yavanuru Shiva Miracle: ಹಾಸನ ಜಿಲ್ಲೆಯ ದ್ಯಾವನೂರು ಗ್ರಾಮದ ಕಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಭೂಮಿಯಲ್ಲಿ ಹೂತಿದ್ದ ಅನ್ನ ಒಂದು ವರ್ಷವಾದರೂ ಕರಗದೆ ಮಾದೇಶ್ವರ ರೂಪದಲ್ಲಿ ಕಾಣಿಸಿಕೊಂಡಿದ್ದು ಭಕ್ತರಲ್ಲಿ ಆಶ್ಚರ್ಯ ಮೂಡಿಸಿದೆ.
-
Dyavanuru Shiva Miracle: ದ್ಯಾವನೂರಿನಲ್ಲಿ ಪವಾಡ
-
ಭೂಮಿಯಲ್ಲಿ ಹೂತ ಅನ್ನ ಕರಗದ ಅದ್ಭುತ
-
ನಾಗರಹಾವು ರಕ್ಷಕನಾಗಿ ಕಾಣಿಸಿಕೊಳ್ಳುವ ನಂಬಿಕೆ
-
ಭಕ್ತರ ದಂಡು ಹೆಚ್ಚಳ
Dyavanuru Shiva Miracle: ದ್ಯಾವನೂರಿನಲ್ಲಿ ಶಿವನ ಪವಾಡ
ಚನ್ನರಾಯಪಟ್ಟಣ,ಮಾರ್ಚ್,11,2026 (www.kannadapost.com): ಭಕ್ತಿ ಮತ್ತು ನಂಬಿಕೆ ಇರುವಲ್ಲಿ ದೈವದ ಅಸ್ತಿತ್ವ ಕಾಣುತ್ತದೆ ಎಂಬುದಕ್ಕೆ ಹಾಸನ ಜಿಲ್ಲೆಯ ಬಾಗೂರು ಹೋಬಳಿಯ ದ್ಯಾವನೂರು ಗ್ರಾಮದ ಪುರಾತನ ಕಲ್ಲೇಶ್ವರ ಸ್ವಾಮಿ ದೇವಾಲಯ ಸಾಕ್ಷಿಯಾಗಿದೆ.
ಇಲ್ಲಿ ಕಳೆದ ವರ್ಷ ನಡೆದ ಮಾದೇಶ್ವರ ಸ್ವಾಮಿ ಮಹೋತ್ಸವದ ವೇಳೆ ನಡೆದ ಘಟನೆ ಇದೀಗ ಭಕ್ತರ ಪಾಲಿಗೆ ಶಿವನ ಮಹಿಮೆಯಾಗಿ ಕಾಣಿಸಿಕೊಂಡಿದೆ.
Dyavanuru Shiva Miracle: ಕರಗದ ಅನ್ನದ ಕೌತುಕ
ಮಹೋತ್ಸವದ ಸಂದರ್ಭದಲ್ಲಿ ಧಾರ್ಮಿಕ ವಿಧಿವಿಧಾನಗಳಂತೆ ಅನ್ನವನ್ನು ಭೂಮಿಯಲ್ಲಿ ಹೂಳಲಾಗಿತ್ತು.
ಸಾಮಾನ್ಯವಾಗಿ ಭೂಮಿಯಲ್ಲಿ ಹೂತ ಅನ್ನವು ಕೆಲವೇ ದಿನಗಳಲ್ಲಿ ಮಣ್ಣಿನೊಂದಿಗೆ ಸೇರಿ ಹೋಗುತ್ತದೆ. ಆದರೆ ದ್ಯಾವನೂರಿನಲ್ಲಿ ನಡೆದದ್ದೇ ಬೇರೆ.
ಒಂದು ವರ್ಷ ಕಳೆದರೂ ಭೂಮಿಯಲ್ಲಿ ಹೂತಿದ್ದ ಅನ್ನವು ಕೆಡದೆ, ಕರಗದೆ ಹಾಗೆಯೇ ಉಳಿದು ‘ಮಾದೇಶ್ವರ ಸ್ವಾಮಿ’ ರೂಪದಲ್ಲಿ ಕಾಣಿಸಿಕೊಂಡಿದೆ ಎಂದು ಭಕ್ತರು ಹೇಳುತ್ತಿದ್ದಾರೆ.
ಈ ದೃಶ್ಯವನ್ನು ಕಂಡ ಗ್ರಾಮಸ್ಥರು ಇದನ್ನು ಪರಮಶಿವನ ಮಹಿಮೆಯೇ ಎಂದು ಭಕ್ತಿಯಿಂದ ಕೊಂಡಾಡುತ್ತಿದ್ದಾರೆ.
ನಾಗರಹಾವು ರಕ್ಷಕನಾಗಿ ಕಾಣಿಸಿಕೊಳ್ಳುವ ನಂಬಿಕೆ
ಈ ದೇವಸ್ಥಾನದ ಮತ್ತೊಂದು ವಿಶೇಷವೆಂದರೆ ಇಲ್ಲಿ ನಾಗರಹಾವು ಸದಾ ದೇವಾಲಯದ ಆವರಣದಲ್ಲಿ ಕಾಣಿಸಿಕೊಳ್ಳುವುದು.
ಮಾದೇಶ್ವರ ಸ್ವಾಮಿ ಉದ್ಭವವಾದ ಜಾಗದ ಬಳಿ ಈ ಸರ್ಪ ಕಾಣಿಸಿಕೊಂಡು ದೇವಸ್ಥಾನವನ್ನು ರಕ್ಷಿಸುತ್ತಿದೆ ಎಂಬುದು ಭಕ್ತರ ನಂಬಿಕೆ.
ಭಕ್ತರು ಇದನ್ನು ಶಿವನ ಕೊರಳ ಹಾರದಂತೆ ದೇವಾಲಯವನ್ನು ಕಾಯುವ ದೈವಿಕ ಸಂಕೇತ ಎಂದು ಪರಿಗಣಿಸುತ್ತಿದ್ದಾರೆ.
Dyavanuru Shiva Miracle: ಭಕ್ತರ ದಂಡು ಹೆಚ್ಚಳ
ಈ ವಿಚಾರ ತಿಳಿದ ಬಳಿಕ ಹಾಸನ ಜಿಲ್ಲೆಯ ವಿವಿಧ ಭಾಗಗಳಿಂದ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಂದ ನೂರಾರು ಭಕ್ತರು ದ್ಯಾವನೂರಿಗೆ ಆಗಮಿಸುತ್ತಿದ್ದಾರೆ.
ಗ್ರಾಮಸ್ಥರು ಹೇಳುವಂತೆ: “ನಮ್ಮ ಗ್ರಾಮದ ಕಲ್ಲೇಶ್ವರ ಸ್ವಾಮಿ ಹಾಗೂ ಮಾದೇಶ್ವರ ಸ್ವಾಮಿಯ ಶಕ್ತಿ ಅಪಾರ. ಮಣ್ಣಿನಲ್ಲಿ ಹೂತ ಅನ್ನವು ವರ್ಷವಾದರೂ ಹಾಗೆಯೇ ಇರುವುದು ಶಿವನ ಮಹಿಮೆಯಲ್ಲದೆ ಬೇರೇನಲ್ಲ.”
ಪವಾಡಗಳ ತಾಣವಾಗಿ ದ್ಯಾವನೂರು
ಪ್ರಕೃತಿ ಮತ್ತು ದೈವಿಕ ಶಕ್ತಿಗಳ ಸಂಗಮದಂತಿರುವ ದ್ಯಾವನೂರಿನ ಕಲ್ಲೇಶ್ವರ ದೇವಾಲಯ ಈಗ ಭಕ್ತರನ್ನು ಸೆಳೆಯುವ ಪವಿತ್ರ ಕ್ಷೇತ್ರವಾಗಿ ಮಾರ್ಪಟ್ಟಿದೆ.










