ಹಾಸನ: ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪಟೇಲ್ ಶಿವಪ್ಪಗೆ ನ.26ರಂದು ಅಭಿನಂದನಾ ಸಮಾರಂಭ

Siddegowda, the president of the Taluk Shepherds' Association, said that a felicitation ceremony was organized for Patel Shivappa, the chairman of the Urban Development Authority, on the 26th of this month at the city's Kanaka Bhavan.

ಹಾಸನ: ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ಪಟೇಲ್  ಶಿವಪ್ಪ ಅವರಿಗೆ ಇದೇ ತಿಂಗಳ 26 ರಂದು ನಗರದ ಕನಕ ಭವನದಲ್ಲಿ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಕುರುಬರ ಸಂಘದ ಅಧ್ಯಕ್ಷ ಸಿದ್ದೇಗೌಡ ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ತಾಲೂಕು-ಜಿಲ್ಲಾ ಕುರುಬರ ಸಂಘದ ಆಶ್ರಯದಲ್ಲಿ ಕಾರ್ಯಕ್ರಮ ನೆರವೇರುತ್ತಿದ್ದು, ಕಾಗಿನೆಲೆ ಕನಕ ಗುರು ಪೀಠದ ಕೆ.ಆರ್.ನಗರ ಶಾಖಾ ಮಠದ ಶ್ರೀ ಶಿವಾನಂದಪುರಿ ಮಹಾಸ್ವಾಮೀಜಿಗಳ ಕೃಪಾಶೀರ್ವಾದಗಳೊಂದಿಗೆ ಸಮಾರಂಭ ನಡೆಯಲಿದೆ.

ಜಿಲ್ಲೆಯ ಸಮುದಾಯದ ಎಲ್ಲ ಮುಖಂಡರು ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಮನವಿ ಮಾಡಿದರು. ತಾಲೂಕು ಸಂಘದ ವಿವಿಧ ಪದಾಧಿಕಾರಿಗಳು ಇದ್ದರು.