ಬೆಳವಾಡಿಯಲ್ಲಿ ಅಂಬೇಡ್ಕರ್ ಪ್ರತಿಮೆಗೆ ವಾಹನ ಡಿಕ್ಕಿ: ಪ್ರತಿಭಟನೆ

ಅರಕಲಗೂಡು: ತಾಲ್ಲೂಕಿನ ದೊಡ್ಡ ಮಗ್ಗೆ ಹೋಬಳಿಯ ಬೆಳವಾಡಿ ಗ್ರಾಮದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆಗೆ ಕಿಡಿಗೇಡಿಯೊಬ್ಬ ಗೂಡ್ಸ್ ವಾಹನದಿಂದ ಗುದ್ದಿ ಡಿಕ್ಕಿ ಮಾಡಿ ಅವಮಾನ ಮಾಡಿದ್ದಾನೆಂದು ಆರೋಪಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಪ್ರತಿಮೆ ಸಮೀಪದ ಬೇಕರಿಯಲ್ಲಿನ ಸಿಸಿಟಿವಿ ಪರೀಕ್ಷೆ ಮಾಡಿದಾಗ ಉದ್ದೇಶ ಪೂರ್ವಕವಾಗಿ ವಾಹನ ಗುದ್ದಿರುವುದು ತಿಳಿದುಬಂದಿದೆ ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಅಭಿಮಾನಿಗಳು ಆರೋಪಿಸಿದ್ದಾರೆ.
ಮುಖಂಡ ಶಿವರಾಜ್ ಬೆಳವಾಡಿ ಮಾತನಾಡಿ, ಹಿನ ಮನಸ್ಸು ಹೊಂದಿರುವ ತಪ್ಪಿತಸ್ಥ ವ್ಯಕ್ತಿಯನ್ನ ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ನಂತರ ಅರಕಲಗೂಡು ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನ ವಶಕ್ಕೆ ಪಡೆಯಲಾಗಿದೆ.
ರಾಜ್ಯ ಭೀಮ ಸೇನೆಯ ಜಿಲ್ಲಾಧ್ಯಕ್ಷ ರಮೇಶ, ಚಿನ್ನಸ್ವಾಮಿ ಮತ್ತಿತರರಿದ್ದರು.