ಹಾಸನ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಸನ ಜಿಲ್ಲಾ ಘಟಕದ ವತಿಯಿಂದ ನಗರದ ಶ್ರೀ ಶಿವಲಿಂಗೇಶ್ವರ ಕಲ್ಯಾಣ ಮಂಟಪ ತಣ್ಣೀರುಹಳ್ಳ ಮಠದಲ್ಲಿ ಮಾಜಿ ಸಚಿವ ಹಾಗೂ ಮಹಾಸಭಾದ ಮಾಜಿ ರಾಷ್ಟ್ರೀಯ ಅದ್ಯಕ್ಷ ಭೀಮಣ್ಣಖಂಡ್ರೆ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಮಾಜಿ ಸಚಿವ ದಿ.ಭೀಮಣ್ಣ ಖಂಡ್ರೆ ಅವರಿಗೆ ಶನಿವಾರ ಶ್ರದ್ಧಾಂಜಲಿ ಸಲ್ಲಿಸಿ ಭಾವಚಿತ್ರಕ್ಕೆ ಪೂಜೆ ಗೌರವ ಅರ್ಪಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ಎರಡು ನಿಮಿಷಗಳ ಮೌನ ಆಚರಣೆ ಮಾಡಲಾಯಿತು.
ಜವೇನಹಳ್ಳಿ ಮಠದ ಮಠಾಧೀಶ ಶ್ರೀ ಸಂಗಮೇಶ್ವರ ಸ್ವಾಮೀಜಿ ಮಾತನಾಡಿ, ಭೀಮಣ್ಣ ಖಂಡ್ರೆ ಸಿದ್ಧಾಂತಗಳಿಗೆ ಬದ್ಧರಾಗಿದ್ದ ರಾಜಕಾರಣಿ, ಹೋರಾಟಗಾರ ಹಾಗೂ ಶ್ರೇಷ್ಠ ನಾಯಕರಾಗಿದ್ದರು. ತಮ್ಮ ಸಂಪೂರ್ಣ ಜೀವನ ಸಮಾಜ ಸೇವೆಗೆ ಅರ್ಪಿಸಿದ್ದರು. ಯಶಸ್ವಿ ಹಾಗೂ ಸಾರ್ಥಕ ಜೀವನ ನಡೆಸಿದ ಮಹಾನ್ ವ್ಯಕ್ತಿಯಾಗಿದ್ದರು ಎಂದು ಗುಣಗಾನ ಮಾಡಿದರು.
ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಸಮಿತಿಯ ಸದಸ್ಯರಾದ ಶ್ರೀಮತಿ ಚಂದ್ರಕಲಾ ಮಾತನಾಡಿ, ಸಮಾಜದ ವಿರುದ್ಧ ಯಾರೇ ಮಾತನಾಡಿದರೂ ಅದನ್ನು ತೀವ್ರವಾಗಿ ಖಂಡಿಸುತ್ತಿದ್ದ ಭೀಮಣ್ಣ ಖಂಡ್ರೆ, ಹಾವನೂರ ವರದಿಯನ್ನು ಪ್ರಶ್ನಿಸಿದ್ದರು.ರಾಜ್ಯದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಸಂಘಟನೆಗೆ ಹೆಚ್ಚಿನ ಮಹತ್ವ ನೀಡಿದ್ದರು.
ಹುಟ್ಟು ಹೋರಾಟಗಾರ ಭೀಮಣ್ಣ ಖಂಡ್ರೆಯವರ ಬದುಕಿನ ಹೆಜ್ಜೆಗಳು ಈ ಮಣ್ಣಿನಲ್ಲಿ ಚಿರಸ್ಥಾಯಿ ಸ್ಮರಿಸಿದರು.
ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭೆಗೆ ತಮ್ಮದೇ ಆದ ಕೊಡುಗೆ ನೀಡಿದ್ದರು, ಸಮಾಜ ಇಭ್ಬಾಗವಾಗುವುದನ್ನು ವಿರೋಧಿಸಿದ್ದರು ಎಂದು ಜಿಲ್ಲಾಧ್ಯಕ್ಷ ನವಿಲೆ ಪರಮೇಶ್ ಸ್ಮರಿಸಿದರು.

ಮಹಾಸಭಾ ರಾಷ್ಟ್ರೀಯ ಕಮಿಟಿ ಸದಸ್ಯ ಎಸ್ಎಚ್ ರಾಜಶೇಖರ್, ಎಸ್ ಎನ್ ಈಶ್ವರಪ್ಪ, ಯುವ ಘಟಕದ ರಾಜ್ಯ ಕಾರ್ಯದರ್ಶಿ ವಿಕ್ರಮ್ ಕೌರಿ, ಕವಿತ, ಶಿವಕುಮಾರ್ ಎಚ್.ಪಿ, ನಾಗರತ್ನ, ಯಶೋಧ ಹಿರಿವಾಟೆ, ಸುಧಾ ವಿನೋದ್, ಅನೂಪ್ , ಪ್ರಧಾನ ಕಾರ್ಯದರ್ಶಿ ರವಿ ಕುಮಾರ್, ಜಯಶಂಕರ್ ಶರತ್ ಭೂಷಣ್, ಗೀತಾ, ಹಾಗೂ ಯುವ ಘಟಕದ ಜಿಲ್ಲಾಧ್ಯಕ್ಷರಾದ ಅವಿನಾಶ್ ಜಿ.ಎಸ್ ಚಂದ್ರಶೇಖರ್ ಕೆ.ಕೆ, ಬೇಲೂರು ತಾಲ್ಲೂಕು ಅಧ್ಯಕ್ಷರಾದ ಅಡಗೂರು ಬಸವರಾಜು, ಆಲೂರು ತಾಲೂಕು ಅಧ್ಯಕ್ಷರಾದ ಅಜಿತ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಕೆ ಎಮ್ ಚಂದ್ರಮತಿ, ಶಶಿಕಲಾ ಲೋಕೇಶ್, ಗೀತಾ ಮಹೇಶ್ ಹಾಗೂ ತಾಲ್ಲೂಕು ಘಟಕದ ಮಹಿಳಾ ಅಧ್ಯಕ್ಷರಾದ ಮಮತಾ ಪಾಟೀಲ್, ವಿಜಯ್ ಕುಮಾರ್, ಮನೋಜ್ ಎಚ್ ಸಿ, ಶರತ್, ಮಂಜುದೇವ್, ದಿಲೀಪ್, ಸಿದ್ದೇಶ್, ನಾಗೇಂದ್ರ, ಪ್ರವೀಣ್, ನಿರಂಜನ್ ಹಾಗೂ ಸಮಾಜದ ಪ್ರಮುಖರು ಭಾಗವಹಿಸಿದ್ದರು.










