0.9 C
Munich
Home ಜಿಲ್ಲೆ ಸ್ಕಾಲರ್ಸ್ ಇಂಟರ್‌ನ್ಯಾಷನಲ್‌ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

ಸ್ಕಾಲರ್ಸ್ ಇಂಟರ್‌ನ್ಯಾಷನಲ್‌ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

ಹಾಸನ: ಸ್ಕಾಲರ್ಸ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತಾಧಿಕಾರಿ ಡಾ. ಚಂದ್ರಶೇಖರ್, ಕಾರ್ಯದರ್ಶಿ ಮಮತಾ, ಡೆಕ್ಕನ್ ವ್ಯಾಲಿ ಶಾಲೆಯ ಕಾರ್ಯದರ್ಶಿ ಸುನಿಲ್, ಉಪಪ್ರಾಂಶುಪಾಲ ಆಂಟೋನಿ, ಮುಖ್ಯೋಪಾಧ್ಯಾಯಿನಿ ಸಂಧ್ಯಾ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

ನೃತ್ಯ, ನಾಟಕ, ಕವಿತೆ ವಾಚನ, ಭಾವಗೀತೆ ಗಾಯನ ಮುಂತಾದ ಕಾರ್ಯಕ್ರಮಗಳ ಮೂಲಕ ಮಕ್ಕಳು ಶಿಕ್ಷಕರ ಗುಣಗಾನ ಮಾಡಿದರು. ತರಗತಿಗಳ ಅಲಂಕಾರ ಮತ್ತು ಸೃಜನಶೀಲ ಪ್ರದರ್ಶನಗಳು ಗಮನ ಸೆಳೆದವು. ವಿದ್ಯಾರ್ಥಿಗಳು ಶಿಕ್ಷಕರಿಂದ ಕೇಕ್ ಕತ್ತರಿಸಿದರು ಹಾಗೂ ಸಿಹಿ ವಿತರಿಸಿದರು.

ವಿದ್ಯಾರ್ಥಿಗಳು ಶಿಕ್ಷಕರಿಗಾಗಿ ಆಟೋಟಗಳನ್ನು ಆಯೋಜಿಸಿದ್ದು, ಶಿಕ್ಷಕರು ಸಹ ಪಾಲ್ಗೊಂಡರು. ಆಡಳಿತಾಧಿಕಾರಿ ಹಾಗೂ ಅತಿಥಿಗಳು ವಿದ್ಯಾರ್ಥಿಗಳ ಉತ್ಸಾಹವನ್ನು ಮೆಚ್ಚಿದರು.

error: Content is protected !!