ಹಾಸನ: ಮಹಾನಗರ ಪಾಲಿಕೆ ಮೇಯರ್ ಸ್ಥಾನದಿಂದ ಎಂ.ಚಂದ್ರೇಗೌಡ ಅವರನ್ನು ಅನರ್ಹಗೊಳಿಸುವ ಬದಲು ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರು ಇರುವಷ್ಟು ದಿನ ಮುಂದುವರಿಯಲು ಅವಕಾಶ ಮಾಡಿಕೊಡಬೇಕಿತ್ತು ಎಂದು. ವೀರ ಕನ್ನಡಿಗ ಟಿಪ್ಪು ಸೇನೆ ಸಂಸ್ಥಾಪಕ ಅಧ್ಯಕ್ಷ ಅಕ್ಮಲ್ ಜಾವಿದ್ ಆಗ್ರಹಿಸಿದರು. ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಚಂದ್ರೇಗೌಡ ಅವರನ್ನು ಏಕಾಏಕಿ ವಜಾಗೊಳಿಸಬಾರದಿತ್ತು.
ಸಂವಿಧಾನ ಬದ್ಧವಾದ ತೀರ್ಪು ಸ್ವಾಗತಾರ್ಹ, ಆದರೆ ಆತುರದಲ್ಲಿ ಜೆಡಿಎಸ್ ಪಕ್ಷದ ನಾಯಕರು ಚಂದ್ರೇಗೌಡ ಪದಚ್ಯುತಿಗೆ ಕಾರಣರಾಗಿದ್ದಾರೆ. ಚಂದ್ರೇಗೌಡ ಅವರಿಗೆ ಇನ್ನಷ್ಟು ದಿನ ಮೇಯರ್ ಸ್ಥಾನ ಮುಂದುವರೆಸಲು ಬಿಡ ಬಹುದಿತ್ತು. ವಿಫ್ ಉಲ್ಲಂಘನೆ ಆರೋಪದಲ್ಲಿ ಅವರನ್ನು ವಜಾ ಮಾಡಿಸಿದ್ದು ಸಾಮಾನ್ಯ ಕಾರ್ಯಕರ್ತನಿಗೆ ಮಾಡಿದ ಅವಮಾನವಾಗಿದೆ ಎಂದರು.
ಮಹಾನಗರ ಪಾಲಿಕೆಯಲ್ಲಿ ಲಂಚ ಹಾವಳಿ ಮಿತಿ ಮೀರಿದೆ. ಒಂದೇ ಜಾಗಕ್ಕೆ ೨-೩ ಖಾತೆಗಳಾಗಿವೆ. ಇದನ್ನು ಸರಿಪಡಿಸಲು ಪ್ರಾದೇಶಿಕ ಆಯುಕ್ತರು ಎಷ್ಟು ಶ್ರಮ ಹಾಕಿದ್ದಾರೆ. ಲಂಚಾವತಾರ ಸರಿಪಡಿಸಬೇಕು ಅಲ್ಲವೇ, ಹಾಗೆಯೇ ನಗರದ ಜನತೆಗೆ ಆಗುತ್ತಿರುವ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಎಷ್ಟು ಬಾರಿ ಹಾಸನಕ್ಕೆ ಭೇಟಿ ನೀಡಿ, ಜನರ ಸಮಸ್ಯೆ ತಿಳಿದುಕೊಂಡಿದ್ದಾರೆ ಎಂದು ಪ್ರಶ್ನಿಸಿದರು. ಆಖಿಲ್ ಅಹಮದ್ ಹಾಗೂ ಇತರರು ಹಾಜರಿದ್ದರು.










