ಅರಕಲಗೂಡು: ಹೈನುಗಾರಿಕೆ ಲಾಭದಾಯಕ ಉದ್ಯಮವಾಗಿದ್ದು ರೈತರು ಹಸುಗಳ ಸಾಕಾಣಿಕೆಗೆ ಹೆಚ್ಚು ಒತ್ತು ನೀಡಬೇಕು ಎಂದು ಶಾಸಕ ಎ. ಮಂಜು ಹೇಳಿದರು.
ತಾಲ್ಲೂಕಿನ ಅಗ್ರಹಾರ ಗ್ರಾಮದಲ್ಲಿ ಇತ್ತೀಚೆಗೆ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ರೈತರಿಗೆ ಹೈನುಗಾರಿಕೆ ಆರ್ಥಿಕವಾಗಿ ಲಾಭದಾಯಕವಾಗಿದೆ. ಹಸುಗಳನ್ನು ಸಾಕುವುದರಿಂದ ಹಾಲಿನ ಜತೆಗೆ ಕೊಟ್ಟಿಗೆ ಗೊಬ್ಬರ ಹೆಚ್ಚಿಸಿಕೊಂಡು ಬೆಳೆ ಜಮೀನು ಫಲವತ್ತತೆ ಉಳಿಸಿಕೊಳ್ಳಬಹುದು. ಹೀಗಾಗಿ ರೈತರು ಕೃಷಿ ಜತೆಗೆ ಉಪ ಕಸುಬಾಗಿ ಹೈನುಗಾರಿಕೆ ಅವಲಂಬಿಸುವುದು ಒಳಿತು ಎಂದರು.
ಅರಕಲಗೂಡು ತಾಲೂಕು ಮುಂಡಗೋಡು ಕೊಪ್ಪಲು ಗ್ರಾಮದಲ್ಲಿ ೨೦ ಲಕ್ಷ ರೂ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಾರಿಗೆ ಶಾಸಕ ಎ. ಮಂಜು ಇತ್ತೀಚೆಗೆ ಭೂಮಿಪ್ರಜೆ ನೆರವೇರಿಸಿದರು. ಮುಖಂಡರಾದ ಮುತ್ತಿಗೆ ರಾಜೇಗೌಡ, ನರಸೇಗೌಡ, ಗ್ರಾಮಸ್ಥರು ಇದ್ದರು.










