಸೆ.29 ಸೋಮವಾರ ಮೇಲುಕೋಟೆ ಶ್ರೀ ಚೆಲುವರಾಯಸ್ವಾಮಿ ಒಕ್ಕಲುಗಳಿಂದ ಉಯ್ಯಾಲೆ ಉತ್ಸವ ಹಾಗೂ ಸೆ.30 ರ ಮಂಗಳವಾರ ಶ್ರೀ ಕುಂಭೇಶ್ವರ ಸ್ವಾಮಿ ಸೇವಾ ಸಮಿತಿ ವತಿಯಿಂದ ಅಶ್ವ ವಾಹನೋತ್ಸವ ವೈಭವದಿಂದ ಜರುಗಲಿದೆ.

ಆ.1 ರ ಬುಧವಾರ ವೀರಶೈವ ಸಮಾಜದ ವತಿಯಿಂದ ದೇವಿಯ ಸಿಂಹ ವಾಹನೋತ್ಸವ ಹಾಗೂ ಸೆ.2 ರಂದು ಗುರುವಾರ ಶ್ರೀ ಚೌಡೇಶ್ವರಿ ಸೇವಾ ಸಮಿತಿ ವತಿಯಿಂದ ಶ್ರೀ ಚೌಡೇಶ್ವರಿ ದೇವಿ ದಸರಾ ಮಹೋತ್ಸವ ವೈಭವದಿಂದ ಆಚರಣೆಗೊಳ್ಳಲಿದೆ.

ಅ.2 ರ ಬುಧವಾರ ರಾತ್ರಿ 8 ಗಂಟೆಗೆ ಶ್ರೀ ವಿದ್ಯಾ ಗಣಪತಿ ಉತ್ಸವ ವೈಭವದಿಂದ ಚುರುಗಲಿದ್ದು ಬೆಳಗ್ಗಿನ ಜಾವ ಹಿರೀಸಾವೆ ದೊಡ್ಡ ಕೆರೆಯಲ್ಲಿ ವಿಸರ್ಜಿಸಲಾಗುವುದು.

ಶ್ರೀ ಚೌಡೇಶ್ವರಿ ಉತ್ಸವದಲ್ಲಿ ಶ್ರೀ ಗಣೇಶ ಮೂರ್ತಿ, ಶ್ರೀ ಬಸವೇಶ್ವರ, ಶ್ರೀ ಸಿದ್ದಲಿಂಗೇಶ್ವರ, ಶ್ರೀ ಸಿದ್ದೇಶ್ವರ, ಶ್ರೀ ಕಾಳಿಕಾಂಬ ದೇವತೆ, ಶ್ರೀ ಉಡಿಸಲಮ್ಮ ದೇವಿ, ಶ್ರೀ ಲಕ್ಷ್ಮಿ ದೇವಿ, ಶ್ರೀ ಮುದ್ರೆಕಲ್ ಆಂಜನೇಯ ಸ್ವಾಮಿ ಹಾಗೂ ಶ್ರೀ ಚನ್ನಕೇಶ್ವರ ಸ್ವಾಮಿ ಪಾಲ್ಗೊಳ್ಳುವುದು ವಿಶೇಷವಾಗಿದೆ.

ದಸರಾ ಮಹೋತ್ಸವದಲ್ಲಿ ಮಂಗಳವಾದ್ಯ, ದೀಪಾಲಂಕಾರ, ಕೀಲು ಕುದುರೆ ಗೊಂಬೆಮೇಳ, ಸೋಮನ ಕುಣಿತ, ಕೂಲಾಟ ಹಾಗೂ ಇತರೆ ಕಲಾತಂಡಗಳು ಮೇಲಾಯ್ಸಲಿವೆ ಎಂದು ಶ್ರೀ ಚೌಡೇಶ್ವರಿ ದೇವಿಯ ದೇಗುಲದ ಧರ್ಮದರ್ಶಿ ಹೆಚ್.ವಿ.ಫಣೀಶ್ ತಿಳಿಸಿದ್ದಾರೆ.

error: Content is protected !!