15.2 C
Munich
Home ಜಿಲ್ಲೆ ಎಸ್.ಎಸ್.ಎಲ್.ಸಿ.‌ಫಲಿತಾಂಶ: ಹಾಸನದ ಟೈಮ್ಸ್ ಶಾಲೆಯ ವಿ.ಕೆ.ಶಮಿಕಾ ಹಾಗೂ ಆರ್.ಧನುಷ್ ರಾಜ್ಯಕ್ಕೆ ತೃತೀಯ

ಎಸ್.ಎಸ್.ಎಲ್.ಸಿ.‌ಫಲಿತಾಂಶ: ಹಾಸನದ ಟೈಮ್ಸ್ ಶಾಲೆಯ ವಿ.ಕೆ.ಶಮಿಕಾ ಹಾಗೂ ಆರ್.ಧನುಷ್ ರಾಜ್ಯಕ್ಕೆ ತೃತೀಯ

ಹಾಸನ: ಈ ಬಾರಿಯ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಹಾಸನದ ಟೈಮ್ಸ್ ಅಂತಾರಾಷ್ಟ್ರೀಯ ಶಾಲೆಯ ಇಬ್ಬರು ವಿದ್ಯಾರ್ಥಿಗಳು ತಲಾ 623 ಅಂಕ ಪಡೆದು ರಾಜ್ಯಕ್ಕೆ ತೃತೀಯ ಸ್ಥಾನ ಪಡೆದಿದ್ದಾರೆ.

ವಿದ್ಯಾರ್ಥಿನಿ ವಿ.ಕೆ. ಶಮಿಕ ವಿಜ್ಞಾನ ಹಾಗೂ ಸಮಾಜ ವಿಜ್ಞಾನ ವಿಷಯಗಳಲ್ಲಿ 99 ಅಂಕಗಳನ್ನು ಪಡೆದಿದ್ದು ಮಿಕ್ಕೆಲ್ಲ ವಿಷಯಗಳಲ್ಲಿ ಶೇಕಡ 100 ಅಂಕ ಗಳಿಸಿದ್ದಾರೆ.

ಆರ್.ಧನುಷ್, ಇಂಗ್ಲಿಷ್ ಹಾಗೂ ವಿಜ್ಞಾನ ವಿಷಯದಲ್ಲಿ99 ಅಂಕ ಗಳಿಸಿದ್ದು, ಉಳಿದ ವಿಷಯಗಳಲ್ಲಿ ಶೇಕಡ 100 ಅಂಕ ಗಳಿಸಿದ್ದಾರೆ.

ಇಬ್ಬರಿಗೂ ಕೇವಲ ಎರಡು ಅಂಕಗಳಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವ ಅವಕಾಶ ಕೈ ತಪ್ಪಿದೆ.

ಅತ್ಯುತ್ತಮ ಸಾಧನೆ ಮಾಡಿರುವ ತಮ್ಮ ವಿದ್ಯಾರ್ಥಿಗಳನ್ನು ಶಾಲೆಯ ಆಡಳಿತ ಮಂಡಳಿ ಕಾರ್ಯದರ್ಶಿ ಬಿ.ಕೆ. ಗಂಗಾಧರ್ ಅಭಿನಂದಿಸಿದ್ದಾರೆ

error: Content is protected !!