9 C
Munich
Home ಜಿಲ್ಲೆ ಎಸ್ಎಸ್ಎಲ್ಸಿ ಫಲಿತಾಂಶ; ಹಾಸನದ ವಿಜಯ ಇಂಗ್ಲಿಷ್ ಶಾಲೆಯ ಉತ್ಸವ್ ಪಟೇಲ್ ರಾಜ್ಯಕ್ಕೆ ಪ್ರಥಮ

ಎಸ್ಎಸ್ಎಲ್ಸಿ ಫಲಿತಾಂಶ; ಹಾಸನದ ವಿಜಯ ಇಂಗ್ಲಿಷ್ ಶಾಲೆಯ ಉತ್ಸವ್ ಪಟೇಲ್ ರಾಜ್ಯಕ್ಕೆ ಪ್ರಥಮ

ಹಾಸನ, ಮೇ 02, 2025: ಎಸ್‌ಎಸ್‌ಎಲ್ಸಿ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಹಾಸನ ನಗರದ ವಿಜಯ ಸ್ಕೂಲ್‌ನ ವಿದ್ಯಾರ್ಥಿ ಉತ್ಸವ್ ಪಟೇಲ್ 625ಕ್ಕೆ 625 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಡಿ.ಟಿ. ಪ್ರಕಾಶ್ ಮತ್ತು ಆಶಾರಾಣಿ ದಂಪತಿಯ ಪುತ್ರನಾದ ಉತ್ಸವ್ ಪಟೇಲ್, ತನ್ನ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯಿಂದ ಈ ಅಪೂರ್ವ ಸಾಧನೆ ಮಾಡಿದ್ದಾರೆ. ಈ ಗೆಲುವು ಹಾಸನ ಜಿಲ್ಲೆಗೆ ಹೆಮ್ಮೆಯ ಕ್ಷಣವಾಗಿದ್ದು, ಶಿಕ್ಷಕರು, ಪೋಷಕರು ಹಾಗೂ ಸಹಪಾಠಿಗಳು ಉತ್ಸವ್‌ನ ಸಾಧನೆಯನ್ನು ಶ್ಲಾಘಿಸಿದ್ದಾರೆ.ವಿಜಯ ಸ್ಕೂಲ್‌ನ ಆಡಳಿತ ಮಂಡಳಿಯು ಉತ್ಸವ್‌ನ ಈ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ

error: Content is protected !!