ಹಾಸನ: ಈ ಬಾರಿಯ ದೀಪಾವಳಿ ಹಬ್ಬದ ಪಟಾಕಿ ಸ್ಟಾಲ್‌ಗಳನ್ನು ನಗರದ ಚನ್ನಪಟ್ಟಣದ ಕೆರೆ ಬಸ್ ನಿಲ್ದಾಣದ ಬದಲು, ಎಸ್.ಎಸ್.ಕೃಷ್ಣ ನಗರಕ್ಕೆ ಸ್ಥಳಾಂತರಿಸಲಾಗಿದೆ. ಯಾರಿಗೂ ಯಾವುದೇ ರೀತಿಯ ತೊಂದರೆ ಆಗದಂತೆ ವ್ಯವಸ್ಥೆ ಮಾಡಿದ್ದು, ಎಲ್ಲರೂ ತಮಗೆ ಒಪ್ಪುವ ಪಠಾಕಿ ಖರೀದಿ ಮಾಡುವ ಮೂಲಕ ಪ್ರೋತ್ಸಾಹ ನೀಡುವಂತೆ ಹಾಸನಾಂಬ ಪಟಾಕಿ ವರ್ತಕರ ಸಂಘದ ಅಧ್ಯಕ್ಷ ಮಂಜುನಾಥ್ ಮನವಿ ಮಾಡಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅರಸೀಕೆರೆ ರಸ್ತೆಗೆ ಹೊಂದಿಕೊಂಡಂತೆ ಒಟ್ಟು 55 ಮಳಿಗೆಗಳನ್ನು ತೆರೆಯಲಾಗಿದೆ. ಡಿಸಿ ಸೂಚನೆ ಮೇರೆಗೆ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಎಲ್ಲ ಕ್ರಮ ಕೈಗೊಳ್ಳಲಾಗಿದೆ ಎಂದರು.
ಅಕಸ್ಮಾತ್ ಪಟಾಕಿ ಅವಘಡ ಸಂಭವಿಸದಂತೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ಅನುಸರಿಸಲಾಗಿದೆ. ಹಾಗಾಗಿ ಹೆಚ್ಚು ಹೆಚ್ಚು ಜನರು ಆಗಮಿಸಿ ತಮಗೆ ಇಷ್ಟವಾಗುವ ಪಠಾಕಿ ಖರೀದಿಸಿ ಎಂದು ವಿನಂತಿಸಿದರು. ಪತ್ರಿಕಾಗೋಷ್ಟಿಯಲ್ಲಿ ನಿಖಿಲ್ ಮತ್ತು ರಾಜಣ್ಣ ಇದ್ದರು.










