ಬೇಲೂರು: ಹೊಸಪೇಟೆ ಬಳಿ ಬೈಕ್–ಜೀಪ್ ಮುಖಾಮುಖಿ ಡಿಕ್ಕಿ : ಸ್ಥಳದಲ್ಲೇ ಯುವಕ ಸಾ**

The tragic incident occurred on Monday morning when a jeep coming from the opposite direction hit the bike on which two youths from Hirehasade village in Arehalli hobli of the taluk were riding near Hospet.

ಬೇಲೂರು: ತಾಲೂಕಿನ ಅರೇಹಳ್ಳಿ ಹೋಬಳಿಯ ಹಿರೇಹಸಡೆ ಗ್ರಾಮದ ಇಬ್ಬರು ಯುವಕರು ಪ್ರಯಾಣಿಸುತ್ತಿದ್ದ ಬೈಕ್‌ಗೆ ಹೊಸಪೇಟೆ ಬಳಿ ಎದುರು ಬಂದ ಜೀಪ್ ಡಿಕ್ಕಿ ಹೊಡೆದ ಪರಿಣಾಮ ದುರಂತ ಸಂಭವಿಸಿದ ಘಟನೆ ಸೋಮವಾರ ಮುಂಜಾನೆ ಸಂಭವಿಸಿದೆ.

ಮೃತ ಯುವಕನನ್ನು ಚಂದನ್ (27) ಎಂದು ಗುರುತಿಸಲಾಗಿದ್ದು, ಮತ್ತೊಬ್ಬ ಗಾಯಾಳುವಾದ ಭರತ್ ಗಂಭೀರ ಗಾಯಗಳಾಗಿದ್ದು ಅವರನ್ನು ತಕ್ಷಣವೇ ಹಾಸನದ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ರವಾನಿಸಲಾಗಿದೆ.

ಮಾಹಿತಿಯ ಪ್ರಕಾರ, ಚಂದನ್ ಹಾಗೂ ಭರತ್ ಬೇಲೂರಿನಲ್ಲಿ ತಮ್ಮ ಕೆಲಸ ಮುಗಿಸಿಕೊಂಡು ಬೈಕ್‌ನಲ್ಲಿ ಸ್ವಗ್ರಾಮ ಹಿರೇಹಸಡೆ ಕಡೆಗೆ ಮರಳುತ್ತಿದ್ದಾಗ ಹೊಸಪೇಟೆ ಬಳಿ ಬಂದಾಗ ಎದುರಿನಿಂದ ಬಂದ ಜೀಪ್ ನಿಯಂತ್ರಣ ತಪ್ಪಿ ಅವರ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಬಲಕ್ಕೆ ಚಂದನ್ ಸ್ಥಳದಲ್ಲೇ ಮೃತಪಟ್ಟಿದ್ದು, ಭರತ್ ರಸ್ತೆಯ ಬದಿಗೆ ಬಿದ್ದ ಪರಿಣಾಮ ತೀವ್ರ ಗಾಯಗೊಂಡಿದ್ದಾರೆ.

ಅಪಘಾತ ಸಂಭವಿಸಿದ ಬಳಿಕ ಸ್ಥಳೀಯರು ತಕ್ಷಣ ನೆರವಿಗೆ ಧಾವಿಸಿ, ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ಸಹಕಾರ ಒದಗಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಅಪಘಾತ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.