ಚನ್ನರಾಯಪಟ್ಟಣ: ಶಿಕ್ಷಣ ಇಲಾಖೆಯಲ್ಲಿ ಸುಧೀರ್ಘ ಸೇವೆ ಸಲ್ಲಿಸಿದ್ದ ನಿವೃತ್ತ ಶಿಕ್ಷಣಾಧಿಕಾರಿ ಬಿ.ಬೇಲೂರೇಗೌಡರ(84) ಶುಕ್ರವಾರ ತಡರಾತ್ರಿ ನಿಧನರಾಗಿದ್ದಾರೆ.
ಚನ್ನರಾಯಪಟ್ಟಣದ ಗಾಂಧಿ ವೃತ್ತದ ನಿವಾಸದಲ್ಲಿ ಸೆ.6 ಶನಿವಾರ ಬೆಳಗ್ಗೆ 11 ಗಂಟೆ ವರೆಗೆ ಅವರ ಪಾರ್ಥಿವ ಶರೀರವನ್ನು ಇಡಲಾಗುತ್ತಿದೆ.
ಹುಟ್ಟುರಾದ ಅರಕಲಗೂಡು ತಾಲೂಕು ಬೈಚನಹಳ್ಳಿ ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ 3 ಗಂಟೆಗೆ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಮೃತರಿಗೆ ಪತ್ನಿ ನಂಜಮ್ಮ, ಪುತ್ರರಾದ ಮೋಹನ್ ಕುಮಾರ್, ಬಿ.ಶಂಕರ್ ಹಾಗೂ ಪುತ್ರಿ ಲತಾ ಇದ್ದಾರೆ.
ಶಾಸಕ ಸಿ.ಎನ್.ಬಾಲಕೃಷ್ಣ, ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ, ನಿವೃತ್ತ ಪ್ರಾಂಶುಪಾಲ ಓ.ಆರ್.ರಂಗೇಗೌಡ, ನಿವೃತ್ತ ಡಿಡಿಪಿಐ ಪುಟ್ಟರಾಜು, ಪರಿಸರ ಪ್ರೇಮಿ ಸಿ.ಎನ್.ಅಶೋಕ್, ತಾಲೂಕು ನಿವೃತ್ತ ನೌಕರರ ಸಂಘ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.










