ಅರಸೀಕೆರೆ: ಯಾರೇ ತಪ್ಪು ಮಾಡಿದರೂ ಶಿಕ್ಷೆ ಆಗಬೇಕು. ಕಾನೂನು ಎಲ್ಲರಿಗೂ ಒಂದೇ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.
ನಗರದಲ್ಲಿ ನಡೆದ ಜನತಾ ದರ್ಶನ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಟಿ ದಾಳಿ ಕುರಿತು ಬಿಜೆಪಿ ನಾಯಕರ ಆರೋಪದ ಬಗೆಗಿನ ಪ್ರಶ್ನೆಗೆ ಉತ್ತರಿಸಿದರು.
ಈ ಬಗ್ಗೆ ತನಿಖೆ ನಡೆಯುತ್ತಿದೆ, ತನಿಖೆ ಪೂರ್ಣ ಆದಮೇಲೆ ಯಾರೆಲ್ಲಾ ಭಾಗಿಯಾಗಿದ್ದಾರೆ, ಅವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ನಾನೂ ಒತ್ತಾಯ ಮಾಡುತ್ತೇನೆ ಎಂದರು.
ಇದನ್ನು ಖಂಡಿಸಿ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆ ರಾಜಕೀಯ ಪ್ರೇರಿತವಾಗಿದೆ ಎಂಬುದು ಜನರಿಗೂ ಗೊತ್ತಿದೆ ಎಂದು ಕುಟುಕಿದರು.
ಸರ್ಕಾರ ಕಮಿಷನ್ ದಂಧೆಗೆ ಇಳಿದಿದೆ ಎಂಬ ಮಾಜಿ ಸಿಎಂ ಎಚ್‌ಡಿಕೆ ಹೇಳಿಕೆಗೆ, ಅವರು ಬಹಳ ಅನುಭವಸ್ಥರು. ೨ ಬಾರಿ ಮುಖ್ಯಮಂತ್ರಿ ಆಗಿ ಏನೇನ್ ಮಾಡಿದ್ದಾರೆ ಅಂಥ ಜನಕ್ಕೂ ಗೊತ್ತಿದೆ ಎಂದರು. ಅವರ ಆರೋಪಗಳಿಗೆ ಟೀಕೆ ಕೊಡಲ್ಲ ಎಂದರು.
ರಾಜ್ಯದಲ್ಲಿ ಲೋಡ್‌ಶೆಡ್ಡಿಂಗ್ ವಿಚಾರವಾಗಿ ಮಾತನಾಡಿ, ಸಿಎಂ ಸಭೆ ನಡೆಸಿದ್ದಾರೆ. ಈಗಾಗಲೇ ಸುಧಾರಣೆ ಆಗಿದೆ. ನ.೧೭ ರಿಂದ
೬೦೦ ಮೆಗಾವ್ಯಾಟ್‌ನ್ನು ಗ್ರಿಡ್‌ಗೆ ಸೇರಿಸಲು ಆರ್‌ಟಿಪಿಎಸ್‌ನಲ್ಲಿ ಕಾರ್ಯಾರಂಭ ಮಾಡಲಿದೆ ಎಂದರು.
ವಿದ್ಯಾರ್ಥಿಗಳಿಗೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ರೀತಿಯ ತೊಂದರೆ ಆಗದ ರೀತಿ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಲಾಗಿದೆ. ನ.೧೭ ರಿಂದ ಮತ್ತೊಂದು ಪ್ಲಾಂಟ್ ಕಾರ್ಯಾರಂಭ ಮಾಡಲಿ ಎಂದು ಹೇಳಿದರು.
ಮುಂದಿನ ತಿಂಗಳಿನಿಂದ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ಅರೆಯಲು ಪ್ರಾರಂಭಿಸುತ್ತಾರೆ. ಅವರು ಕೂಡ ಕ್ರಷಿಂಗ್ ಸ್ಟಾರ್ಟ್ ಮಾಡಿದಾಗ ಗ್ರಿಡ್‌ಗೆ ಹೆಚ್ಚು ಕರೆಂಟ್ ಬರುತ್ತೆ. ವಿದ್ಯುತ್ ಅಭಾವ ಇನ್ನೊಂದು ವಾರದೊಳಗೆ ಸಂಪೂರ್ಣವಾಗಿ ನೀಗುತ್ತೇವೆೆ ಎಂದರು.
ನ.೧೯ ರಂದು ಬೆ.೯.೩೦ ಕ್ಕೆನೀರಾವರಿ ಸಲಹಾ ಸಮಿತಿಸಭೆ ಕರೆದಿದ್ದಾರೆ. ಬೆಂಗಳೂರಿನಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ಕರೆದಿದ್ದೇವೆ
ಹಾಸನ ಫ್ಲೈ ಓವರ್ ಕಾಮಗಾರಿ ಈಗಾಗಲೇ ಕಾಮಗಾರಿ ನಡೆಯುತ್ತಿದೆ, ಹಣವನ್ನೂ ಕೊಡಿಸೋಣ.
ಯಾವುದೇ ರೀತಿ ಆ ಕಾಮಗಾರಿ ನನೆಗುದಿಗೆ ಬೀಳದ ರೀತಿಯಲ್ಲಿ, ಆದಷ್ಟು ಜಾಗೃತರಾಗಿ ಅದನ್ನು ಪೂರ್ಣ ಮಾಡುತ್ತೇವೆ.ಹಣ ಯಾರು ಕೊಡೊದು, ಯಾರು ಕೊಡದೆ ಇರುವುದನ್ನು ನಾವು ಬಗೆಹರಿಸಿಕೊಳ್ಳುತ್ತೇವರ ರಂದರು.
ಬಳಿಕ ಜನತಾ ದರ್ಶನದಲ್ಲಿ ಶಾಸಕರ ನಡುವೆ ಕಿತ್ತಾಟದ ನಂತರ ಮಾತನಾಡಿದ ಸಚಿವ ರಾಜಣ್ಣ, ಶಾಸಕರು ಕೆಲ ವಿಷಯಗಳನ್ನು ಪ್ರಸ್ತಾಪ ಮಾಡಿದ್ದಾರೆ
ಬೇಲೂರಿನಲ್ಲೂ ಒಂದು ಜನತಾದರ್ಶನ ಕಾರ್ಯಕ್ರಮ ಮಾಡೋಣ.
ಅಲ್ಲಿಗೂ ಅಧಿಕಾರಿಗಳು ಬರ್ತಾರೆ, ನಿಮ್ಮ ಸಮಸ್ಯೆಯೂ ಬಗೆ ಹರಿಯುತ್ತೆ. ಜನರ ಚಪ್ಪಾಳೆ ಹೊಡೆಸಲು ಭಾಷಣ ಮಾಡುವುದೇ ಬೇರೆ, ಅದನ್ನು ರಾಜಕೀಯ ಭಾಷಣದಲ್ಲಿ ಮಾಡೋಣ.
ನೀವೂ ಎಷ್ಟು ಜನರ ಪರವಾಗಿ ಕೆಲಸ ಮಾಡುಬೇಕು ಅಂದುಕೊAಡಿದ್ದಾರೋ ಅದಕ್ಕಿಂತ ಎರಡು ಪಟ್ಟು ಹೆಚ್ಚು ಕೆಲಸ ಮಾಡಬೇಕು ಎನ್ನುವುದು ನಮ್ಮ ಪ್ರಯತ್ನ ಎಂದರು.
ಸಭೆಗೆ ಅಗೌರವ ತರುವ ರೀತಿ ಮಾತನಾಡಬಾರದು. ಅಧ್ಯಕ್ಷತೆ ಮಾತನಾಡಿದ ಆದ ಶಿವಲಿಂಗೇಗೌಡ, ಅವರು ಬಾಷಣ ಮಾಡಿದ ಮೇಲೆ ಯಾರೂ ಭಾಷಣ ಮಾಡಬಾರದು ಎನ್ನುವುದು ನಾವೇ ಮಾಡಿಕೊಂಡಿದ್ದೀವಿ.ಆದರೂ ನಿಮಗೆ ಮಾತನಾಡಲು ಅವಕಾಶ ಕೊಟ್ಟಿದ್ದೇವೆ ಎಂದರು.
ಶಿವಲಿಂಗೇಗೌಡರನ್ನು ಮಂತ್ರಿ ಮಾಡುತ್ತೇವೆ ಎಂದು ಚುನಾವಣೆ ಪೂರ್ವದಲ್ಲೇ ಮಾತು ಕೊಟ್ಟಿದ್ದೆವು.ಆದರೆ ಬೇರೆ ಬೇರೆ ಕಾರಣದಿಂದ ಮಾಡಲಾಗಲಿಲ್ಲ. ಹಾಗಾಗಿ ಅವರು ಹೆಚ್ಚು ಅನುದಾನ ಕೊಟ್ಟಿದ್ದೇವೆ.
ಆದರೆ ಯಾರಿಗೂ ತಾರತಮ್ಯ ಮಾಡಿಲ್ಲ. ಸುರೇಶ್ ತಮ್ಮ ಅಭಿಪ್ರಾಯ ಹೇಳಲು ಅವಕಾಶ ಕೊಟ್ಟೆ. ಶಿವಲಿಂಗೇಗೌಡರು ತಮ್ಮ ಕ್ಷೇತ್ರಕ್ಕೆ ಹೆಚ್ಚು ಅನುದಾನ ತಂದು ಕೆಲಸ ಮಾಡುತ್ತಿದ್ದಾರೆ ಎಂದರು.










