10.3 C
Munich
Home News ಹಾಸನ ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ ನಾಳೆ ಶಾಲೆ–ಅಂಗನವಾಡಿಗಳಿಗೆ ರಜೆ, ಮಳೆ‌ ಇಲ್ಲದ ಹೋಬಳಿಗಳಿಗಿಲ್ಲ ರಜೆ ಭಾಗ್ಯ!

ಹಾಸನ ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ ನಾಳೆ ಶಾಲೆ–ಅಂಗನವಾಡಿಗಳಿಗೆ ರಜೆ, ಮಳೆ‌ ಇಲ್ಲದ ಹೋಬಳಿಗಳಿಗಿಲ್ಲ ರಜೆ ಭಾಗ್ಯ!

ಹಾಸನ: ಹಾಸನ ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರು ನಾಳೆ (ಆ.19) ಮಂಗಳವಾರ ಒಂದು ದಿನ ರಜೆ ಘೋಷಿಸಿದ್ದಾರೆ.

ಆಲೂರು ತಾಲ್ಲೂಕಿನ ಪಾಳ್ಯ ಮತ್ತು ಕೆ.ಹೊಸಕೋಟೆ ಹೋಬಳಿ, ಸಕಲೇಶಪುರ ತಾಲ್ಲೂಕು, ಅರಕಲಗೂಡು ತಾಲ್ಲೂಕು ಹಾಗೂ ಬೇಲೂರು ತಾಲ್ಲೂಕಿನ ಬಿಕ್ಕೋಡು ಮತ್ತು ಅರೇಹಳ್ಳಿ ಹೋಬಳಿ ವ್ಯಾಪ್ತಿಯ ಎಲ್ಲಾ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಅನ್ವಯವಾಗಲಿದೆ ಎಂದು ಜಿಲ್ಲಾಧಿಕಾರಿಗಳ ಆದೇಶ ತಿಳಿಸಿದೆ.

ಶೈಕ್ಷಣಿಕ ಹಿತದೃಷ್ಟಿಯಿಂದ ಕಳೆದುಹೋಗುವ ಪಾಠಗಳನ್ನು ಮುಂದಿನ ಶನಿವಾರ–ಭಾನುವಾರಗಳಲ್ಲಿ ಪೂರೈಸುವಂತೆ ಸೂಚಿಸಲಾಗಿದೆ.

error: Content is protected !!