ಅರಕಲಗೂಡು: ರಾಜ್ಯದ ನಾಡಹಬ್ಬ ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತೆ ಭಾನುಮುಷ್ತಾಕ್ ಅವರನ್ನು ಆಹ್ವಾನಿಸಿರುವ ಸರ್ಕಾರದ ನಿರ್ಧಾರ ವಿವಾದಕ್ಕೆ ಕಾರಣವಾಗಿದೆ. ಹಾಸನ ಜಿಲ್ಲೆಯ ಅರಕಲಗೂಡು ಪಟ್ಟಣದಲ್ಲಿ ಜೆಡಿಎಸ್ ಶಾಸಕ ಎ. ಮಂಜು ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.
ಭಾನುಮುಷ್ತಾಕ್ ಉತ್ತಮ ಲೇಖಕಿ. ಆದರೆ ಅವರು ಹಿಂದೆಯೇ ಅರಿಶಿನ, ಕುಂಕುಮ, ಸಂಪ್ರದಾಯಗಳ ಬಗ್ಗೆ ನಂಬಿಕೆ ಇಲ್ಲ ಎಂದು ಹೇಳಿದ್ದರು. ಇಂತಹವರಿಂದ ದಸರಾ ಉದ್ಘಾಟನೆ ಮಾಡಿಸುವುದು ಸರಿಯಲ್ಲ
ಎಂದು ಎ. ಮಂಜು ಅಭಿಪ್ರಾಯಪಟ್ಟರು.
ಸರ್ಕಾರವು “ಅವರು ಬೂಕರ್ ಪ್ರಶಸ್ತಿ ವಿಜೇತೆ” ಎಂಬ ಕಾರಣಕ್ಕೆ ಆಯ್ಕೆ ಮಾಡಿರುವುದಾಗಿ ತಿಳಿಸಿದ್ದು, ಮಂಜು ಪ್ರತಿಕ್ರಿಯೆಯಲ್ಲಿ, ನಿಜವಾದ ಪ್ರಶಸ್ತಿ ಸಿಕ್ಕಿರುವುದು ದೀಪಾಬಸ್ತಿಗೆ. ಭಾನುಮುಷ್ತಾಕ್ ಅವರು ಅನುವಾದಕ್ಕೆ ಪ್ರಶಸ್ತಿ ಪಡೆದಿದ್ದಾರೆ.
ನಮ್ಮ ನಾಡ ದೇವತೆಗೆ ಪೂಜೆ ಮಾಡುವಾಗ ಸಂಪ್ರದಾಯ ಪಾಲಿಸಬೇಕು. ಸಾಧ್ಯವಿಲ್ಲದಿದ್ದರೆ ಉದ್ಘಾಟನೆಯನ್ನು ತಿರಸ್ಕರಿಸುವುದು ಉತ್ತಮ,” ಎಂದು ಹೇಳಿದರು.










