ಹಾಸನ: ನಮ್ಮ ಸಾಂಪ್ರದಾಯಿಕ ಉಡುಪುಗಳು ಸಂಸ್ಕೃತಿಯ ಪ್ರತಿಬಿಂಬ- ಮಮತಾ ಚಂದ್ರಶೇಖರ್

We should not ignore the clothes that represent our tradition and heritage, said Mamatha Chandrashekhar, secretary of the city's Scholars International School

ಹಾಸನ: ನಮ್ಮ ಸಂಪ್ರದಾಯ, ಪರಂಪರೆಯನ್ನು ಪ್ರತಿನಿಧಿಸುವ ಉಡುಗೆಗಳನ್ನು ನಾವು ನಿರ್ಲಕ್ಷಿಸಬಾರದು ಎಂದು ನಗರದ ಸ್ಕಾಲರ್ಸ್ ಅಂತಾರಾಷ್ಟ್ರೀಯ ಶಾಲೆಯ ಕಾರ್ಯದರ್ಶಿ ಮಮತಾ ಚಂದ್ರಶೇಖರ್ ಹೇಳಿದರು.

ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಸಾಂಪ್ರದಾಯಿಕ ದಿನದಲ್ಲಿ ಪಾಲ್ಗೊಂಡು ಮಾತನಾಡಿದರು.

ಭಾರತ ವಿವಿಧ ಸಂಸ್ಕೃತಿಗಳ ಭಾವೈಕ್ಯತೆಯ ತವರೂರು. ಹೀಗಾಗಿ ನಮ್ಮ ಸಾಂಪ್ರದಾಯಿಕ ಉಡುಪುಗಳಲ್ಲೂ ವಿಭಿನ್ನತೆಯನ್ನು ಕಾಣಬಹುದಾಗಿದೆ. ಇಂದಿನ ಮಕ್ಕಳಲ್ಲಿ ನಮ್ಮ ಪರಂಪರೆ, ಸಂಪ್ರದಾಯಗಳ ಬಗ್ಗೆ ಜಾಗೃತಿ ಮೂಡಿಸುವುದು ಎಥ್ನಿಕ್ ಡೇ ಉದ್ದೇಶವಾಗಿದೆ ಎಂದರು.

ಶಾಲೆಯ ವಿದ್ಯಾರ್ಥಿಗಳನ್ನು ವಿವಿಧ ಸಾಂಪ್ರದಾಯಿಕ ಉಡುಪುಗಳನ್ನು ತೊಟ್ಟು ಹಿರಿಹಿರಿ ಹಿಗ್ಗಿದರು. ಸೀರೆ, ಲಂಗ-ದಾವಣಿ, ಪಂಚೆ, ಶರ್ಟ್ ತೊಟ್ಟ ಪುಟಾಣಿ ಮಕ್ಕಳ ತುಂಟಾಟ ಮುದನೀಡುವಂತಿತ್ತು.

ಶಾಲೆಯ ಆಡಳಿತಾಧಿಕಾರಿ ಡಾ.ಎಚ್.ಎನ್.ಚಂದ್ರಶೇಖರ್, ಮುಖ್ಯ ಶಿಕ್ಷಕರು, ಬೋಧಕರು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

We should not ignore the clothes that represent our tradition and heritage, said Mamatha Chandrashekhar, secretary of the city’s Scholars International School