7.2 C
Munich
Home ಮನರಂಜನೆ ‘ತಿಥಿ’ ಸಿನಿಮಾ ಖ್ಯಾತಿಯ ‘ಗಡ್ಡಪ್ಪ’ ಚನ್ನೇಗೌಡ ಇನ್ನಿಲ್ಲ

‘ತಿಥಿ’ ಸಿನಿಮಾ ಖ್ಯಾತಿಯ ‘ಗಡ್ಡಪ್ಪ’ ಚನ್ನೇಗೌಡ ಇನ್ನಿಲ್ಲ

'ತಿಥಿ' ಸಿನಿಮಾ ಖ್ಯಾತಿಯ 'ಗಡ್ಡಪ್ಪ' ಚನ್ನೇಗೌಡ ಇನ್ನಿಲ್ಲ

ರಾಮರೆಡ್ಡಿ ನಿರ್ದೇಶನದಲ್ಲಿ 2016ರಲ್ಲಿ ತೆರೆಕಂಡಿದ್ದ ‘ತಿಥಿ’ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿತ್ತು. ಕಥಾವಸ್ತು ಮತ್ತು ನಿರೂಪಣೆಯ ದೃಷ್ಟಿಯಿಂದ ಇದು ಕನ್ನಡದ ಮೈಲುಗಲ್ಲುಗಳಲ್ಲೊಂದು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದ ಸಿನಿಮಾದ ಪ್ರಮುಖ ಪಾತ್ರ ‘ಗಡ್ಡಪ್ಪ’ನಾಗಿ ನಟಿಸಿದ್ದ ಚನ್ನೇಗೌಡ (89 ವರ್ಷ) ಅವರು ಇಂದು (ನವೆಂಬರ್‌ 12) ಅಗಲಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಮಂಡ್ಯ ಜಿಲ್ಲೆಯ ತಮ್ಮ ಸ್ವಗ್ರಾಮ ನೊದೆಕೊಪ್ಪಲಿನಲ್ಲಿ ಕೊನೆಯುಸಿರೆಳೆದಿದ್ದಾರೆ. ‘ತಿಥಿ’ ಸಿನಿಮಾದ ಗಡ್ಡಪ್ಪ ಪಾತ್ರದಲ್ಲಿ ಅವರ ನಟನೆಯನ್ನು ಇಂದಿಗೂ ಜನ ನೆನಪಿಸಿಕೊಳ್ಳುತ್ತಾರೆ. ಈ ಸಿನಿಮಾದ ಜನಪ್ರಿಯತೆ ನಂತರ ಅವರು ತರ್ಲೆ ವಿಲೇಜ್‌, ಹಳ್ಳಿ ಪಂಚಾಯಿತಿ, ಜಾನಿ ಮೇರಾ ನಾಮ್‌ ಸೇರಿದಂತೆ ಎಂಟು ಸಿನಿಮಾಗಳಲ್ಲಿ ನಟಿಸಿದ್ದಾರೆ.

error: Content is protected !!