ಚನ್ನರಾಯಪಟ್ಟಣ : ತಾಲೂಕಿನ ಡಿ.ಚಿಕ್ಕಗೊಂಡನಹಳ್ಳಿ ಗ್ರಾಮದ ರೈತರೊಬ್ಬರು ಸಾಲಬಾಧೆ ತಾಳಲಾರದೆ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಸಬಾ ಹೋಬಳಿ ಡಿ.ಚಿಕ್ಕಗೊಂಡನಹಳ್ಳಿ ಗ್ರಾಮದ ರೈತ ಕಾಳೇಗೌಡ (57) ಆತ್ಮಹತ್ಯೆಗೆ ಶರಣಾದವರು. ಡಿಂಡಗೂರು ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 10 ಸಾವಿರ, ಗ್ರಾಮೀಣ ಕೂಟ 1.50 ಲಕ್ಷ ರೂ. ಶ್ರೀಸಂತ್ಯಮ್ಮ ಸ್ವಸಹಾಯ ಮಹಿಳಾ ಸಂಘದಲ್ಲಿ 1.50 ಲಕ್ಷ ರೂ. ಎಸ್‌ಎಂಎಫ್‌ಜಿ ಗ್ರಾಮಶಕ್ತಿಯಲ್ಲಿ 50 ಸಾವಿರು, ಬಿಎಸ್‌ಎಸ್ ಮೈಕ್ರೋ ಪೈನಾನ್ಸ್‌ನಲ್ಲಿ 1.2 ಲಕ್ಷ ರೂ. ಚೈತನ್ಯ ಇಂಡಿಯಾ ಪಿನ್ ಕ್ರೆಡಿಟ್ ನಲ್ಲಿ 1.39 ಲಕ್ಷ ರೂ. ಧರ್ಮಸ್ಥಳ ಸಂಘದಲ್ಲಿ 2 ಲಕ್ಷ ರೂ. ಸಾಲ ಮಾಡಿದ್ದಾರೆ. ಸಾಕಷ್ಟು ಪೈನಾನ್ಸ್‌ಗೆ ಶೇ.50 ರಷ್ಟು ಸಾಲ ತೀರಿಸಿದ್ದಾರೆ ಇನ್ನೂ ಕೆಲ ಕಡೆಯಲ್ಲಿ ಸಾಲ ಬಾಕಿ ಉಳಿಸಿಕೊಂಡಿದ್ದಾರೆ.
ಡಿ.ಚಿಕ್ಕಗೊಂಡನಹಳ್ಳಿ ಗ್ರಾಮದ ಸರ್ವೆ ನಂ 59 ರಲ್ಲಿ 1.10 ಎಕರೆ ಕೃಷಿ ಭೂಮಿಯನ್ನು ಹೊಂದಿದ್ದು ಕಳೆದ 40 ವರ್ಷಗಳಿಂದ ಸಾಗುವಳಿ ಮಾಡುಕೊಂಡು ಬರುತ್ತಿದ್ದು ಈ ಕೃಷಿ ಭೂಮಿಯನ್ನು ತಮ್ಮ ಹೆಸರಿಗೆ ಮಂಜೂರು ಮಾಡಿಕೊಡುವಂತೆ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತಕ್ಕೆ ನಾಲ್ಕು ದಶಕದಲ್ಲಿ 10ಕ್ಕೂ ಹೆಚ್ಚು ಸಲ ಸಾಗುವಳಿ ಮಂಜೂರು ಅರ್ಜಿ ಸಲ್ಲಿಸಿದ್ದರೂ 1982 ರಿಂದ ಮಂಜೂರಾತಿ ಮಾಡದೇ ಇರುವುದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರೈತ ಕಾಳೇಗೌಡ ನ.24 ರಂದು ಮನೆಯಿಂದ ಹೊರ ಹೋಗಿದ್ದಾರೆ ರಾತ್ರಿಯಾದರೂ ಮನೆಗೆ ಹಿಂದುರುಗದೆ ಇದುದ್ದರಿಂದ ಕುಟುಂಬಸ್ಥರು ಗ್ರಾಮದಲ್ಲಿ ಹುಡುಕಿದ್ದಾರೆ ಸ್ನೇಹಿತರನ್ನು ವಿಚಾರಿಸಿದಾಗ ಹೇಮಾವತಿ ಎಡದಂಡೆ ನಾಲೆ ಸಮೀಪದಲ್ಲಿ ಪಾದರಕ್ಷೆಗಳು, ಟವಲ್ ಹಾಗೂ ಜರ್ಕಿನ್ ಇರುವುದು ಪತ್ತೆಯಾಗಿದೆ, ನಾಲೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಿ ನಾಲೆ ನೀರಿನಲ್ಲಿ ಹುಡುಕಿದರೂ ಮೃತ ದೇಹ ಪತ್ತೆಯಾಗಿಲ್ಲ.
ತಾಲೂಕಿನ ಶ್ರವಣಬೆಳಗೊಳ ಹೋಬಳಿ ಹೊಸಹಳ್ಳಿ ಗ್ರಾಮ ಬಳಿ ಹೇಮಾವತಿ ನಾಲೆಯಲ್ಲಿ 18 ದಿವಸದ ನಂತರ ಮೃತ ದೇಹ ಪತ್ತೆಯಾಗಿದೆ, ಶ್ರವಣಬೆಳಗೊಳ ಠಾಣೆಯ ಪೊಲೀಸರು ಮೃತ ದೇಹವನ್ನು ಮರಣೊತ್ತರ ಪರೀಕ್ಷೆ ಮಾಡಿ ಮೃತರ ಮಡದಿ ಮಂಗಳಮ್ಮ, ಪುತ್ರ ಸುನಿಲ್‌ಕುಮಾರ್, ಪುತ್ರಿ ಸುನಿತಾರಿಗೆ ಮೃತ ದೇಹ ಹಸ್ತಾಂತರ ಮಾಡಿ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Unable to bear the burden of debt, a farmer from D. Chikkagondanahalli village in Channarayapatna taluk committed suicide by jumping into a canal.










