ಸಕಲೇಶಪುರ: ಮಲೆನಾಡು ಭಾಗದಲ್ಲಿ ವರುಣನ ಅಬ್ಬರ ಮುಂದುವರಿದಿದ್ದು, ಭಾರಿ ಮಳೆ ಗಾಳಿಗೆ ವಾಸದ ಮನೆಯ ಗೋಡೆ ಹಾಗೂ ಮೇಲ್ಛಾವಣಿ ಕುಸಿದಿದೆ. ತಾಲ್ಲೂಕಿನ, ಹೊಸೂರು ಹಾಗೂ ಗೊದ್ದು ಗ್ರಾಮಗಳಲ್ಲಿ ನಡೆದಿದೆ. ಹೊಸೂರು ಗ್ರಾಮದ ಗಂಗಮ್ಮ, ಗೊದ್ದು ಗ್ರಾಮದ ಎಚ್.ಎನ್.ಸಣ್ಣಪ್ಪಗೌಡ ಎಂಬುವವರಿಗೆ ಸೇರಿದ ಮನೆ ಧರಾಶಾಹಿಯಾಗಿದೆ.
ಘಟನೆಯಲ್ಲಿ ಎಚ್.ಎನ್.ಸಣ್ಣಪ್ಪಗೌಡ ಅವರಿಗೆ ಎಂಬುವರಿಗೆ ಸಣ್ಣ ಪುಟ್ಟ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಅಧಿಕಾರಿಗಳು ಬರುವಂತೆ ಆಗ್ರಹಿಸಿದ್ದು, ಮನೆ ಹಾನಿಗೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯ ಮಾಡಿದರು.










