ಬೇಲೂರು: ಕ್ಷೇತ್ರದ ಅಭಿವೃದ್ಧಿ ಬಗ್ಗೆ ಕನಸು ಕಂಡಿದ್ದು, ಪತ್ರಕರ್ತರ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಅಭಿವೃದ್ಧಿ ಕೆಲಸಗಳನ್ನು ಮಾಡುವುದಲ್ಲದೆ, ಪತ್ರಕರ್ತರ ಕ್ಷೇಮಾಭಿವೃದ್ಧಿಗೂ ಹೆಚ್ಚಿನ ಸಹಕಾರ ನೀಡಲಾಗುವುದು ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.
ಪತ್ರಿಕಾ ದಿನಾಚರಣೆ ಅಂಗವಾಗಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಪಟ್ಟಣದ ಡಾ.ಅಂಬೇಡ್ಕರ್ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಮಾಧ್ಯಮ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಶಾಸಕ ಸುರೇಶ್, ಮಾಧ್ಯಮ ಕ್ಷೇತ್ರ ಸಮಾಜಮುಖಿಯಾಗಿ ಕೆಲಸ ಮಾಡುವ ಮೂಲಕ ನ್ಯಾಯವನ್ನು ಎತ್ತಿಡಿಯುವ ಕೆಲಸ ಮಾಡುತ್ತಿದೆ. ಪತ್ರಕರ್ತರ ಕ್ಷೇಮಾಭಿವೃದ್ಧಿಗೆ ಖಂಡಿತವಾಗಿ ನನ್ನ ವೈಯಕ್ತಿಕ ಹಾಗೂ ಇತರರಿಂದ ಹೆಚ್ಚಿನ ಸಹಕಾರ ನೀಡಲಾಗುವುದು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಹೆಚ್.ಬಿ.ಮದನ್‌ಗೌಡ ಮಾತನಾಡಿ, ಆಧುನಿಕ ಆಹಾರ ಪದ್ಧತಿ ಹಾಗೂ ಮಾನಸಿಕ ಒತ್ತಡದಿಂದ ಕೆಲಸ ಮಾಡುವ ಪತ್ರಕರ್ತರ ಚಿಕಿತ್ಸೆಗಾಗೆ ನೆರವಾಗಲು ಕ್ಷೇಮಾಭಿವೃದ್ಧಿ ನಿಧಿಗೆ ಶಾಸಕರು ಹೆಚ್ಚು ಹಣ ನೀಡಲು ಸಹಕಾರಿಸಬೇಕು. ಮಾಜಿ ಶಾಸಕ ಕೆ.ಎಸ್.ಲಿಂಗೇಶ್, ೨ ಲಕ್ಷ ರೂಪಾಯಿ ನೀಡಿದ್ದಾರೆ. ಇದೇ ರೀತಿ ಶಾಸಕರು, ಜನಪ್ರತಿನಿಧಿಗಳು ಸಹಕಾರ ನೀಡಬೇಕು. ಮತ್ತು ಪತ್ರಕರ್ತರ ಸಂಘದ ಪ್ರತಿಯೊಬ್ಬ ಸದಸ್ಯರು ಕ್ರಿಯಾಶೀಲರಾಗಿ ಕೆಲಸ ಮಾಡಬೇಕು ಎಂದರು.
ಮಾಜಿ ಶಾಸಕ ಕೆ.ಎಸ್.ಲಿಂಗೇಶ್, ಮಾತನಾಡಿ ಪತ್ರಿಕಾ ರಂಗ ಒಂದು ರೀತಿಯಲ್ಲಿ ಪೊಲೀಸರಿಗಿಂತ ಮುಂಚೆಯೇ ಕಾರ್ಯ ಪ್ರವೃತ್ತರಾಗಿ ಕೆಲಸ ನಿರ್ವಹಿಸುತ್ತಾರೆ. ಪತ್ರಕರ್ತರ ಜೀವನ ಸುಲಭವಲ್ಲ ಹಗಲು ರಾತ್ರಿ ಜೀವನದ ಹಂಗು ತೊರೆದು ಸತ್ಯಾನ್ವೇಷಣೆ ಮಾಡುವ ಪತ್ರಕರ್ತರು ಸಹ ಯೋಧರಿದ್ದಂತೆ ಅವರ ಕಾರ್ಯಕ್ಷಮತೆಗೆ ಪ್ರಾಮಾಣಿಕ ಕೆಲಸಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಅಲ್ಲದೆ ನಕಲಿ ಪತ್ರಕರ್ತರ ಹಾವಳಿ ತಡೆದು ಪಾರದರ್ಶಕತೆಯ ಸುದ್ದಿಯನ್ನ ಪ್ರಕಟಿಸುವಂತೆ ತಿಳಿಸಿದರು.
ಇದೇ ಸಂದರ್ಭ ಪತ್ರಕರ್ತರಾದ ರವಿಹೊಳ್ಳ, ದಿನೇಶ ಬೆಳ್ಳವಾರ, ಎಂ.ರಮೇಶ್, ಸುನೀಲ್, ಬಿ.ಕೆ.ರಮೇಶ್, ಬಿ.ಆರ್.ಮಹೇಶ್, ವಿತರಕರಾದ ಸಚಿನ್, ಪ್ರವೀಣಕುಮಾರ್‌ರನ್ನು ಸನ್ಮಾನಿಸಲಾಯಿತು.
ಪುರಸಭೆ ಅಧ್ಯಕ್ಷ ಉಷಾ, ತಹಸೀಲ್ದಾರ್ ಶ್ರೀಧರ ಕಂಕನವಾಡಿ, ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ, ಪತ್ರಕರ್ತರ ಸಂಘದ ಅಧ್ಯಕ್ಷ ರಘುನಾಥ್, ಜಿಲ್ಲಾ ಉಪಾಧ್ಯಕ್ಷ ಮೋಹನ್ ಕುಮಾರ್,ಪಿಎಸ್‌ಐ ಶಿವನಗೌಡ ಪಾಟೀಲ್, ಪತ್ರಕರ್ತರ ಸಂಘದಕಾರ್ಯದರ್ಶಿ ಶಿವರಾಜ್, ಹೆಬ್ಬಾಳು ಹಾಲಪ್ಪ, ಮಲ್ಲೇಶ, ಎನ್.ಅನಂತು, ಲಕ್ಷ್ಮಣ, ರಾಘವೇಂದ್ರ ಹೊಳ್ಳ, ವೆಂಕಟೇಶ್, ಭಾರತೀಗೌಡ, ಕುಮಾರ್, ಗಣೇಶ, ವಿಜಯ್ ಕುಮಾರ್, ಲೋಹಿತ ಸೇರಿದಂತೆ ಇತರರಿದ್ದರು.










